ಕಾಕ ೯ಳ: ಮಕ್ಕಳೇ ಹಾಗೆ ಚಿಕ್ಕ ವಯಸಿನಲ್ಲಿ ತುಂಬಾನೆ ಚೂಟಿ. ಏನಾದರೊಂದು ಅಭ್ಯಸಿಸಬೇಕೆನ್ನು ಛಲ ಮೂಡಿದರೆ ಮಾತ್ರ ಅದರ ಪಾರಿಪಾಠವನ್ನೇ ಉಚ್ಚರಿಸುತ್ತಾರೆ. ಹಾಗೆಯೆ ಇಲ್ಲೊಬ್ರು ಮುದ್ದು ಕುವರಿ ಇಂಥಹ ಪರಿಪಾಲನೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರೆ ಮೃದಿನಿ ಕೋಟ್ಯಾನ್.
ಚಿಟ್ಟೆಯಂತೆ ಹಾರುವ ಈ ಮುದ್ದಾದ ಚಿನಕುರುಳಿಗೆ ಎರಡು ವರ್ಷ. ಈಕೆ ದೇಹದ 14 ಭಾಗಗಳನ್ನು ಗುರುತಿಸುವುದರ ಜತೆಗೆ, 6 ಪ್ರಾಣಿ, 7 ರಾಷ್ಟ್ರೀಯ ಚಿಹ್ನೆಗಳನ್ನು ನೆನಪಿಸಿಕೊಳ್ಳುವುದು, A-U ನಿಂದ ವರ್ಣಮಾಲೆಯ ಪತ್ರ ಮತ್ತು ಅವುಗಳ ಅನುಗುಣವಾದ ಪದಗಳು 6 ಬಣ್ಣಗಳು, 1-10 ರಿಂದ ಸಂಖ್ಯೆಗಳನ್ನು ಎಣಿಸುವುದು, 3 ಪ್ರಾಸಗಳನ್ನು ಪಠಿಸುವುದರೊಂದಿಗೆ ಭಜನಾ ಗೀತೆಗಳನ್ನು ಹಾಡಿ ಸುಗಿಸುವುದರ ಮೂಲಕ ದಾಖಲೆಯ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಹೌದು ಮೃದಿನಿ ಅವರ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಪ್ರಮಾಣಪತ್ರ ಮತ್ತು ಪದಕ ಲಭಿಸಿದೆ.ಮೃದಿನಿ ಬಗ್ಗೆ ಅವರ ತಾಯಿ ನಿರೀಕ್ಷಾ ಧೀರಜ್ ಹೇಳುವುದು ಹೀಗೆ, ಮೃದಿನಿಗೆ ಚಿಕ್ಕಂದಿನಿಂದಲೂ ಬಹಳನೇ ಸೂಕ್ಷ್ಮ ಸ್ವಭಾವ. 2 ತಿಂಗಳ ಮಗು ಅಮ್ಮ - ಅಪ್ಪ ಹೇಳುವ ಮೂಲಕ ಮುಂದುವರೆದ ಮಗು ಇದೀಗ ಶ್ಲೋಕ, ವರ್ಣಮಾಲೆ, ಪ್ರಾಣಿ-ಪಕ್ಷಿಗಳನ್ನು ಗುರುತಿಸುತ್ತಾಳೆ. ಇವಳ ಆಸಕ್ತಿ ಕಂಡು ನನಗೆ ಖುಷಿಯಾಗುತ್ತಿದೆ. ಇವಳಿಗೆ ಬೆನ್ನೆಲುಬುಯೆಂದರೆ ತಂದೆ ಮತ್ತು ಅಜ್ಜಿ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾಳೆಂದರೆ ಸಂತೋಷವಾಗುತ್ತಿದೆ.
ಇವರು ಮೂಲತಃ ಕಾರ್ಕಳದ ಕುಂಟಿಬೈಲ್ ಮಿಯಾರಿನವರಾದ ಇವರ ತಂದೆ ಧೀರಜ್ ಸಾಲ್ಯಾನ್ ಮತ್ತು ತಾಯಿ ನಿರೀಕ್ಷಾ ಧೀರಜ್. ಕೇವಲ 2 ವರ್ಷ ಇರುವಾಗಲೇ ಸಾಧನೆಯ ಶಿಖರವೇರಿ ಅದ್ಭುತ ಸಾಧನೆಗೈದವರು. ಇವರ ಈ ಛಲ ಇನ್ನಷ್ಟು ಬೆಳೆದು ಕೀರ್ತಿ ಸಾಧಿಸಲಿ ಎನ್ನುವುದೇ ನಮ್ಮೆಲ್ಲರ ಆಶಯ.
0 Comments