ಮೂಡುಬಿದಿರೆ : ಇಲ್ಲಿನ ರೋಟರಿ ಸಂಸ್ಥೆಯಲ್ಲಿ ಲಕ್ಷ್ಮಿ ಪೂಜೆ, ಆಯುಧ ಪೂಜೆ ಹಾಗೂ ವಾಹನ ಪೂಜೆಯು ಅಲಂಗಾರು ದೇವಸ್ಥಾನದ ಶ್ರೀ ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ನಡೆಯಿತು.
ಲಕ್ಷ್ಮೀ ಪೂಜೆಯಿಂದ ಆರಂಭಗೊಂಡ ಪೂಜೆಯು ಸಂಸ್ಥೆಯ ಎಲ್ಲಾ ಕಚೇರಿಗಳ , ಅಡುಗೆ ಮನೆಯ , ತರಗತಿಗಳ ಹಾಗೂ ಆಯುಧ ಮತ್ತು ವಾಹನಗಳ ಪೂಜೆಯೊಂದಿಗೆ ಸಂಪನ್ನಗೊಂಡಿತು.
ರೋಟರಿ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ನಾರಾಯಣ ಪಿ ಯಂ, ಕಾರ್ಯದರ್ಶಿ ಅನಂತಕೃಷ್ಣ ರಾವ್ , ಸಂಚಾಲಕ ಪ್ರವೀಣ್ ಚಂದ್ರ
ಜೈನ್ , ಪ್ರಾಂಶುಪಾಲ ರವಿ ಕುಮಾರ್ , ಮುಖ್ಯೋಪಾಧ್ಯಾಯನಿ ತಿಲಕಾ ಅನಂತವೀರ ಜೈನ್ , ಆಡಳಿತಾಧಿಕಾರಿ ಪ್ರಫುಲ್ ಡಿಸೋಜಾ , ವ್ಯವಸ್ಥಾಪಕ ಸತೀಶ್ , ಶಿಕ್ಷಕರು , ಶಾಲಾ ವಾಹನಗಳ ಚಾಲಕರು ಮತ್ತು ನಿರ್ವಾಹಕರು ಹಾಗೂ ಇತರ ಶಿಕ್ಷಕೇತರ ಸಿಬ್ಬಂದಿವರ್ಗ ಸಂಭ್ರಮದಿಂದ ಪಾಲ್ಗೊಂಡರು.

0 Comments