ಮೂಡುಬಿದಿರೆ ನಗರದಲ್ಲಿ ಇದೇ ತಿಂಗಳ 27 ರಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಅರ್ಧ ದಿನ ಪ್ರವಾಸ ಕೈಗೊಳ್ಳಲಿದ್ದಾರೆ. ಮಂಗಳೂರು ಮೂಲಕ ಮೂಡುಬಿದಿರೆಗೆ ಆಗಮಿಸಿ ಸಾವಿರ ಕಂಬದ ಬಸದಿ ಭೇಟಿ, ಕಲ್ಲಬೆಟ್ಟು ಎಕ್ಷಲೆಂಟ್ ಕಾಲೇಜಿನಲ್ಲಿ ನೂತನ ಕಟ್ಟಡ ಉದ್ಘಾಟನೆ ನಡೆಸಿಕೊಡಲಿದ್ದಾರೆ. 10 ಕೋಟಿ ರೂ ವೆಚ್ಚದ ನೂತನ ತಾಲೂಕು ಆಡಳಿತ ಸೌಧ ಸೇರಿದಂತೆ 25 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, 4 ಕೋಟಿ ಮೊತ್ತದ ಪ್ರವಾಸಿ ಬಂಗಲೆ ಸಹಿತ ಒಟ್ಟು 370 ಕೋಟಿ ರೂಪಾಯಿ ಪ್ರಗತಿ ಕಾರ್ಯಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಶಾಸಕ ಉಮಾನಾಥ್ ಕೋಟ್ಯಾನ್ ಈಗಾಗಲೇ ಮುಖ್ಯಮಂತ್ರಿ ಪ್ರವಾಸಕ್ಕೆ ಪೂರಕ ಸಿದ್ಧತೆ ನಡೆಸಿದ್ದಾರೆ.
0 Comments