ಲೀಫ್ ,ಗ್ಲಾಸ್ ಆರ್ಟ್ಸ್ ನಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ -ರಕ್ಷಿತ್ ಪೂಜಾರಿ

ಜಾಹೀರಾತು/Advertisment
ಜಾಹೀರಾತು/Advertisment

 


ಕಲೆ ಎಂಬುದು ಎಲ್ಲರಿಗೂ ಒಲಿಯುವಂತಹ ವಿದ್ಯೆಯಲ್ಲ, ಕಲೆಯ ಬಗ್ಗೆ ಶ್ರದ್ಧೆ, ಭಕ್ತಿ, ಆಸಕ್ತಿಯನ್ನು ಹೊಂದಿರುವವರಿಗೆ ಮಾತ್ರ ಒಬ್ಬ ಕಲಾವಿದನಾಗಲು ಸಾಧ್ಯ. ಅಂತಹ ಕಲೆಯನ್ನು ಮೈಗೂಡಿಸಿಕೊಂಡಿರುವ 

ಇವರು ಪೆನ್ಸಿಲ್ ಆರ್ಟ್ ಸೇರಿದಂತೆ ಗ್ಲಾಸ್ ಆರ್ಟ್ ಬಿಡಿಸುವುದರಲ್ಲಿ ಎಕ್ಸ್ ಫರ್ಟ್‌ ಕೈಯಲ್ಲಿ ಪೆನ್ಸಿಲ್  ಹಿಡಿದು ಚಿತ್ರ ಬಿಡಿಸಲು ಆರಂಭಿಸಿದರೆ ಅದಕ್ಕೆ ಜೀವ ತುಂಬಿರುವಂತೆ ಭಾಸವಾಗುವುದರಲ್ಲಿ ಸಂಶಯವಿಲ್ಲ. ಯಾರು ಈ ಕಲಾವಿದ ಅಂತಿರಾ? ಅವರೇ ರಕ್ಷಿತ್ ಪೂಜಾರಿ ಹಿರೇಬಂಡಾಡಿ. 

 ಇವರು ಉಪ್ಪಿನಂಗಡಿ ಹಿರೇಬಂಡಾಡಿಯ ಹರೀಶ್ ಪೂಜಾರಿ ಹಾಗೂ ಸವಿತಾ ದಂಪತಿಯ ಪುತ್ರನಾಗಿ ಜನಿಸಿ, ತಮ್ಮ ಎಳೆ ವಯಸ್ಸಿನಲ್ಲೇ ಚಿತ್ರಕಲೆಯ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದು, ಅದನ್ನೇ ತನ್ನ ಗುರಿಯಾಗಿರಿಸಿಕೊಂಡ ರಕ್ಷಿತ್ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಶಾಲೆ ಹಿರೇಬಂಡಾಡಿಯಲ್ಲಿ ಮುಗಿಸಿ, ತಾನು ಹೆಚ್ಚು ಆಸಕ್ತಿಯನ್ನು ಹೊಂದಿರುವ ಚಿತ್ರಕಲೆ ವಿದ್ಯೆಯನ್ನು ಕಲಿಯಬೇಕನ್ನುವ ನಿಟ್ಟಿನಲ್ಲಿ ಪದವಿ ಶಿಕ್ಷಣವನ್ನು ಮಹಾಲಸ ಕಾಲೇಜು ಮಂಗಳೂರು ಇಲ್ಲಿ ಬಿ.ವಿ.ಎ(ಬ್ಯಾಚುರಲ್ ಆಫ್ ಏಷುವಲ್ ಆರ್ಟ್ಸ್)ನಲ್ಲಿ ಇದೀಗ ಪದವಿ ತರಗತಿಯನ್ನು ಕಲಿಯುತ್ತಿದ್ದಾರೆ.


