ಮೂಡುಬಿದಿರೆ: ಶ್ರೀ ಸಿದ್ಧೇಶ್ವರ ಧರ್ಮ ಜಾಗೃತಿ ಸಂಸ್ಥೆಯ ವತಿಯಿಂದ ಶಿವರಾತ್ರಿ ಪ್ರಯುಕ್ತ ಅಲಂಗಾರು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ವಚ್ಚತಾ ಕಾರ್ಯಕ್ರಮವು ರವಿವಾರ ನೆರವೇರಿತು.
ಆಡಳಿತ ಮೊಕ್ತೇಸರರಾದ ಶ್ರೀ ಈಶ್ವರ ಭಟ್ ಅವರು ಶುಭ ಹಾರೈಸಿ, ಸಂಸ್ಥೆಯ ವತಿಯಿಂದ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ನಡೆಯಲಿವೆ ಎಂದರು.
ಸಂಸ್ಥೆಯ ಕಾರ್ಯಕರ್ತರು ಹಾಗೂ ಊರಿನ ಧರ್ಮಾಭಿಮಾನಿಗಳು ದೇವಸ್ಥಾನ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
0 Comments