ಮೂಡುಬಿದಿರೆ ಕ್ಷೇತ್ರದಲ್ಲಿ ರೂ 10.67 ಕೋ.ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟುಗಳಿಗೆ ಶಿಲಾನ್ಯಾಸ ಮುಂದಿನ ತಿಂಗಳು ಮೂಲ್ಕಿ ಮಿನಿ ವಿಧಾನ ಸೌಧಕ್ಕೆ ಶಿಲಾನ್ಯಾಸ : ಉಮಾನಾಥ ಕೋಟ್ಯಾನ್


ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ :  ಕೃಷಿ ಚಟುವಟಿಕೆಗಳನ್ನು ಮಾಡುವವರಿಗೆ ನೀರು ಅಗತ್ಯವಾಗಿಬೇಕು. ವರ್ಷದ ಪ್ರತಿದಿನವೂ ನೀರು ಬೇಕಾಗಿರುವುದರಿಂದ ಭೂಮಿಯಲ್ಲಿ ಅಂತರ್ಜಲ ವೃದ್ಧಿಸಲು ಹಲವು ಕಡೆಗಳಲ್ಲಿ  ಕಿಂಡಿ ಅಣೆಕಟ್ಟುಗಳ ನಿರ್ಮಾಣ ಕಾರ್ಯವನ್ನು ಮಾಡಲಾಗುತ್ತಿದ್ದು ಇದು ಸ್ವಾವಲಂಬಿ ಕೃಷಿ ಚಿಂತನೆಗೆ ಇದು ಪೂರಕವಾಗಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.

ಅವರು ಪಶ್ಚಿಮ ವಾಹಿನಿ ಯೋಜನೆಯಲ್ಲಿ ರೂ 10.67 ಕೋಟಿ ವೆಚ್ಚದಲ್ಲಿ ಮೂಡುಬಿದಿರೆ  ಕ್ಷೇತ್ರದ ಸುಮಾರು 11 ಕಡೆಗಳಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟುಗಳಿಗೆ ಇಂದು ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ಒಟ್ಟು ರೂ 34.23 ಕೋಟಿ ವೆಚ್ಚದ ಅಣೆಕಟ್ಟುಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜನರ ನಿರೀಕ್ಷೆಯನ್ನು ಈಡೇರಿಸಲಾಗುತ್ತಿದೆ. ಅಭಿವೃದ್ಧಿಯ ವಿಷಯದಲ್ಲಿ ಜಾತಿ, ಧರ್ಮ ,ಪಕ್ಷ ಭೇದಗಳನ್ನು ಯಾವತ್ತೂ ಮಾಡುವುದಿಲ್ಲ . ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಕೆಲಸವನ್ನು ಯಾರೂ ಮಾಡದೆ ಉಪಕಾರ ಸ್ಮರಣೆಯನ್ನು ರೂಢಿಸಿಕೊಳ್ಳಿ ಎಂದ ಅವರು ಮುಂದಿನ ತಿಂಗಳಿನಲ್ಲಿ ಮೂಲ್ಕಿ ಮಿನಿ ವಿಧಾನ ಸೌಧಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದೆಂದು ತಿಳಿಸಿದರು. 

