ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನವರಾತ್ರಿ ಪ್ರಯುಕ್ತ ‘ನವರಾತ್ರಿ ನವಶಕ್ತಿ ವೈಭವ’ ಕಾರ್ಯಕ್ರಮದ ಅಂಗವಾಗಿ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನವನಾರಿಯರಿಗೆ ಶನಿವಾರ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಲತಿ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು
ವಿದ್ಯುಕ್ತವಾಗಿ ಉದ್ಘಾಟಿಸಿ ಶ್ರೀ ಶಾರದಾದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಅಧ್ಯಕ್ಷ
ಯುವರಾಜ್ ಜೈನ್ ಅವರು ಮಾತನಾಡಿ, ನಾರಿಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ
ಸಾಧನೆಗಳನ್ನು ಗುರುತಿಸಿ ಗೌರವಿಸುವುದರಿಂದ ಇತರರಿಗೂ ಪ್ರೇರಣೆ ದೊರೆಯುತ್ತದೆ ಎಂದರು. ಒಂದು ಕಲ್ಲನ್ನು ಸುಂದರ
ಮೂರ್ತಿಯನ್ನಾಗಿ ರೂಪಿಸುವ ವ್ಯವಸ್ಥೆ ಇರುವಂತೆ, ನವರಾತ್ರಿಯ ನವಶಕ್ತಿಯ ಈ ಶುಭ ಸಂದರ್ಭದಲ್ಲಿ ನಮ್ಮಲ್ಲಿರುವ
ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಿ, ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಮೌಲ್ಯಗಳನ್ನು
ಅಳವಡಿಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮಾಲತಿ ಅವರನ್ನು ಸಂಸ್ಥೆಯ ವತಿಯಿಂದ
ವಿಶೇಷವಾಗಿ ಸನ್ಮಾನಿಸಲಾಯಿತು.
ನವರಾತ್ರಿಯ ನವಶಕ್ತಿಯ ಪ್ರತೀಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅರ್ಚನಾ ಶೆಟ್ಟಿ, ಶ್ವೇತಾ ಎಸ್. ಜೈನ್,
ಡಾ. ಸೀಮಾ ಸುದೀಪ್, ಡಾ. ವಿನೋದ.ಪಿ.ಶೆಟ್ಟಿ, ಹರಿಣಾಕ್ಷಿ ಶೆಟ್ಟಿ, ವಸಂತಿ, ಅರುಣ,
ರಮಾದೇವಿ ಹಾಗೂ ಉಷಾ ಬೋರ್ಕರ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಎಕ್ಸಲೆಂಟ್
ಶಾಲೆಯ ಕಲಾ ಶಿಕ್ಷಕಿ ಶ್ರೀಮತಿ ಚೇತನ ಶೆಟ್ಟಿ ಅವರ ಕಲಾಪ್ರತಿಭೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಅವರನ್ನು
ಗೌರವಿಸಲಾಯಿತು.
ಸನ್ಮಾನಿತರ ಪರವಾಗಿ ಡಾ. ಸೀಮಾ ಸುದೀಪ್, ಉಷಾ ಬೋರ್ಕರ್ ಹಾಗೂ ಶ್ರೀಮತಿ ಹರಿಣಾಕ್ಷಿ ಶೆಟ್ಟಿ ಅನಿಸಿಕೆಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ ಶ್ರೀ ಪ್ರಸಾದ್, ಎಕ್ಸಲೆಂಟ್ ಸಂಸ್ಥೆಯ ಮುಖ್ಯ ಶಿಕ್ಷಕ
ಶಿವಪ್ರಸಾದ್ ಭಟ್, ಸಿಬಿಎಸ್ಇ ಸಂಯೋಜಕಿ ವಿಮಲ ಶೆಟ್ಟಿ, ಅಪೇಕ್ಷಾ, ಶಿಕ್ಷಕ ವೃಂದ ಹಾಗೂ
ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕಿಯರಾದ ಅರ್ಚನಾ ಮತ್ತು
ಹರ್ಷಿತ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಸಾದ್ ವಂದನಾರ್ಪಣೆ ಗೈದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

0 Comments