ಮೂಡುಬಿದಿರೆ: ಶಿಕ್ಷಣದ ಸತ್ವ ಇರುವುದು ಮನುಷ್ಯನನ್ನು ಜಾಗೃತಿಗೊಳಿಸುವಲ್ಲಿ. ಆದ್ದರಿಂದ ಶಿಕ್ಷಣದ ಜತೆಗೆ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಚಿಂತನೆ ಮಾಡುವಂತ್ತಾಗಬೇಕು. ಮಕ್ಕಳನ್ನು ಕೇವಲ ಉದ್ಯೋಗ ಸೃಷ್ಠಿಸುವ ವಸ್ತುಗಳಾಗಿ ಮಾಡದೆ ಶಿಕ್ಷಣದ ಜತೆಗೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳುವಂತೆ ಮಾಡಬೇಕಾಗಿದೆ ಎಂದು ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ನಂದೀಶ್ ಹಂಚೆ ಹೇಳಿದರು.
ಅವರು ಕನ್ನಡ ಪುಸ್ತಕ ಪಾಧಿಕಾರ ಬೆಂಗಳೂರು ಮತ್ತು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂರು ಕೃತಿಗಳ ಮನನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆತ್ತವರು ಮಕ್ಕಳನ್ನು ಡಾಕ್ಟರ್, ಎಂಜಿನಿಯರ್ ಮಾಡುವ ಮೂಲಕ ಹಣ ಸಂಪಾದಿಸುವ ಯಂತ್ರಗಳನ್ನಾಗಿ ಮಾಡುವ ಮೂಲಕ ವಯಸ್ಸಾದ ಮೇಲೆ ತಮ್ಮನ್ನು ಸಾಕಬೇಕೆಂದು ಹೇಳಿಕೊಡುತ್ತಿಲ್ಲ, ಮರಳಿ ಹಳ್ಳಿಗೆ ಬಂದು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬುದರ ಬಗ್ಗೆಯೂ ತಿಳಿ ಹೇಳುತ್ತಿಲ್ಲ. ಇಂತಹ ಪರಿಸ್ಥಿತಿ ಮುಂದುವರೆಯುವ ಮೂಲಕ ಇನ್ನು ಎರಡು ದಶಕಗಳಲ್ಲಿ ಮಕ್ಕಳು ಶೀಲ ಮತ್ತು ಸಭ್ಯತೆಯನ್ನು ಬಿಟ್ಟು ಬಿಡುತ್ತಾರೆ ಇದು ಆಪಾಯಕಾರಿಯಾದ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಲೇಖಕನ ಕಥಾ ವಸ್ತುವೇ ಕಥೆಯ ಶೈಲಿಯನ್ನು ರೂಪಿಸಿಕೊಳ್ಳುತ್ತದೆ. ಲೇಖಕ ಒಬ್ಬ ಸಾಧನ ಅಷ್ಟೇ, ಲೇಖಕ ಕಥೆಯನ್ನು ಹುಡುಕುವುದಲ್ಲ ಬದಲಿಗೆ ಕಥೆಯೇ ತನ್ನಷ್ಟಕ್ಕೆ ಸೃಷ್ಟಿಗೊಳ್ಳುತ್ತದೆ. ಓದುಗನಿಗೆ ಓದಬೇಕೆಂಬ ಧಾವಂತ ಇರುವುದು ನಿಜ ಅದನ್ನು ಸರಿಯಾದ ರೀತಿಯಲ್ಲಿ ಓದಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ವಹಿಸಿದ್ದರು.
ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕನ್ನಡ ಪುಸ್ತಕ ಪಾಧಿಕಾರದ ಸದಸ್ಯ ಸಂಚಾಲಕ ಟಿ.ಎನ್.ಖಂಡಿಗೆ ಉಪಸ್ಥಿತರಿದ್ದರು.
ಆಳ್ವಾಸ್ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕೈರೋಡಿ ಸ್ವಾಗತಿಸಿದರು. ಆಯನಾ ವಿ.ರಮಣ್ ಕಾಯಕ್ರಮ ನಿರೂಪಿಸಿದರು.
ನಂತರ ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಲೆ ಅವರು ಗೋಪಾಲಕೃಷ್ಣ.ಪೈ ಅವರ 'ಸ್ವಪ್ನ ಸಾರಸ್ವತ', ರಂಗನಿರ್ದೇಶಕ ಡಾ.ದಿನಕರ ಎಸ್.ಪಚ್ಚನಾಡಿ ಕುಂ. ವೀರಭದ್ರಪ್ಪ ಅವರ 'ಅರಮನೆ' ಹಾಗೂ ಕತೆಗಾರ್ತಿ ಸ್ನೇಹಲತಾ ದಿವಾಕರ್ ಅವರು ರಾಘವೇಂದ್ರ ಪಾಟೀಲ ಅವರ 'ತೇರು' ಎಂಬ ಕೃತಿಗಳನ್ನು ಅವಲೋಕನ ಮಾಡಿದರು.
ಉಳ್ಳಾಲ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಧನಂಜಯ ಕುಂಬ್ಳೆ ಮತ್ತು ಮೂಡುಬಿದಿರೆ ಸಾಹಿತ್ಯ ಪರಿಷÀತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವೇಣುಗೋಪಾಲ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
0 Comments