ಕಾಮಗಾರಿಗಳ ವಿವರ : ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಪಲ್ಕೆ ಜಂಕ್ಷನ್ ನಿಂದ ಹೈಸ್ಕೂಲ್ ವರೆಗಿನ ತಿರುವುಗಳನ್ನು ಅಗಲಗೊಳಿಸುವ ೧ಕೋಟಿ ವೆಚ್ಚದ  ಅಭಿವೃದ್ಧಿ ಕಾಮಗಾರಿಗೆ, ತೋಡಾರು ಗ್ರಾಮದ ಕೊಡಮಣಿತ್ತಾಯ ದೈವಸ್ಥಾನದ ಬಳಿ ರೂ. 75 ಲಕ್ಷ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು, 50ಲಕ್ಷ ವೆಚ್ಚದಲ್ಲಿ  ಪಡ್ಡಲ ಎಂಬಲ್ಲಿ, ಇರುವೈಲು ಗ್ರಾಮದ ಕುತ್ಯಾಡಿ ಎಂಬಲ್ಲಿ ರೂ 50ಲಕ್ಷ ವೆಚ್ಚದ ಕಿಂಡಿ ಅಣೆಕಟ್ಟು,  ಪುಚ್ಚಮೊಗರು ಗ್ರಾಮದ ಮೆಂಡೋನ್ಸಕೋಡಿ ಎಂಬಲ್ಲಿ 90ಲಕ್ಷ ವೆಚ್ಚದ ಕಿಂಡಿ ಅಣೆಕಟ್ಟು, ಮಾರೂರು ಗ್ರಾಮದ ಕಂಬಳದೋಡಿ ಎಂಬಲ್ಲಿ 90 ಲಕ್ಷ ರೂ ವೆಚ್ಚದಲ್ಲಿ, ಮೂಡುಕೊಣಾಜೆ ಗ್ರಾಮದ  ಹೆಗ್ಗಡೆಕಟ್ಟ ಎಂಬಲ್ಲಿ 1ಕೋಟಿ ವೆಚ್ಚದಲ್ಲಿ,  ಮೂಡುಕೊಣಾಜೆ ಗ್ರಾಮದ ಮಿತ್ತೊಟ್ಟು ಎಂಬಲ್ಲಿ ರೂ 2.61 ಕೋ.ವೆಚ್ಚದ, ಪಡುಕೊಣಾಜೆ ಗ್ರಾಮದ ಹೌದಾಲ್ ಎಂಬಲ್ಲಿ ಸೇತುವೆ ರೂ 1.6 ಕೋ. ವೆಚ್ಚದ, ಬೆಳುವಾಯಿ  ಗ್ರಾಮದ ಕೆಸರುಗದ್ದೆ ಗಾಂಧಿನಗರ ಪಟ್ಲ ಎಂಬಲ್ಲಿ  60ಲಕ್ಷ ವೆಚ್ಚದಲ್ಲಿ ಹಾಗೂ  ಪರಪ್ಪು ಎಂಬಲ್ಲಿ ರೂ 85ಲಕ್ಷ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.  

   ಪುರಸಭಾ ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಇರುವೈಲು ಗ್ರಾ.ಪಂ ಅಧ್ಯಕ್ಷ ವಲೇರಿಯನ್ ಕುಟಿನ್ಹಾ, ಸದಸ್ಯರಾದ ನಾಗೇಶ್, ರುಕ್ಮಿಣಿ, ಮೋಹಿನಿ, ನವೀನ್, ಪ್ರವೀಣ್ ಶೆಟ್ಟಿ, ಪ್ರದೀಪ್ ಪೂಜಾರಿ, ಜಯಕುಮಾರ್, ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕೋಟ್ಯಾನ್, ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಸಂತೋಷ್ ಅಂಚನ್, ಸಂತೋಷ್, ಮಾಜಿ ಅಧ್ಯಕ್ಷೆ ಲತಾ ಹೆಗ್ಡೆ, ವಾಲ್ಪಾಡಿ ಗ್ರಾ.ಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಬೆಳುವಾಯಿ ಗ್ರಾ.ಪಂ.ಅಧ್ಯಕೆ ಸುಶೀಲಾ, ಉಪಾಧ್ಯಕ್ಷ ರವೀಂದ್ರ ಪೂಜಾರಿ ಸದಸ್ಯರಾದ ರವೀಂದ್ರ ನಾಯಕ್, ಭರತ್ ಶೆಟ್ಟಿ, ಪ್ರವೀಣ್ ಮಸ್ಕರೇನಸ್, ಸೂರಜ್ ಆಳ್ವ, ಭಾಗ್ಯಶ್ರೀ ಶೆಟ್ಟಿ, ಮಮತಾ ನಾಯ್ಕ್, ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ್ ಆಳ್ವ ಮೂಡಾ  ಅಧ್ಯಕ್ಷ ಮೇಘನಾಥ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ, ಸುಕೇಶ್ ಶೆಟ್ಟಿ, ಶಾಂತಿ ಪ್ರಸಾದ್ ಹೆಗ್ಡೆ , ದಿನೇಶ್ ಮಾರೂರು, ಪುತ್ತಿಗೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕಿಶೋರ್ ಕುಮಾರ್, ಮಂಡಲದ ಉಪಾಧ್ಯಕ್ಷ ಅಜೇಯ ರೈ, ಪಕ್ಷದ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.

Post a Comment

0 Comments