ಡಿಸೆಂಬರ್ ತಿಂಗಳೊಳಗೆ ರಸ್ತೆಯ ಗುಂಡಿಗಳಿಗೆ ಮುಕ್ತಿ : ಸುಗಮ ಸಂಚಾರ ಸುವ್ಯವಸ್ಥೆ ಸಭೆಯಲ್ಲಿ ಪಿಡಬ್ಲ್ಯೂಡಿ ಇಲಾಖೆ ಭರವಸೆ
ಮೂಡುಬಿದಿರೆ : ರಾಜ್ಯ ಹೆದ್ದಾರಿಗಳಲ್ಲಿ ತುಂಬಿರುವ ಗುಂಡಿಗಳನ್ನು ನವೆಂಬರ್ ತಿಂಗಳಲ್ಲಿ ಮತ್ತು ಪಿಡಬ್ಲ್ಯೂಡಿ ಇಲಾಖೆಗೆ ಸಂಬಂಧಪಟ್ಟ ರಸ್ತೆಗಳಲ್ಲಿರುವ ಹೊಂಡಗಳನ್ನು ಡಿಸೆಂಬರ್ ತಿಂಗಳಲ್ಲಿ ಮುಚ್ಚುವ ಮೂಲಕ ಅಪಾಯಕಾರಿ ಹೊಂಡ-ಗುಂಡಿಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಪ್ರೀತಮ್ ಭರವಸೆ ನೀಡಿದ್ದಾರೆ.
ಅವರು ಮಂಗಳೂರು ನಗರ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿ ಇಲಾಖೆಯವರ ನೇತೃತ್ವದಲ್ಲಿ ಮಂಗಳವಾರ ಸಮಾಜ ಮಂದಿರದಲ್ಲಿ ನಡೆದ ಸುಗಮ ಸಂಚಾರ ಸುವ್ಯವಸ್ಥೆಯ ಕುರಿತ ಸಭೆಯಲ್ಲಿ ಸಾವ೯ಜನಿಕರು ರಸ್ತೆಗಳ ಹೊಂಡಗಳನ್ನು ಮುಚ್ಚದೆ ಸುಗಮ ಸಂಚಾರ ಸಾಧ್ಯವಿಲ್ಲವೆಂದಾಗ ಖಂಡಿತವಾಗಿಯು ರಸ್ತೆ ಹೊಂಡಗಳಿಗೆ ಮುಕ್ತಿ ನೀಡಲಾಗುವುದೆಂದರು.
ಮೂಡುಬಿದಿರೆ-ಮಂಗಳೂರು-ಕಾಕ೯ಳಕ್ಕೆ ಸಂಚರಿಸುವ ಬಸ್ ಗಳು ಟೈಮಿಂಗ್ಸ್ ನ ನೆಪವೊಡ್ಡಿ ಅತಿವೇಗದ ಚಾಲನೆ, ಕಕ೯ಶ ಹಾರನ್ ಸದ್ದುಗಳಿಂದ ದ್ವಿಚಕ್ರ ವಾಹನ ಸವಾರರು, ಪಾದಾಚಾರಿಗಳು ಭಯ ಪಡುವಂತೆ ಮಾಡುತ್ತಿವೆ ಹಾಗೂ ಕೆಲವು ಎಕ್ಸ್ ಪ್ರೆಕ್ಸ್ ಬಸ್ ಗಳು ಬಸ್ ಸ್ಟ್ಯಾಂಡ್ ಗೆ ಬಾರದೆ ಪ್ರಯಾಣಿಕರನ್ನು ಅಧ೯ದಲ್ಲಿಯೆ ಇಳಿಸುತ್ತಿದ್ದಾರೆ ಎಂಬ ಅಧಿಕಾರಿಗಳ ಗಮನಕ್ಕೆ ತರಲಾಯಿತು.
ರಾ. ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಮಂಗಳೂರಿನಿಂದ ಮೂಡುಬಿದಿರೆಗೆ ಬಸ್ ತಲುಪಲು 50 ನಿಮಿಷ ಸಾಕಾಗುವುದಿಲ್ಲ. ಈಗಿನ ಬಸ್ ಚಾಲಕರಿಗೂ ವ್ಯವದಾನವಿರುವುದಿಲ್ಲ ಆದ್ದರಿಂದ ಟೈಮಿಂಗ್ಸ್ 1.15ಕ್ಕೆ ಅವಕಾಶ ನೀಡಬೇಕು ಮತ್ತು ಬಸ್ ಮಾಲಕರು ತಮ್ಮ ವಾಹನದ ಚಾಲಕರು ಮತ್ತು ನಿವಾ೯ಹಕರ ಬಗ್ಗೆ ನಿಗಾ ಇಡಬೇಕೆಂದು ಪದ್ಮಾಂಬ ಬಸ್ಸಿನ ಮಾಲಕರು ಸಲಹೆ ನೀಡಿದರು.
ನಿಲ್ದಾಣದ ಆವರಣದಲ್ಲಿ ಖಾಸಗಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಹೋಗುತ್ತಿದ್ದಾರೆ ಇದರಿಂದಾಗಿ , ಬಸ್ ಗಳನ್ನು ನಿಲ್ಲಿಸಲು ಕಷ್ಪಸಾಧ್ಯವಾಗಿದೆ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳು ಒಮ್ಮೆಮ್ಮೆ ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳುತ್ತಾರೆ ಆದರೆ ನಿರಂತರವಾಗಿ ಈ ಬಗ್ಗೆ ಸೂಕ್ತ ಕ್ರಮವನ್ನು ಜಾರಿಗೊಳಿಸುವಲ್ಲಿ ಅಧಿಕಾರಿ ವಗ೯ ಸೋತಿದೆ ಎಂದು ಸಾವ೯ಜನಿಕರು ಆರೋಪಿಸಿದರು.
