ಮೂಡುಬಿದಿರೆ : ನಮ್ಮ ಮೊಬೈಲ್ ನಲ್ಲಿ ನಾವು ಕಳಿಸುವ ಒಂದು ಮೆಸೇಜ್ ಸೆಂಡ್ ಆಗಿಲ್ಲಂದ್ರೆ ಗಲಿಬಿಲಿಗೊಂಡು ಅದೇ ಮೆಸೇಜನ್ನು ಕಳಿಸಲು ಪದೇ ಪದೇ ಟ್ರೈ ಮಾಡುತ್ತಾ ಇರುತ್ತೇವೆ ಆದರೆ ಪುತ್ತಿಗೆ ಪ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಜಿಯೋ ನೆಟ್ವರ್ಕ್ ಸಂಪಕ೯ಕ್ಕೆ ಸಿಗದಿರುವುದರಿಂದ ಜಿಯೋ ಬಳಕೆದಾರರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಪುತ್ತಿಗೆ ದ್ವಾರದ ಬಳಿ, ಕಡಲಕೆರೆ, ಗುಡ್ಡೆಯಂಗಡಿ ಹಾಗೂ ಪಳಕಳ ಪ್ರದೇಶದ, ಅಲಿ ನೆಟ್ವಕ್೯ ಸಿಗದಿರುವ ಬಗ್ಗೆ ಪುತ್ತಿಗೆ ಬಳಿಯ ಗ್ರಾಹಕರು ಜಿಯೋ ಕಂಪನಿಯ ಮೂಡುಬಿದಿರೆ ಕಛೇರಿಗೆ ಸಂಪಕಿ೯ಸಿದಾಗ ಅವರು ನೆಟ್ವಕ್೯ಗೆ ಸಂಬಂಧಪಟ್ಟವರ ನಂಬರನ್ನು ನೀಡಿದ್ದು ಅವರಿಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಲ್ಲವೆಂದು ಗ್ರಾಹಕರು ಆರೋಪಿಸಿದ್ದಾರೆ.
ಪುತ್ತಿಗೆ ವ್ಯಾಪ್ತಿಯಲ್ಲಿ ಈ ಹಿಂದೆ ಸರಿಯಾಗಿ ಮೊಬೈಲ್ ಗೆ ನೆಟ್ವಕ್೯ ಸಿಗುತ್ತಿತ್ತು ಆದರೆ ಇದೀಗ ಕಂಪನಿಯು ಸಿಮ್ ಮಾರಾಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

0 Comments