ಏಪ್ರಿಲ್ 14 ರಂದು ಮಹಾವೀರ ಸ್ವಾಮಿಯ ಆಕರ್ಷಕ ಮೆರವಣಿಗೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ಹಾಗೂ ಜೈನಕಾಶಿ ಮತ್ತು ಪರಿಸರದ ಎಲ್ಲಾ ಗ್ರಾಮಗಳ ಸಮಸ್ತ ಶ್ರಾವಕರ ಸಹಕಾರದೊಂದಿಗೆ ಮಹಾವೀರ ಸ್ವಾಮಿಯ ಶ್ರದ್ಧಾ ಭಕ್ತಿಯ ಆಕರ್ಷಕ ಮೆರವಣಿಗೆಯನ್ನು  ಇದೇ ಬರುವ ಗುರುವಾರ ಸಂಜೆ  6 ಗಂಟೆಗೆ ಸರಿಯಾಗಿ ಶ್ರದ್ಧಾ ಭಕ್ತಿಯ ಆಕರ್ಷಕ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನಮಿರಾಜ್ ಜೈನ್ ತಿಳಿಸಿದರು.

 ಅವರು ಇಂದು ಮೂಡುಬಿದಿರೆ ಪ್ರೆಸ್ ಕ್ಲಬ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಅಭಯಚಂದ್ರ ಜೈನ್ ವಹಿಸಲಿದ್ದು, ಗುಣಪಾಲ್ ಕಡಬ ಮುಖ್ಯ ಅತಿಥಿ ಹಾಗೂ ಮಾರ್ಗದರ್ಶಕರಾಗಿ ಜಯರಾಜ್ ಕಂಬ್ಳಿ ಪೆರಿಂಜೆ ಗುತ್ತು ಮತ್ತಿರರ ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದು, ಮಹಾವೀರ ಭವನದಿಂದ ಬೆಟ್ಕೇರಿಯಾಗಿ ಸಾವಿರ ಕಂಬದ ಬಸದಿಯವರೆಗೆ ಸಂದೇಶವನ್ನು ಸಾರುವಂತಹ ಟ್ಯಾಬ್ಲೋಗಳೊಂದಿಗೆ ಮೂಡುಬಿದಿರೆಯ ವಿಶೇಷ ಮೆರವಣಿಗೆಯು ನಡೆಯಲಿದೆ ಎಂದು ತಿಳಿಸಿದರು. 

ಜಯರಾಜ್ ಕಂಬ್ಲಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments