ಫೆ.೨೨ ರಿಂದ ೨೭ರವರೆಗೆ ಪರಮ ಪೂಜ್ಯ ೧೦೮ ಮುನಿಶ್ರೀ ಪ್ರಸಂಗ ಸಾಗರ ಮುನಿಮಹಾರಾಜರ ಆಹಾರ - ವಿಹಾರ - ಪೂಜಾ ಕೈಂಕರ್ಯ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ:  ಪರಮ ಪೂಜ್ಯ ೧೦೮ ಮುನಿಶ್ರೀ ಪ್ರಸಂಗ ಸಾಗರ ಮುನಿಮಹಾರಾಜರ ಆಹಾರ -  ವಿಹಾರ - ಪೂಜಾ ಕೈಂಕರ್ಯವು ೨೨/೦೨/೨೨ರಿಂದ  ಗುರುವಾಯನಕೆರೆ ಫಣಿರಾಜ್ ಜೈನ್ ಇವರ ಮನೆಯಲ್ಲಿ ಆಹಾರ ಚರ್ಯೆ ಏರ್ಪಾಡಿಸಲಾಗಿದ್ದು,  ಅಪರಾಹ್ನ ೩-೩೦ ಕ್ಕೆ ಉಜಿರೆಯ ಕಡೆ ವಿಹಾರ ಆರಂಭಿಸಲಿದ್ದು,  ಸಾಯಂಕಾಲ ಉಜಿರೆಯ ಶಿವಾಜಿನಗರದ ಜಿನನಿಲಯ ನಿವಾಸಿ ಶ್ರೀ ಗುಣಪಾಲ ಭಂಗ ಇವರ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

೨೩ ರಂದು ಮುಂಜಾನೆ ೬.೩೦ರಿಂದ   ಉಜಿರೆ ಕಡೆಯಿಂದ  ಧರ್ಮಸ್ಥಳದ ಕಡೆ ಪೂಜ್ಯ ಮುನಿಶ್ರೀಗಳ ವಿಹಾರ ಆರಂಭಿಸಲಿದ್ದು, ಅಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪೂಜ್ಯಶ್ರೀಗಳ ಆಹಾರ ಚರ್ಯೆ ಮುಗಿಸಿ ಮರುದಿನ ೨೪ ರಂದು ಬೆಳಗ್ಗೆ ೬-೩೦ ರಿಂದ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಪುದುವೆಟ್ಟು ಕೋರ್ಜಿ ನಿವಾಸಿ  ಶ್ರೀ ಮಹಾವೀರ
ಜೈನ್ ಇವರ ಮನೆಯಲ್ಲಿ  ಆಹಾರ ಚರ್ಯೆ ಮುಗಿಸಲಿದ್ದಾರೆ

ಹಾಗೂ ಸದ್ರಿ ದಿನದಂದು ಸಾಯಂಕಾಲ ಪುದುವೆಟ್ಟು ನಿಡ್ವಾಳ ಬಸ್ತಿ  ಎಂಬಲ್ಲಿ  ಜೀರ್ಣಾವಸ್ಥೆಯಲ್ಲಿರುವ ಬಸದಿಯಲ್ಲಿ ಪುನರುತ್ಥಾನ ಗೊಳ್ಳುತ್ತಿರುವ  ಬಸದಿಗೆ ಮುನಿ ಶ್ರೀಗಳ ಭೇಟಿ ನೀಡಿ ಪುದುವೆಟ್ಟು ಮನೆಯಲ್ಲಿ ವಾಸ್ತವ್ಯ ಹೂಡಿ, ೨೫ರಂದು ಶುಕ್ರವಾರ ಬೆಳಗ್ಗೆ ೬-೩೦ ರಿಂದ  ,ಪೂಜ್ಯ ಮುನಿ ಶ್ರೀಗಳ ವಿಹಾರ  ಪರಪ್ಪು ಗುತ್ತು  ಮನೆಯಲ್ಲಿ  ಆಹಾರ ಚರ್ಯೆಯ ಬಳಿಕ ಅದೇ ಮನೆಯಲ್ಲಿ ತಂಗಲಿದ್ದಾರೆ. 

೨೬ ಶನಿವಾರದಂದು  ಬೆಳಗ್ಗೆ ೬-೩೦ಕ್ಕೆ ಪೂಜ್ಯಶ್ರೀಗಳ ವಿಹಾರ ನಡೆಸಲಿದ್ದು, ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಇಲ್ಲಿಗೆ ಪುರಪ್ರವೇಶ ನಡೆಯಲಿದೆ  ಅನಂತರ ಶ್ರೀ ಕ್ಷೇತ್ರದಲ್ಲಿ ೨೭ನೇ ರವಿವಾರದಂದು ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಬೆಳಗ್ಗೆ ೮-೦೦  ಗಂಟೆಗೆ ಪರಮಪೂಜ್ಯ ೧೦೮ ಪ್ರಸಂಗ ಸಾಗರ ಮುನಿ ಮಹಾರಾಜರ  ಪಾವನ  ಸಾನಿಧ್ಯದಲ್ಲಿ ಸಾಮೂಹಿಕ ವೃತೋ ಪದೇಶ ನಡೆಯಲಿದ್ದು, ಬೆಳಗ್ಗೆ ೯-೦೦ ಗಂಟೆಯಿAದ ಸಾಮೂಹಿಕ ಭಕ್ತಾಮರ ಆರಾಧನೆ ಆರಂಭವಾಗಲಿದ್ದು ಭಕ್ತಾದಿಗಳು ಈ ಎಲ್ಲಾ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ಪುಣ್ಯ ಸಂಪಾದನೆ ಮಾಡಿಕೊಳ್ಳುವಂತೆ  ಆಡಳಿತ ಮಂಡಳಿ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments