ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಿರ್ಬಂಧ ವಿವಾದ ಹಿನ್ನೆಲೆ: ನಾಡಿನ ಚಿಂತಕರಿಂದ ಸಿಎಂ ಬೊಮ್ಮಾಯಿಗೆ ಪತ್ರ

ಜಾಹೀರಾತು/Advertisment
ಜಾಹೀರಾತು/Advertisment

 


ಬೆಂಗಳೂರು: ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು ಹೊರಬಂದ ನಂತರ ಕರಾವಳಿ-ಮಲೆನಾಡು ಭಾಗಗಳಲ್ಲಿ ಹಿಂದೂ-ಮುಸ್ಲಿಂ ವ್ಯಾಪಾರ ವಿವಾದ, ಮುಸ್ಲಿಮರ ಅಂಗಡಿಗಳಿಗೆ ಹಿಂದೂಗಳು ಹೋಗಿ ಖರೀದಿಸಬಾರದು ಎಂಬ ವಿಷಯ, ಶಾಲಾ ಪಠ್ಯಪುಸ್ತಕದಲ್ಲಿ ಟಿಪ್ಪು, ಭಗವದ್ಗೀತೆ ಸೇರ್ಪಡೆ ವಿಷಯಗಳು ಸಾಕಷ್ಟು ವಿವಾದ-ಗದ್ದಲವೆಬ್ಬಿಸುತ್ತಿದೆ.  

ಇದು ರಾಜ್ಯದಲ್ಲಿನ ಅನೇಕ ಚಿಂತಕರು, ಬುದ್ದಿಜೀವಿಗಳನ್ನು ಪ್ರಶ್ನೆ ಮಾಡುವಂತೆ ಮಾಡಿದೆ. ರಾಜ್ಯದ ಹಿರಿಯ ಬುದ್ದಿ ಜೀವಿಗಳು ಈ ಕುರಿತು ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದು,  ಭಗವದ್ಗೀತೆಯನ್ನು ಪಠ್ಯದಲ್ಲಿ  ಕೈಬಿಡುವಂತೆ   ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಜಾತ್ರೆಯಲ್ಲಿ  ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದ ಬಗ್ಗೆ ಕೆಲ ಹಿರಿಯ ಸಾಹಿತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೀಪಲ್ಸ್ ಯೂನಿಯನ್ಸ್ ನ ವಕೀಲರಿಂದ  ಇದನ್ನು ಪ್ರಶ್ನಿಸಿ ಕೋರ್ಟ್ ಗೆ ಹೋಗುವ ಚಿಂತನೆ ನಡೆಸುತ್ತಿದ್ದಾರೆ. ಇನ್ನು ಭಗವದ್ಗೀತೆಯನ್ನು ಪಠ್ಯದಲ್ಲಿ ಅನ್ವಯ ಮಾಡುವ ಬಗ್ಗೆಯೂ ಪತ್ರದಲ್ಲಿ ಆಕ್ಷೇಪ ಮಾಡಲಾಗಿದ್ದು,  ಮಕ್ಕಳಿಗೆ  ಭಗವದ್ಗೀತೆಗಿಂತ ಬೇಕಾಗಿರೋದು ಸಂವಿಧಾನ. ಅದನ್ನು ಓದಿಸಿ ಎಂದು ಕೆಲವು ಸಾಹಿತಿ, ಚಿಂತಕರು ಸಿಎಂಗೆ ಪತ್ರದಲ್ಲಿ ಒತ್ತಾಯಿಸಿದ್ದಾರೆ. 

ಹಿಜಾಬ್ ಧರಿಸಿ ಮಕ್ಕಳಿಗೆ ಪರೀಕ್ಷೆಗೆ ಅನುವು ಮಾಡಲು ಪತ್ರದಲ್ಲಿ ಒತ್ತಾಯ ಮಾಡಲಾಗಿದ್ದು, ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ಕೊಡದಂತೆ ಹೇಳುವ  ಕಾನೂನು ತಿದ್ದುಪಡಿ ಮಾಡಿ ಎಂದು ಒತ್ತಾಯಿಸಿದ್ದಾರೆ. ಸಾಹಿತಿಗಳಾದ ಡಾ ಕೆ. ಮರುಳ ಸಿದ್ಧಪ್ಪ, ಎಸ್ ಜಿ ಸಿದ್ದರಾಮಯ್ಯ, ಬೋಳುವಾರ್ ಮಹಮ್ಮದ್ ಕುಂಞ, ಬಂಜಗೆರೆ ಜಯಪ್ರಕಾಶ್, ರೆಹಮತ್ ತರಿಕೆರೆ ಸೇರಿದಂತೆ ಒಟ್ಟು 61 ಜನರಿಂದ ಪತ್ರಕ್ಕೆ ಸಹಿ ಹಾಕಲಾಗಿದೆ.

Post a Comment

0 Comments