ವಿಶ್ವದಾಖಲೆ ಬರೆದ ಯಶವಂತರ ಹೆಸರಿನಲ್ಲಿ ಆಳ್ವಾಸ್‌ನಲ್ಲಿ ಗಿಡ ನೆಡುತ್ತೇವೆ: ವಿವೇಕ್ ಆಳ್ವಾ

ವಿಶ್ವದಾಖಲೆ ಬರೆದ ಯಶವಂತರ ಹೆಸರಿನಲ್ಲಿ ಆಳ್ವಾಸ್‌ನಲ್ಲಿ ಗಿಡ ನೆಡುತ್ತೇವೆ: ವಿವೇಕ್ ಆಳ್ವಾ 
 ಮೂಡುಬಿದಿರೆ: ೨೮ ಭಾಷೆಗಳಲ್ಲಿ 28 ಗಂಟೆಗಳ ಕಾಲ  ನಿರಂತರ ಗಾಯನ ಕಾರ್‍ಯಕ್ರಮ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿರುವ ವಿದ್ವಾನ್ ಯಶವಂತ ಎಂ.ಜಿ ಯವರಿಗೆ ಸುರಸಾರವ ವಿದ್ಯಾರ್ಥಿ ಮತ್ತು ಶಿಷ್ಯ ವೃಂದದವರು ಗೌರವಿಸಿ ಅಭಿನಂದಿಸಿದರು. 

ಸಮಾಜ ಮಂದಿರ ಸಭಾದಲ್ಲಿ ನಡೆದ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಯಶವಂತ ಎಂ.ಜಿ - ಪತ್ನಿ ನವ್ಯ ಅವರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು ’ಹಿಂದೂಸ್ಥಾನಿ, ಶಾಸ್ತ್ರೀಯ ಸಂಗೀತ’ಗಳು ನಮ್ಮ ದೇಶದ ಅಮೂಲ್ಯ ಸಂಪತ್ತು. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಶಿಕ್ಷಣದಲ್ಲಿಯೇ ಸಂಗೀತ ಕಲೆಗಳಿಗೆ ಆಧ್ಯತೆ ನೀಡಬೇಕು ಎಂದರು. ಸನ್ಮಾನ ಸ್ವೀಕರಿಸಿದ ಯಶವಂತ್ ಎಂ.ಜಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಮಾತ್ರವಲ್ಲದೆ ಅವರ ಸಾಧನೆ ಜಗತ್ತು ಮೆಚ್ಚುವಂತದ್ದು. ಅದು ನಮ್ಮ ಮೂಡುಬಿದಿರೆಗೆ ಹೆಮ್ಮೆ. ಹೀಗಾಗಿ ಯಶವಂತ್ ಹಾಗೂ ಅವರ ಧರ್ಮಪತ್ನಿ ನವ್ಯಶ್ರೀ ರವರ ಜನ್ಮ ನಕ್ಷತ್ರದ ಹೆಸರಿನಲ್ಲಿ ಆಳ್ವಾಸ್ ಸಂಸ್ಥೆಯ ಆವರಣದಲ್ಲಿ ಗಿಡ ನೆಡುತ್ತೇವೆ ಎಂದು ಘೋಷಿಸಿದರು. ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಎಂ, ಪುರಸಭಾ ಮಾಜಿ ಸದಸ್ಯರಾದ ಪುರಂದರ ದೇವಾಡಿಗ, ಸುರೇಶ್ ಪ್ರಭು, ಉದ್ಯಮಿ ಪೂರ್ಣಚಂದ್ರ ಜೈನ್, ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ಸುರಸಾರವದ  ಗೌರವ ಸಲಹೆಗಾರ ನವೀನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿನಯ್ ಎಂ. ಎಸ್ ಕಾರ್‍ಯಕ್ರಮ ನಿರ್ವಹಿಸಿದರು. ಮಲ್ಲಿಕಾ ವಂದಿಸಿದರು.

Post a Comment

0 Comments

Advertisement