ಇಸ್ಲಾಂ ಆದರ್ಶಗಳನ್ನು ಪಾಲಿಸುವವರು ಉಗ್ರವಾದಿಯಾಗಲು ಸಾಧ್ಯವಿಲ್ಲ- ಸಯ್ಯದ್ ಇಬ್ರಾಹಿಂ ಜುನೈದ್ ತಂಙಳ್

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಇಸ್ಲಾಂನ ಆದರ್ಶಗಳನ್ನು ಪಾಲಿಸುವವರು ತೀವ್ರವಾದಿ, ಉಗ್ರವಾದಿಯಾಗಲು ಸಾಧ್ಯವಿಲ್ಲ. ಬೇರೊಂದು ಧರ್ಮವನ್ನು ನಿಂದಿಸುವುದಿಲ್ಲ, ಇಸ್ಲಾಂನಲ್ಲಿ ಮನುಕುಲವನ್ನು ಗೌರವಿಸಿ, ಮಾನವೀಯತೆಯತೆಗೆ ಆದ್ಯತೆ ಕೊಟ್ಟು ಜೀವಿಸಿ ಎಂಬುದಾಗಿದೆ. ಎಂದು   ಬಾರ್ಕೂರು ಉಡುಪಿಯ ಸಯ್ಯದ್ ಇಬ್ರಾಹಿಂ ಜುನೈದ್ ತಂಙಳ್ ಹೇಳಿದರು.

ಅವರು ಶುಕ್ರವಾರ ಸಂಜೆ ಮನಾರುಲ್ ಹುದಾ ಜುಮ್ಮಾ ಮಸ್ಜಿದ್ ಎಲಿಯ , ಸಯ್ಯದ್ ಡಾ| ಅಬೂಬಕ್ಕರ್ ವಲಿಯುಲ್ಲಾಹಿ (ಖ.ಸಿ) ದರ್ಗಾ ಶರೀಫ್ ಎಲಿಯ ಪುಚ್ಚಮೊಗರು ಇರುವೈಲು ಉರೂಸ್ ಅಂಗವಾಗಿ ನಡೆದ ಸರ್ವಧರ್ಮ ಸೌಹಾರ್ದ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.

 ಸಯ್ಯದ್ ಡಾ| ಅಬೂಬಕ್ಕರ್ ವಲಿಯುಲ್ಲಾಹಿ (ಖ.ಸಿ) ದರ್ಗಾ ಶರೀಫ್ ಎಲಿಯ ಪುಚ್ಚಮೊಗರು ಇರುವೈಲು ಪುಣ್ಯಕ್ಷೇತ್ರಕ್ಕೆ ಸರ್ವಧರ್ಮಿಯರು ಬಂದು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದಾರೆ. ಈ ಪುಣ್ಯಕ್ಷೇತ್ರಕ್ಕೆ ಸಮಸ್ಯೆಗಳನ್ನು ಹೇಳಿಕೊಂಡು ಬಂದ ಜನರಿಗೆ ಜಾತಿ, ಮತ, ವರ್ಣಬೇಧ ಮಾಡದೇ ಅವರನ್ನು ಗೌರವಿಸಿ, ಪ್ರೀತಿಸಿ ಅವರಿಗೆ ಬೇಕಾದ ಸಹಕಾರವನ್ನು ನೀಡುತ್ತಾ ಬಂದಿದೆ. ಅದರಂತೆ ಹಿರಿಯರನ್ನು ಗೌರವಿಸಿ, ಕಿರಿಯರನ್ನು ಪ್ರೀತಿಯಿಂದ ಸರ್ವರನ್ನು ಸಹಬಾಳ್ವೆಯಿಂದ ಸಾಮರಸ್ಯದಿಂದ ಜೀವಿಸಬೇಕು ಎಂದರು.