ರಕ್ಷಿತ್ ಗ್ಲಾಸ್  ಆರ್ಟ್‌ನಿಂದ ದೇವರು, ಸಿನಿ ದಿಗ್ಗಜರು ಸೇರಿದಂತೆ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳ ಚಿತ್ರವನ್ನು ಬಿಡಿಸಿ ಭೇಷ್ ಎನಿಸಿಕೊಂಡಿದ್ದರೆ. ಅಷ್ಟೇ ಅಲ್ಲದೇ ವಿಶೇಷವೆಂದರೆ ಅಶ್ವಥ ಮರದ ಎಲೆಯಿಂದಲೂ ಚಿತ್ರ ಬಿಡಿಸುವ ನೈಪುಣ್ಯತೆಯನ್ನು ಹೊಂದಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಸೇರಿದಂತೆ ಸಾಮಾನ್ಯ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜ ಹಾಗೂ ನರೇಂದ್ರ ಮೋದಿ ಜೊತೆಗಿರುವ ಚಿತ್ರವನ್ನು ಗ್ಲಾಸ್ ಆರ್ಟ್‌ನಿಂದ ಬಿಡಿಸಿ ಶಾಸಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಇವರಿಗೆ ದೇಶಿಯ ಜನರಿಂದ ಮಾತ್ರವಲ್ಲದೇ ವಿದೇಶಿಗರು ಬಂದು ತಮ್ಮ ಚಿತ್ರ ಬಿಡಿಸಿ ಕೊಡುವಂತೆ ಆರ್ಡರ್ ಮಾಡಿರುತ್ತಾರೆ. ಚಿತ್ರಗಳ ಆರ್ಡ‌ರ್ ನಿಂದ ಬಂದ ಮೊತ್ತವನ್ನು ತಮ್ಮ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುತ್ತಾರೆ. 

ಮನೆಗೆ ತಮ್ಮ ವಿದ್ಯಾಭ್ಯಾಸದ ಹೊರೆ ಬೀಳದಂತೆ ಕಲಿತಿರುವ ವಿದ್ಯೆಯಿಂದಲೇ ದುಡಿಮೆ ಮಾಡಿ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಚಿತ್ರಕಲೆ ಕಲಿಯಬೇಕೆಂದು ಆಸಕ್ತಿ ವ್ಯಕ್ತಪಡಿಸಿದಾಗ ಪೋಷಕರಿಂದ ಏನೂ ಒತ್ತಾಡವಿರಲಿಲ್ಲ ಇಂತಹ ವಿದ್ಯೆಯನ್ನೇ ಕಲಿಯಬೇಕೆಂದಿರಲಿಲ್ಲ, ಇವರ ಸ್ವ ಅಭಿರುಚಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. 

ರಕ್ಷಿತ್‌ಗೆ ಚಿತ್ರಕಲೆ ಕಾಯಲು ಸ್ಫೂರ್ತಿಯಾದವರು ಅವರ ಗುರುಗಳಾದ ಅನಿಲ್ ಕುಮಾರ್, ಚಿತ್ರಕಲೆಯಲ್ಲಿ ವಿವಿಧ ಭಾಗಗಳಾದ ಪೆನ್ಸಿಲ್  ಶೇಡಿಂಗ್, ಲಿಫ್ ಆರ್ಟ್ಸ್, ಗ್ಲಾಸ್ ಆರ್ಟ್ಸ್ ಸೇರಿದಂತೆ ಇನ್ನಿತರ ರೈತರ ಚಿತ್ರಗಳನ್ನು ಬಿಡಿಸಿ ಶಹಭಾಸ್ ಎನಿಸಿಕೊಂಡಿದ್ದು, ಇನ್ನೂ ಚಿತ್ರಕಲೆಯ ವಿವಿಧ ಆಯಾಮಗಳನ್ನು ಕಲಿಯಬೇಕೆಂಬುದು ಇವರ ಕನಸಾಗಿದ್ದು, ಚಿತ್ರಕಲೆಯಲ್ಲಿ ಎಷ್ಟೇ ಕಲಿತರೂ ಮುಗಿಯಲಾರದ ಅಧ್ಯಯವೆಂಬುದು ಇವರ ಅನಿಸಿಕೆ. ಹಾಗಾಗಿ ಚಿತ್ರಕಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆಗೆಯಬೇಕೆಂದಿರುವ ಇವರ ಕನಸು ನನಸಾಗಲಿ ಎಂದು  ಹಾರೈಸೋಣ.





Post a Comment

0 Comments