ಶಾಸಕರಿಂದ ಮಿನಿ ವಿಧಾನ ಸೌಧ ವೀಕ್ಷಣೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ನಾಡಕಛೇರಿ ಹಿಂಭಾಗದಲ್ಲಿ ಸುಮಾರು ಎರಡು ಎಕ್ರೆ ಜಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ  ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನ ಸೌಧವನ್ನು ಶನಿವಾರದಂದು ಶಾಸಕ ಉಮಾನಾಥ ಕೋಟ್ಯಾನ್ ಪರಿಶೀಲಿಸಿದರು. 

ತಾಲೂಕು ಆಡಳಿತ ಸೌಧವು 40 ಸಾವಿರ ಚದರ ಅಡಿಯಲ್ಲಿ ಸ್ಥಾಪಿತಗೊಳ್ಳುತ್ತಿದ್ದು, ಏ 27 ರಂದು ಕಟ್ಟಡವು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿಯವರಿಂದ ಲೋಕಾರ್ಪಣೆಗೊಳ್ಳಲಿದೆ.

ನೂತನ ಕಟ್ಟಡದಲ್ಲಿ ತಹಸೀಲ್ದಾರ್ ಕಚೇರಿ, ಶಾಸಕರ ಕಚೇರಿ, ಉಪನೊಂದಣಾಧಿಕಾರಿ, ಸರ್ವೇ ಕಚೇರಿಗಳು ಇರುವುದನ್ನು ತಿಳಿಸಿದರು. ಪುರಸಭಾಧ್ಯಕ್ಷ ಪ್ರಸಾದ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ, ಮೂಡ ಅಧ್ಯಕ್ಷ ಮೇಘನಾದ ಶೆಟ್ಟಿ, ಪ್ರಮುಖರಾದ ಅಜಯ್ ರೈ, ಗೋಪಾಲ್ ಶೆಟ್ಟಿಗಾರ್, ಲಕ್ಷ್ಮಣ್ ಪೂಜಾರಿ, ಸಾತ್ವಿಕ್ ಮಲ್ಯ, ನಾರಾಯಣ ಶೆಟ್ಟಿ, ಪದ್ಮನಾಭ್ ಕೋಟ್ಯಾನ್, ಶಶಿಧರ್ ದೇವಾಡಿಗ, ಸಂತೋಷ್ ಅಂಚನ್, ಕಿಶೋರ್ ಉಪಸ್ಥಿತರಿದ್ದರು.

Post a Comment

0 Comments