ಹರ್ಷ ಹತ್ಯೆಗೆ ಪ್ರತೀಕಾರ ತೀರಿಸುತ್ತೇವೆ: ಸುನಿಲ್ ಕೆಆರ್ ಅಕ್ರೋಶ

ಜಾಹೀರಾತು/Advertisment
ಜಾಹೀರಾತು/Advertisment


 ಮೂಡುಬಿದಿರೆ : ಅಂದಿನ ಕಾಲದಲ್ಲಿ ಭಜರಂಗಿಗಳು ರಾಮನಿಗಾಗಿ ಎಲ್ಲವನ್ನು ಎದುರಿಸಿದರು. ಇವತ್ತಿನ ಭಜರಂಗಿಳು ದೇಶ, ಧರ್ಮ, ತಾಯಿ ಭಾರತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ. ದಿನಗಳು ವಾರಗಳು ತಿಂಗಳುಗಳು ಅಥವಾ ವರ್ಷಗಳೇ ಉರುಳಬಹುದು ಆದರೆ ಪ್ರತಿಕಾರವನ್ನು ಖಂಡಿತವಾಗಿಯೂ ತೀರಿಸುತ್ತೇವೆ ಎಂದು ಭಜರಂಗದಳದ ಪ್ರಾಂತೀಯ ಸಂಚಾಲಕ ಸುನಿಲ್ .ಕೆ ಎಚ್ಚರಿಸಿದರು.

ಅವರು ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಕಗ್ಗೊಲೆಯನ್ನು  ಖಂಡಿಸಿ ಮೂಡುಬಿದಿರೆ  ಪ್ರಖಂಡದ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಮಂಗಳವಾರ ಸಂಜೆ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.




ಶಿವಮೊಗ್ಗ ಕೋಟೆ ಪ್ರಖಂಡದ ಭಜರಂಗದಳದ ಸಹ ಸಂಚಾಲಕ್ ಹರ್ಷ ಅವರನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಬಂಧಿಸಿರುವ  ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದರು

ಯಾವುದೇ ವಿರೋಧಗಳು ವ್ಯಕ್ತವಾದರೂ ನಾವು ರಾಜಾರೋಷವಾಗಿ ಎದುರಿಸುತ್ತೇವೆ. ಬೆದರಿಕೆಗೆ  ಜಗ್ಗುವವರಲ್ಲ. ಹಿಂದೂ ಸಮಾಜ ,ಸಂಘಟನೆಗಳನ್ನು ,ಮತ್ತು ಕಾರ್ಯಕರ್ತರು ಮಾಡುವ ಕೆಲಸಗಳನ್ನು ಕುಗ್ಗಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.



ವಿಶ್ವ ಹಿಂದೂ ಪರಿಷತ್  ವಿಭಾಗ ಸಹ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ ಮುಸಲ್ಮಾನ ಬಂಧುಗಳ ಮನಸು ಕೆಡಿಸುವಂತಹ ಕೆಲಸಗಳು ನಡೆಯುತ್ತಿದೆ. ರಾಷ್ಟ್ರ ವಿರೋಧಿ ಸಂಘಟನೆಗಳ ಮಾತುಗಳನ್ನು ಕೇಳಬೇಡಿ. ಹಿಜಾಬ್ ನಂತಹ ಪ್ರತ್ಯೇಕ ಸಂಕೇತಗಳಿಂದ ಹೊರ ಬಂದು ಈ ದೇಶದ ಸಂಸ್ಕೃತಿ , ಸಂಸ್ಕಾರಗಳಿಗೆ ಗೌರವ ಕೊಡಲು ಕಲಿಯಿರಿ.

ಇಲ್ಲಿನ ದೇಶದ  ಸಂಸ್ಕೃತಿಗೆ, ಧರ್ಮಕ್ಕೆ ಗೌರವ ಕೊಟ್ಟು ಬದುಕಲು ಸಾಧ್ಯವಿಲ್ಲದಿದ್ದರೆ ದೇಶ ಬಿಟ್ಟು ಹೋಗಬಹುದು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಾಧಕ್ಷ ಶಾಮ್ಯ ಹೆಗ್ಡೆ ಮಾತನಾಡಿ ಕಾನೂನನ್ನು ಸಂಪೂರ್ಣ ಮುರಿಯುವಂತಹ ಕೆಲಸ ಮಾಡುತ್ತಿರುವ ಹಾಗೂ ಮತಾಂಧ ಕಿಡಿಗೇಡಿಗಳನ್ನು  ಧಮನಿಸುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


Post a Comment

0 Comments