ಬೆಂಗಳೂರು: ಗ್ರಾಮೀಣ ಮಟ್ಟದಲ್ಲಿರುವ ಅಸ್ಪ್ರೃಶ್ಯತೆಯನ್ನು ಹೋಗಲಾಡಿಸುವ ಸಲುವಾಗಿ ಸಾಮರಸ್ಯ ಅರಿವು ಎಂಬ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರ್ಯಕ್ರಮಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅಸ್ಪ್ರೃಶ್ಯತೆ ಪದ್ಧತಿ ವಿರುದ್ಧ ಹೋರಾಡುವ ಗ್ರಾಮ ಪಂಚಾಯತ್ ಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಲಿದೆ ಎಂದಿದ್ದಾರೆ.
ನಿನ್ನೆ ಸದನದಲ್ಲಿ ಬಜೆಟ್ ಮೇಲಿನ ಕಲಾಪ ವೇಳೆ ಉತ್ತರಿಸಿದ ಕೋಟ ಶ್ರೀನಿವಾಸ ಪೂಜಾರಿಯವರು 2021 ಸೆಪ್ಟೆಂಬರ್ ನ ಘಟನೆಯನ್ನು ಪ್ರಸ್ತಾಪಿಸಿದರು. ಕುಷ್ಠಗಿ ತಾಲ್ಲೂಕಿನ ಮಿಯಾಪುರ್ ಗ್ರಾಮದ ದೇವಸ್ಥಾನವೊಂದರ ಆವರಣಕ್ಕೆ ಎರಡು ವರ್ಷದ ದಲಿತ ಜಾತಿಯ ವಿನಯ್ ಎಂಬ ಮಗು ಹೋಗಿದ್ದರಿಂದ, ಮಗುವಿನ ಕುಟುಂಬಸ್ಥರಿಗೆ ಹೊಡೆದಿದ್ದಲ್ಲದೆ 25 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು.
ಈ ಘಟನೆಗೆ ವ್ಯಾಪಕ ಖಂಡನೀಯ. ಈ ಬಗ್ಗೆಯೂ ಸಮಾಜದ ವಿವಿಧ ವರ್ಗದ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ವಿನಯ್ ನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಸರ್ಕಾರ ಭರಿಸುವುದಾಗಿ ಸಚಿವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಆ ಮಗು ದೊಡ್ಡವನಾದ ಮೇಲೆ ಯಾವುದೇ ಶಿಕ್ಷಣ ಕಲಿಯುವುದಿದ್ದರೂ ಸರ್ಕಾರವೇ ಭರಿಸಲು ಸಿದ್ಧವಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ನಿನ್ನೆ ಸದನದಲ್ಲಿ ಹೇಳಿದರು.
ಈ ಪದ್ಧತಿ ರಾಜ್ಯದ ಹಲವು ಕಡೆಗಳಲ್ಲಿದ್ದು ವಿನಯ್ ನ ಹೆಸರಿನಲ್ಲಿ ಇನ್ನು ಮುಂದೆ ರಾಜ್ಯ ಸರ್ಕಾರ ವಿನಯ ಸಾಮರಸ್ಯ ಕಾರ್ಯಕ್ರಮವನ್ನು ಆರಂಭಿಸಲಿದೆ. ಇದನ್ನು ಪಂಚಾಯತ್ ಮಟ್ಟದಲ್ಲಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
0 Comments