ನವದೆಹಲಿ: ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಎಲ್ಲಾ ಭಾರತೀಯರು ಮಾರ್ಚ್ 31ರ ಒಳಗಾಗಿ ಪಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಬುಧವಾರದಂದು ಅಧಿಸೂಚನೆ ಹೊರಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಇಲಾಖೆ ಒಂದು ವೇಳೆ ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್ ನಿಂಕ್ ಮಾಡದೇ ಇದ್ದರೆ, 31 ಮಾರ್ಚ್ 2023ರ ನಂತರ ನಿಮ್ಮಲ್ಲಿರುವ ಪಾನ್ ಕಡ್ಡಾಯವಾಗಿ ನಿಷ್ಕ್ರೀಯವಾಗಲಿದೆ
ಸರಕಾರ ಹೊರಡಿಸಿರುವ ಅಂಕಿ ಅಂಶಗಳ ಪ್ರಕಾರ ಜನವರಿ 24, 2022 ರವರೆಗೆ, 43.34 ಕೋಟಿಗೂ ಹೆಚ್ಚು ಪ್ಯಾನ್‌ಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ. ಇದುವರೆಗೆ 131 ಕೋಟಿಗೂ ಹೆಚ್ಚು ಆಧಾರ್ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದೆ.
0 Comments