*’ಕಾರಂತರ ಕಾದಂಬರಿಗಳಲ್ಲಿನ ವಿಚಾರಧಾರೆ’ ಪ್ರಬಂಧ ಸ್ಪರ್ಧೆ: ರಮ್ಯಾಗೆ ಜಿಲ್ಲಾ ಮಟ್ಟದಲ್ಲಿ ತೃತೀಯ ಬಹುಮಾನ*

*’ಕಾರಂತರ ಕಾದಂಬರಿಗಳಲ್ಲಿನ ವಿಚಾರಧಾರೆ’ ಪ್ರಬಂಧ ಸ್ಪರ್ಧೆ: ರಮ್ಯಾಗೆ ಜಿಲ್ಲಾ ಮಟ್ಟದಲ್ಲಿ ತೃತೀಯ ಬಹುಮಾನ*

ಉಡುಪಿ: ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಎಂ.ಕಾಂ. ವಿದ್ಯಾರ್ಥಿನಿ ರಮ್ಯಾ ತೃತೀಯ ಬಹುಮಾನ ಪಡೆದಿದ್ದಾರೆ.

‘ಕಾರಂತರ ಕಾದಂಬರಿಗಳಲ್ಲಿನ ವಿಚಾರಧಾರೆ’ ಎಂಬ ವಿಷಯದ ಕುರಿತು ನಡೆದ ಸ್ಪರ್ಧೆಯಲ್ಲಿ ರಮ್ಯಾ ಪ್ರಬಂಧ ಮಂಡಿಸಿದ್ದರು.  ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ರಮ್ಯಾ ಅವರಿಗೆ ಬಹುಮಾನ ಪ್ರದಾನ ಮಾಡಿದರು.

ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಬೋಧಕ ವೃಂದ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Post a Comment

0 Comments

Advertisement