ಅ.20-21 : ಬನ್ನಡ್ಕ ಸಾವ೯ಜನಿಕ ಶ್ರೀ ಶಾರದೋತ್ಸವ

ಅ.20-21 : ಬನ್ನಡ್ಕ ಸಾವ೯ಜನಿಕ ಶ್ರೀ ಶಾರದೋತ್ಸವ 

ಮೂಡುಬಿದಿರೆ: ಮೂಡುಬಿದಿರೆ ಸಮೀಪದ ಬನ್ನಡ್ಕ ಶ್ರೀ ಕ್ಷೇತ್ರ ಕಲಾಮಂದಿರದಲ್ಲಿ ಅ. 20 ಮತ್ತು 21ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾಯ೯ಕ್ರಮಗಳೊಂದಿಗೆ ನಡೆಯುವ 5ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ನಡೆಯಲಿದೆ.

ಮಾರ್ನಾಡು ವೇದಮೂರ್ತಿ ಎಂ.ಆರ್. ಅನಂತ ಪದ್ಮನಾಭ ಅಸ್ರಣ್ಣರ ಪೌರೋಹಿತ್ಯದಲ್ಲಿ ಕಾರ್ಯಕ್ರಮಗಳು ಜರಗಲಿವೆ.
ಅಕ್ಟೋಬರ್ 20ರಂದು ಬೆಳಿಗ್ಗೆ 10.30ಕ್ಕೆ  ಶ್ರೀ ಶಾರದಾಂಬೆಯ ಪ್ರತಿಷ್ಠಾಪನೆ ನಡೆಯಲಿದೆ. ಮೂಡುಬಿದಿರೆ ಕನ್ನಡ ಭವನದಿಂದ ನಗರ ಮಾರ್ಗವಾಗಿ ಶ್ರೀ ಕ್ಷೇತ್ರ ಬನ್ನಡ್ಕಕ್ಕೆ ಮೆರವಣಿಗೆಯಲ್ಲಿ ಶಾರದಾ ಮಾತೆಯನ್ನು ಬರಮಾಡಿಕೊಳ್ಳಲಾಗುವುದು. 

ಟ್ರಸ್ಟ್ ಅಧ್ಯಕ್ಷ ಎಂ. ದಯಾನಂದ ಪೈ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿಸಲಿದ್ದು, ವೈಬ್ರೆಂಟ್ ಪಿಯು ಕಾಲೇಜಿನ ನಿರ್ದೇಶಕ ಡಾ. ಶರತ್ ಗೋರೆ ಧ್ವಜಾರೋಹಣ ಮಾಡಲಿದ್ದಾರೆ. ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್,  ಚೌಟರ ಅರಮನೆಯ ಕುಲದೀಪ್ ಎಂ. ಉಪಸ್ಥಿತರಿರಲಿದ್ದಾರೆ. ದೀಪಪ್ರಜ್ವಲನೆಯನ್ನು ಹೊಯಿಪಾಲಬೆಟ್ಟ ಮಾರ್ನಾಡು ಆಡಳಿತ ಮೊಕ್ತೇಸರ ರಾಜೇಶ್ ಬಲ್ಲಾಳ್ ನೆರವೇರಿಸಲಿದ್ದಾರೆ. ಅಲಂಗಾರಿನ ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಸುಬ್ರಹ್ಮಣ್ಯ ಭಟ್ ಭಜನಾ ಸಂಕೀರ್ತನೆ ನಡೆಸಿಕೊಡಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಹಾಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಗೋಲ್ಡನ್ ಗೇಟ್ ಅಲಂಗಾರಿನ ಹುರ್ಲಾಡಿ ರಘುವೀರ್ ಶೆಟ್ಟಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಧಾರ್ಮಿಕ ಸಭೆ ಮತ್ತು ಬಹುಮಾನ ವಿತರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಸಾಣೂರಿನ ದೇವಿಪ್ರಸಾದ್ ಶೆಟ್ಟಿ, ಉದ್ಯಮಿ ಸುದರ್ಶನ್ ಎಂ., ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ನಾರಾಯಣ ಪಿ.ಎಂ., ಮಯೂರಿ ಸಿಲ್ಕ್‌ನ ರಾಜೇಂದ್ರ ಜೈನ್, ಕೊಕ್ರಾಡಿಯ ದೇವೇಂದ್ರ ಹೆಗ್ಡೆ, ವಿಶ್ವತುಳುವ ಮಹಾಸಭಾ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ದೇವದಾಸ್ ಕಾಪಿಕಾಡ್, ರಾಯರ ಮನೆ ಮಾರ್ನಾಡುವಿನ ಹೇಮರಾಜ್ ರಾವ್, ರುದ್ರಾಂಶ ಕನ್‌ಸ್ಪೆಕ್ಷನ್‌ನ ಅಜಯ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.