ಆರ್ ಟಿ ಓ ಇಲಾಖೆಯವರು ಗ್ರಾಮಾಂತರ ಪ್ರದೇಶದ ಆಟೋಗಳಿಗೆ ಸಿಟಿಯ ಪರವಾನಿಗೆ ನೀಡಿದ್ದಾರೆಂದು, ಕೆಲವು ಆಟೋಗಳಲ್ಲಿ 15-20 ವಿದ್ಯಾಥಿ೯ಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದಾರೆಂದು ಆಟೋ ಚಾಲಕರಾದ ಭಾಸ್ಕರ್ ಅವರು ಅಧಿಕಾರಿಗಳ ಗಮನಕ್ಕೆ ತಂದರು. ಈ ಬಗ್ಗೆ ಸಂಬಂಧಪಟ್ಟ ಕಾಲೇಜುಗಳಿಗೆ ಮಾಹಿತಿ ನೀಡುವಂತೆ ಮೂಡುಬಿದಿರೆಯ ಪೊಲೀಸರಿಗೆ ಸೂಚಿಸಿದರು.
ಅಲ್ಲದೆ ಆರ್ ಟಿ. ಓ ಅಧಿಕಾರಿಗಳು ವಾಹನ ತಪಾಸಣೆಯ ನೆಪದಲ್ಲಿ ಲಂಚ ಸ್ವೀಕರಿಸುತ್ತಿದ್ದಾರೆ ಎಂದು ಪುರಸಭೆಯ ಮಾಜಿ ಸದಸ್ಯ ಕೊರಗಪ್ಪ ಆರೋಪಿಸಿದರು.
ಆರ್ ಟಿ ಒ ಇಲಾಖೆಯಿಂದ ಮುಂದೆ ಸಮಸ್ಯೆಗಳು ಆಗದಂತೆ ಗಮನ ಹರಿಸಲಾಗುವುದು ಎಂದು ಅಧಿಕಾರಿ ವೇಣುಗೋಪಾಲ್ ತಿಳಿಸಿದರು.
ಬಸ್ಸುಗಳು ಹಳೆ ಪೊಲೀಸ್ ಠಾಣೆಯ ಬಳಿಯಲ್ಲಿ ಎರಡೆರಡು ಕಡೆ ಸ್ಟಾಪ್ ನೀಡುವುದರಿಂದ ಎದುರುಗಡೆಯಿಂದ ಬರುವ ವಾಹನಗಳಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಾಮಾಜಿಕ ಕಾಯ೯ಕತ೯ ಶೀತಲ್ ಜೈನ್ ತಿಳಿಸಿದರು.
ಕಳೆದ ವಾರ ಖಾಸಗಿ ಬಸ್ಸೊಂದು ರಾಂಗ್ ಸೈಡಿನಲ್ಲಿ ಬಂದು ಯುವಕನೋವ೯ನ ಪ್ರಾಣ ಕಸಿದುಕೊಂಡಿದೆ ಈ ಬಸ್ಸಿನವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಶ್ರಫ್ ಮರೋಡಿ ಆಗ್ರಹಿಸಿದರು.
ಪ್ರತಿಷ್ಠೆಗಾಗಿ ನಡೆಯುವ ಕಾಯ೯ಕ್ರಮಗಳ ಮೆರವಣಿಗೆಗಳು ನಡೆಯುವಾಗ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಆದ್ದರಿಂದ ರಸ್ತೆಗಳಲ್ಲಿ ನಗಮಡೆಯುವ ಮೆರವಣಿಗೆಗಳಿಗೆ ಅವಕಾಶ ನೀಡದಂತೆ ಬಸ್ ಏಜೆಂಟ್ ಸತೀಶ್ ಶೆಟ್ಟಿ ಅಧಿಕಾರಿಗಳ ಗಮನಕ್ಕೆ ತಂದರು.
ಇತರ ಸಮಸ್ಯೆಗಳ ಬಗ್ಗೆ ಆಲ್ವೀನ್ ಮೆನೇಜಸ್ ಮತ್ತು ರಾಜೇಶ್ ಕಡಲಕೆರೆ ಅಧಿಕಾರಿಗಳ ಗಮನಕ್ಕೆ ತಂದರು.
ಮಂಗಳೂರು ನಗರ ಪೊಲೀಸ್ ಕ್ರೈಂ ಹಾಗೂ ಟ್ರಾಫಿಕ್ ವಿಭಾಗದ ಡಿಸಿಪಿ ಕೆ. ರವಿ ಶಂಕರ್ ಮಾತನಾಡಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಬದ್ಧ. ಜನರಿಗೂ ಜವಾಬ್ದಾರಿಯಿದೆ ಸಂಚಾರ ನಿಯಮ ಪಾಲಿಸಬೇಕು ಹೊರತು ಉಲ್ಲಂಘನೆ ಮಾಡುವುದಲ್ಲ. ಪುರಸಭೆಯ ಜತೆ ಸಮನ್ವಯ ಮಾತುಕತೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದೆಂದರು.
ಮೂಡುಬಿದಿರೆ ಪೊಲೀಸ್ ನೀರಿಕ್ಷಕ ರಾಜೇಂದ್ರ ಬಿ.
ಉಪ ನಿರೀಕ್ಷಕಿ ಪ್ರತಿಭಾ ಈ ಸಂದಭ೯ದಲ್ಲಿದ್ದರು.

0 Comments