ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

     


ಬೆಳ್ತಂಗಡಿ: ಪುರಾಣ ಪ್ರಸಿದ್ಧ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ  ಮಹೋತ್ಸವವು ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆಲ್ಲಗುತ್ತು ಸಬ್ರಬೈಲು ಕೆ. ಜಯವರ್ಮರಾಜ ಬಲ್ಲಾಳ್  ರವರ ದಕ್ಷ ನೇತೃತ್ವದಲ್ಲಿ  ಫೆಬ್ರವರಿ 12 ರಿಂದ 21 ರ ತನಕ 10 ದಿನಗಳ ಕಾಲ ವೈಭಯುತವಾಗಿ ನಡೆಯಿತು

ಭಾನುವಾರ ಬೆಳಿಗ್ಗೆ ಕವಾಟೋದ್ಘಟನೆ, ಪ್ರಸನ್ನ ಪೂಜೆ, ಶ್ರೀ ದೇವರ ನಗರ ಬೀದಿ ಸವಾರಿ, ಕಟ್ಟೆ ಪೂಜೆ, ಅವಭೃತ ಸ್ನಾನ, ಧ್ವಜಾರೋಹಣ, ಧರ್ಮ ದೈವಗಳಿಗೆ ಅಂಗಣ ನೇಮ ನಡೆಯಿತು . ದೇವಸ್ಥಾನದಿಂದ ಧರ್ಮದೈವಗಳ ಭಂಡಾರವು ಹಿಂದೆ ಕೆಲ್ಲಗುತ್ತು ಮನೆಗೆ ಆಗಮನವಾಯಿತು .

ಸೋಮವಾರ ಬೆಳಗ್ಗೆ ಧರ್ಮ ದೈವಗಳ ನೇಮೋತ್ಸವ ,  ಸಂಪ್ರೋಕ್ಷಣೆ , ಮಂತ್ರಾಕ್ಷತೆ, ಮಹಾಪೂಜೆ ನಡೆದು  10 ದಿನಗಳ  ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು. 

ಈ ಸಂದರ್ಭಗಳಲ್ಲಿ  ಕೆಲ್ಲಗುತ್ತು ,  ಸಬ್ರಬೈಲು ಮನೆತನದ ಸಹೋದರ,  ಸಹೋದರಿಯರು ಹಾಗೂ ಕುಟುಂಬಸ್ಥರು ಮತ್ತು ಊರ - ಪರವೂರಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

Post a Comment

0 Comments