 ರಾಷ್ಟ್ರಪತಿಯವರಿಂದ ಪ್ರಶಸ್ತಿ ಪುರಸ್ಕೃತರಾದ ಅನುಷಾ ಪ್ರಜ್ವಲ್ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ-2026 ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಕ ಕಿಶೋರ್ ಅವರನ್ನು ಗೌರವಿಸಲಾಗುವುದು.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಸಾಧು ಸನಿಲ್, ಮಾರೂರು ಗೋಪಾಲಕೃಷ್ಣ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಂಭು ಶೆಟ್ಟಿ, ಮೂಡುಬಿದಿರೆ ತಹಶೀಲ್ದಾರ್ ಶ್ರೀಧರ್ ಮುಂದಲಮನಿ, ಉದ್ಯಮಿ ಬೆನ್ನಿ, ಕೆ.ಎಂ.ಎಫ್. ಮಂಗಳೂರು ನಿರ್ದೇಶಕ ಸುಚರಿತ ಶೆಟ್ಟಿ, ಕಟೀಲ್ ಕನ್‌ಸ್ಪಕ್ಷನ್‌ನ ಅಭಿಲಾಷ್ ಶೆಟ್ಟಿ ಕಟೀಲ್, ಬಿಮಲ್ ಕನ್‌ಸ್ಪಕ್ಷನ್‌ನ ಪ್ರವೀಣ್ ಕುಮಾರ್, ವಕೀಲ ಚೇತನ್ ಕುಮಾರ್ ಶೆಟ್ಟಿ, ಉದ್ಯಮಿ ಅಬುಲಾಲ್ ಎಂ., ಗಣೇಶೋತ್ಸವ ಸಮಿತಿ ಬನ್ನಡ್ಕ ಅಧ್ಯಕ್ಷ ಕೇಶವ ಪೂಜಾರಿ ಹಾಗೂ ಶಾರದೋತ್ಸವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್ ಪಾಲ್ಗೊಳ್ಳಲಿದ್ದಾರೆ. ತೇಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಸಾರಥ್ಯದ ಚಾ ಪಠ್ಯ ಕಲಾವಿದರಿಂದ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ಸಂಜೆ 4.00ಕ್ಕೆ ನಡೆಯುವ ಸಭಾ ಕಾಯ೯ಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಪರಮಪೂಜ್ಯ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಅಧ್ಯಕ್ಷ ಎಂ. ದಯಾನಂದ ಪೈ ಅಧ್ಯಕ್ಷತೆ ವಹಿಸಲಿದ್ದಾರೆ.

ಬನ್ನಡ್ಕ ಶ್ರೀ ಶಾರದಾರತ್ನ ಪ್ರಶಸ್ತಿ-2026 ಅನ್ನು ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಡಾ. ಶ್ರೀ ರಾಮಕೃಷ್ಣ ಆಚಾರ್ಯ ಅವರಿಗೆ ಪ್ರದಾನ ಮಾಡಲಾಗುವುದು. ಕರ್ನಾಟಕ ಸರ್ಕಾರದ ಮಾಜಿ ಸಚಿವ ಬಿ. ಶ್ರೀರಾಮುಲು, ಕಾರ್ಕಳ ಶಾಸಕ ಸುನೀಲ್ ಕುಮಾರ್, ಬಿಜೆಪಿ ಕರ್ನಾಟಕದ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್,  ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಎ. ಕೋಟ್ಯಾನ್, ಕರ್ನಾಟಕ ಸರ್ಕಾರದ ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಹಾಗೂ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅಕ್ಟೋಬರ್ 21ರಂದು ಬೆಳಿಗ್ಗೆಯಿಂದ ಪ್ರಾತಃಪೂಜೆ, ಭಜನಾ ಸಂಕೀರ್ತನೆ, ಹೂ ಕಟ್ಟುವ ಸ್ಪರ್ಧೆ ಹಾಗೂ ನಾದಸ್ವರ ವಾದನ ನಡೆಯಲಿದೆ. ಸಂಜೆ ಶೋಭಾಯಾತ್ರೆಯಲ್ಲಿ ಶ್ರೀ ದೇವಿಯ ವಿಗ್ರಹವನ್ನು ಶ್ರೀ ಕ್ಷೇತ್ರ ಬನ್ನಡ್ಕದಿಂದ ಹೊರಟು ಅಲಂಗಾರಿನ ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಮಾನಸ ಗಂಗೋತ್ರಿ ಸರೋವರದಲ್ಲಿ ಜಲಸ್ತಂಭನಗೊಳಿಸಲಾಗುವುದು.

Post a Comment

0 Comments

Advertisement