ದಿನಾಂಕ 29 ಅಕ್ಟೋಬರ್ 2026ರ ಗುರುವಾರ ರೋಟರಿ ಶಾಲಾ ಮೈದಾನದಲ್ಲಿ ಪುಟಾಣಿ ಮಕ್ಕಳ ಕ್ರೀಡಾಕೂಟ ಜರುಗಿ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ಅನಾವರಣಗೊಂಡಿತು.
ಶಾಲಾ ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್ ಮತ್ತು ಮೂಡುಬಿದಿರೆಯ ಜಲದೀಪ್ ಪ್ಲಾಸ್ಟಿಕ್ ನ ಆಡಳಿತ ಪಾಲುದಾರರಾದ ಹಾಗೂ ರೋಟರಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ವಿಕ್ರಂ ರಾವ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡರು.
ಶಾಲಾ ಬ್ಯಾಂಡ್ ಸೆಟ್ ಮತ್ತು ಪುಟಾಣಿ ಕ್ರೀಡಾಪಟುಗಳು ಶಿಸ್ತುಬದ್ಧವಾಗಿ ನಡೆಸಿಕೊಟ್ಟ ಪಥಸಂಚಲನದ ಗೌರವ ವಂದನೆಯನ್ನು ಸ್ವೀಕರಿಸಿದ ವಿಕ್ರಂ ರಾವ್,
ಕ್ರೀಡಾಳುಗಳು ತಂದ ಜ್ಯೋತಿಯಿಂದ
ಕ್ರೀಡಾಕೂಟವನ್ನು ಉದ್ಘಾಟಿಸಿ ಬಳಿಕ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಾಲೆಯಲ್ಲಿ ಕಳೆದ ಪ್ರಮುಖ ಅನುಭವಗಳನ್ನು ಹಂಚಿಕೊಂಡು , ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಮಾತನಾಡಿ , ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಸೋಲು ಮತ್ತು ಗೆಲುವನ್ನು ಹೇಗೆ ಸ್ವೀಕರಿಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಹೇಳಿ ಎಲ್ಲರಿಗೂ ಶುಭ ಹಾರೈಸಿದರು.
ಶಾಲಾ ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್ ರವರು ದೀಪಬೆಳಗಿಸಿ , ಪುಟಾಣಿ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಮೌಲ್ಯಗಳ ಪ್ರಾಮುಖ್ಯತೆ ಬಗ್ಗೆ ಮಾತನಾಡಿ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು .
ಕ್ರೀಡಾಳು ಕುಮಾರಿ ಲಾವಣ್ಯ ಕಾಮತ್ ಎಲ್ಲರ ಪರವಾಗಿ ಪ್ರಮಾಣವಚನ ಸ್ವೀಕರಿಸಿದರು.
ಶಾಲಾ ಮುಖ್ಯೋಪಾಧ್ಯಾಯನಿ ತಿಲಕ ಅನಂತವೀರ ಜೈನ್ ಎಲ್ಲರನ್ನೂ ಸ್ವಾಗತಿಸಿ ಸಮಾರಂಭದಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು .
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಪ್ರಫುಲ್ ಡಿಸೋಜಾ , ಮ್ಯಾನೇಜರ್ ಸತೀಶ್ , ಹಿರಿಯ ಸಂಯೋಜಕರಾದ ಗಜಾನನ ಮರಾಠೆ, ಸಂಯೋಜಕರಾದ ಶಶಿಲತಾ, ಪ್ರಫುಲ್ಲ, ಸರಿತಾ ಜೆ , ಡೀಲನ್ ಮಸ್ಕರೆನಸ್ , ಕ್ರೀಡಾ ಅಧ್ಯಾಪಕರಾದ ಸುಧೀರ್ ಕುಮಾರ್ , ದೀಕ್ಷಿತ್ ಹಾಗೂ ಸುನಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು..
ಬಹುಮಾನ ವಿಜೇತ ಪುಟಾಣಿ ಕ್ರೀಡಾಪಟುಗಳಿಗೆ ಸುಂದರವಾದ ವಿಜಯ ವೇದಿಕೆಯಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಶಿಕ್ಷಕಿ ಸುನೀತ ಕಾರ್ಯಕ್ರಮ ನಿರೂಪಿಸಿ , ಜ್ಯೋತಿ ಪೈ ವಂದನಾರ್ಪಣೆಗೈದರು.
ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

0 Comments