 ಹೊಸಬೆಟ್ಟು ಚರ್ಚ್ನ ಪಾರಿಸ್ ಪ್ರೀಸ್ಟ್ ಹೋಲಿಕ್ರೋಸ್ ಚರ್ಚ್ನ ರೆ|ಪಾ|ಗ್ರೆಗರಿ ಡಿಸೋಜ ಮಾತನಾಡಿ, ಪೂಜಿಸುವ ದೇವರೊಬ್ಬನೇ ಎಲ್ಲಿ ಕರುಣೆ, ದಯೆ, ಶಾಂತಿ ತುಂಬಿರುತ್ತದೆಯೋ ಅಲ್ಲಿ ದೇವರು ನೆಲೆಸುತ್ತಾನೆ. ನಾವೆಲ್ಲರೂ ಪರಸ್ಪರ ಶಾಂತಿ, ಸಹಕಾರ -ಸೌಹರ್ದದಿಂದ ಬಾಳಿದರೆ ದೇವರ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ ಎಂದ ಅವರು ನಾವೆಲ್ಲರೂ ಇನ್ನೊಬ್ಬರಲ್ಲಿ ಭಗವಂತನ ರೂಪವನ್ನು ಕಾಣುವಂತಾಗಲಿ ಎಂದು ಆಶಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಚರಿತ ಶೆಟ್ಟಿ ಮಾತನಾಡಿ, ಸರ್ವ ಧರ್ಮಗ್ರಂಥಗಳ ಬಗ್ಗೆ ತಿಳಿದುಕೊಂಡರೆ ಬದುಕು ಹಸನಾಗುತ್ತದೆ. ಸಮಾಜಕ್ಕೆ ಸೌಹರ್ದತೆಯನ್ನು ಹಾಗೂ ಯುವಶಕ್ತಿಗೆ ಉತ್ತಮ ಶಿಕ್ಷಣವನ್ನು ಸಿಗುವಂತಾಗಲಿ ಎಂದ ಅವರು ಎಲ್ಲರೂ ಸಾಮರಸ್ಯದಿಂದ ಬದುಕಬೇಕಾಗಿದೆ ಎಂದು ತಿಳಿಸಿದರು.

ಜುಮ್ಮಾ ಮಸ್ಜಿದ್ ಎಲಿಯದ ಮಹಮ್ಮದ್ ಇಕ್ಬಾಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಕುಪ್ಪೆಪದವು ಮಸೀದಿಯ ಧರ್ಮ ಗುರು ಮಹಮ್ಮದ್ ಅಝೀಮ್

ಇರುವೈಲು ಗ್ರಾಮ ಪಂಚಾಯತ್ ಅಧ್ಯಕ್ಷ ವಲೇರಿಯನ್ ಕುಟಿನ್ಹಾ,  ಹೊಸಬೆಟ್ಟು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ರಾಕ್ಸನ್ ಪಿಂಟೋ, ಸದಸ್ಯ ಮೈಕಲ್ ನೊರೊನ್ಹಾ,  ಸದಸ್ಯ ಅಬ್ದುಲ್ ರಝಾಕ್ ,ಎ.ಪಿ.ಎಂ.ಸಿ ಸದಸ್ಯ ಚಂದ್ರಹಾಸ ಸನಿಲ್, ಕುಪ್ಪೆಪದವು ಗ್ರಾಮ ಪಂಚಾಯತ್‌ನ ಸದಸ್ಯ ಕೆ.ಎಂ.ಶರೀಫ್ ಕಜೆ, ಮೂಡುಬಿದಿರೆ ರೈತ ಸಂಘದ ಅಧ್ಯಕ್ಷ ಲಿಯೋ ನಝರತ್, ಅಹಮದ್ ಬ್ಯಾರಿ, ಎಲಿಯ ಮಸೀದಿಯ ಮಾಜಿ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಝಭೈರ್ ಶಾಂತಿನಗರ ಕಾರ್ಯಕ್ರಮ  ನಿರೂಪಿಸಿ,  ಜುಮ್ಮಾ ಮಸ್ಜಿದ್ ಎಲಿಯದ ಮಾಜಿ ಕಾರ್ಯದರ್ಶಿ ಯೂಸುಫ್ ಮಿಜಾರು ಸ್ವಾಗತಿಸಿದರು.

Post a Comment

0 Comments