ರಸ್ತೆ ರಗಳೆ:ಸಚಿವ ಕೋಟ,ಶಾಸಕ ರಘುಪತಿ ಭಟ್ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಸಹಿತ ಸಾಮಾಜಿಕ ಮುಖಂಡರು

ಜಾಹೀರಾತು/Advertisment
ಜಾಹೀರಾತು/Advertisment

 


ಉಡುಪಿ ವಿಧಾನಸಭಾ ಕ್ಷೇತ್ರದ ಕರ್ಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಬೈಲು ಪೆರ್ಡೂರು- ಸಂಪರ್ಕ ರಸ್ತೆ, ಕರ್ಜೆ ಮಹಾಲಿಂಗೇಶ್ವರ ಹೌಸ್ ಸೈಟ್ ಹಾಗೂ ಪರಿಶಿಷ್ಟ ಪಂಗಡ ಮನೆಗಳ ಸಂಪರ್ಕ ಮಾಡಲು TSP ಯೋಜನೆಯಲ್ಲಿ  ಸರಕಾರದಿಂದ ಎರಡು ಕೋಟಿ  ಮಂಜೂರು ಆಗಿದ್ದು; ಅದರ ಕೆಲಸ ಭರದಿಂದ ನಡೆಯುತ್ತಿತ್ತು. ಈ ಸಂದರ್ಭದಲ್ಲಿ  ರಸ್ತೆ ಕಾಮಗಾರಿ ವಿರೋಧಿಸಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಕೆ ರಘುಪತಿ ಭಟ್ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ವೀಡಿಯೋ ಮಾಡಿದ್ದ ಜಯಕರ ನಾಯ್ಕ ಸಂತೇಕಟ್ಟೆ ಮತ್ತು ಶೇಖರ ಹಾವಂಜೆ ರವರ ವಿರುದ್ಧ ಅದೇ ಊರಿನ ಹೊಸೂರು ಗ್ರಾಮದ ಗ್ರಾಮಸ್ಥರು ಪಕ್ಷ ಬೇಧ ಮರೆತು ಪ್ರತಿಭಟಿಸಿದ ಘಟನೆ ಉಡುಪಿಯ ಹೊಸೂರಿನಲ್ಲಿ ನಡೆದಿದೆ. ರಸ್ತೆ ನಿರ್ಮಾಣದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ರಘುಪತಿ ಭಟ್ ರವರುಗಳು ಅಕ್ರಮ ಎಸಗಿದ್ದು ಇದರಲ್ಲಿ ಭ್ರಷ್ಟಾಚಾರಚಾಗಿದೆ ಎಂದು ವೀಡಿಯೋ ಮಾಡಿ ಆರೋಪಿಸಲಾಗಿತ್ತು. ಇದರಿಂದ ಸಿಡಿದೆದ್ದ ಗ್ರಾಮಸ್ಥರು ಪಕ್ಷಾತೀತವಾಗಿ ವೀಡಿಯೋ ಮಾಡಿದ್ದ ಜಯಕರ ಹಾಗೂ ಶೇಖರ ಹಾವಂಜೆ ವಿರುದ್ಧ ಪ್ರತಿಭಟಿಸಿದ್ದಾರೆ.

 ಪರಿಶಿಷ್ಟ ಪಂಗಡದ ಜನರು ವಾಸ ಮಾಡುವ ಪ್ರದೇಶಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ 2 ಕೋಟಿ ಅನುದಾನವನ್ನು ಶಾಸಕ ಕೆ ರಘುಪತಿ ಭಟ್ ಶಿಫಾರಸ್ಸಿನ ಮೇರೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಜೂರುಗೊಳಿಸಿದ್ದರು.

ಸಚಿವರು ಹಾಗೂ ಶಾಸಕರ ವಿರುದ್ಧದ ವೀಡಿಯೋ ವೈರಲ್ ಆದ ಕೂಡಲೇ ಇದರ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟಿಸಿದ್ದು ಮಾತ್ರವಲ್ಲದೆ ಅತಿ ಶೀಘ್ರದಲ್ಲಿ ರಸ್ತೆ ಕಾಮಗಾರಿ ಮುಗಿಸುವಂತೆ ಸರ್ಕಾರವನ್ನು ಕೋರಿದ್ದಾರೆ. ಅಚ್ಚರಿಯೆಂದರೆ ಆಡಳಿತಾರೂಢ ಬಿಜೆಪಿ ಸಚಿವರು ಹಾಗೂ ಶಾಸಕರ ಪರವಾಗಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಸಹಿತ ಅನೇಕ ರಾಜಕೀಯ ಪಕ್ಷಗಳ ಪ್ರಮುಖರು, ಮರಾಠಿ ಸಮಾಜದ ಪ್ರಮುಖರು ಸರ್ಕಾರದ ಬೆನ್ನಿಗೆ ನಿಂತಿದ್ದು; ಅಭಿವೃದ್ಧಿಯ ವಿಚಾರದಲ್ಲಿ ನಾವು ಸಚಿವ ಶಾಸಕರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

Post a Comment

0 Comments