ಬೆಳ್ತಂಗಡಿ: ಪುರಾಣ ಪ್ರಸಿದ್ಧ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ರ‍್ಷಾವಧಿ ಜಾತ್ರಾ ಮಹೋತ್ಸವದ ಶನಿವಾರ ಅದ್ದೂರಿಯಾಗಿ ಜರಗಿತು.
(೧೯/೨/೨೦೨೨) ಶ್ರೀ ದೇವರ ಉತ್ಸವ, ಶ್ರೀ ಮನ್ಮಹಾರಥೋತ್ಸವ, ಬೂತಬಲಿ , ಕವಾಟ ಬಂಧನ ಸಾರ್ವಜನಿಕ ಮಹಾ ಅನ್ನಸಂರ‍್ಪಣೆ, ಭಜನಾ ಸಂಕೀರ್ತನೆ, ಇಂದಿನ ಧಾರ್ಮಿಕ - ಸಾಂಸ್ಕೃತಿಕ ಕರ‍್ಯಕ್ರಮ ವೈಭವದಿಂದ ಜರಗಿತು.
ಕೆಲ್ಲಗುತ್ತು ಸಬ್ರಬೈಲು ಕೆ.ಜಯವರ್ಮರಾಜ ಬಲ್ಲಾಳ್ ಹಾಗೂ ಸಹೋದರ ಸಹೋದರಿಯರು ಮತ್ತು ಕುಟುಂಬಸ್ಥರು ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಹಿತ ಅನೇಕ ಸಂಘ ಸಂಸ್ಥೆಗಳ ಪ್ರಮುಖರು, ರಾಜಕೀಯ ಪಕ್ಷಗಳ ನೇತಾರರು, ಉದ್ಯಮಿಗಳು, ಧಾರ್ಮಿಕ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಮುಖಂಡರುಗಳು , ಊರ- ಪರವೂರಿನ ಸಹಸ್ರಾರು ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
0 Comments