*ಬಲಿಪ ಪ್ರಸಾದ ಸಂಸ್ಮರಣೆ*
*ವೆಂಕಟರಾಜ ಯಳಚಿತ್ತಾಯರಿಗೆ 16ನೇ ಬಲಿಪ ಪ್ರಸಾದ ಪ್ರಶಸ್ತಿ ಸನ್ಮಾನ*
ಮೂಡುಬಿದಿರೆ: ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತ ಬಲಿಪ ಪ್ರಸಾದ ಭಾಗವತ 50ರ ನೆನಪು "ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್" ಸರಣಿಯ 16ನೇ ಕಾರ್ಯಕ್ರಮವನ್ನು ಬನ್ನಡ್ಕ ಸಾರ್ವಜನಿಕ ಶ್ರೀ ಶಾರದೋತ್ಸವದ ಎಂ ದಯಾನಂದ ಪೈ ವೇದಿಕೆಯಲ್ಲಿ ಅ. 21ರಂದು ಹಮ್ಮಿಕೊಳ್ಳಲಾಯಿತು.
ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ (ರಿ.) ಬನ್ನಡ್ಕ ಇದರ ಅಧ್ಯಕ್ಷ ಎಂ. ದಯಾನಂದ ಪೈಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇರುವೈಲು ಮತ್ತು ತಳಕಳ ಮೇಳಗಳಲ್ಲಿ ವೇಷಧಾರಿಯಾಗಿ ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸಿರುವ ಬಹುರೂಪಿ ಸಾಧಕ, ಯಕ್ಷ ಗುರು ಪ್ರಸ್ತುತ ಬನ್ನಡ್ಕದಲ್ಲಿ ನೆಲೆಸಿರುವ ನಿವೃತ್ತ ಶಿಕ್ಷಕ ಕೆ. ವೆಂಕಟರಾಜ ಯಳಚಿತ್ತಾಯರಿಗೆ ಸರಣಿಯ 16ನೇ ಸನ್ಮಾನವನ್ನು ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಯಕ್ಷಗಾನಕ್ಕಾಗಿ ತಾನು ಅಳಿಲು ಸೇವೆ ಸಲ್ಲಿಸಿದ್ದು,ತನ್ನ ಸೇವೆಯನ್ನು ಗುರುತಿಸಿ ಹಿರಿಯ ಪತ್ರಕರ್ತ ಯಕ್ಷಗಾನ ಸಂಘಟಕ ಕೃಷ್ಣ ಕುಮಾರ್ ಬಳಗ ಪ್ರಶಸ್ತಿ ನೀಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ,ಸಮಾಜದಲ್ಲಿ ಪ್ರತಿಭಾವಂತರನ್ನು, ಸಮಾಜ ಸೇವಕರನ್ನು, ಕಲಾವಿದರನ್ನು ಗೌರವಿಸುವ ಸತ್ಕಾರ್ಯವನ್ನು ಸಮಾಜಮುಖಿ ಸಂಘಟನೆಗಳು ಮಾಡುವಂತಾಗಲಿ ಎಂದರು.ವಾಸ್ತು ತಜ್ಞ ಮಾರೂರು ರಾಘವೇಂದ್ರ ಭಂಡಾರ್ಕಾರ್ ಅವರು ಸನ್ಮಾನ ಪತ್ರವನ್ನು ವಾಚಿಸಿದರು.
ವೇದಿಕೆಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಹಿರಿಯ ಉದ್ಯಮಿ, ಯಕ್ಷಗಾನ ಪೋಷಕ ಕೆ. ಶ್ರೀಪತಿ ಭಟ್, ಸರಣಿ ಕಾರ್ಯಕ್ರಮದ ಗೌರವ ಸಲಹೆಗಾರ ಅಳಿಯೂರು ರುಕ್ಕಯ್ಯ ಪೂಜಾರಿ, ಬಿಜೆಪಿ ಧುರೀಣ ಕೆ.ಪಿ. ಜಗದೀಶ ಅಧಿಕಾರಿ, ಶ್ರೀ ಕ್ಷೇತ್ರ ಲಾಡಿ ನಾಗ ಬ್ರಹ್ಮ ಕ್ಷೇತ್ರದ ಆಡಳಿತ ಮೊಕ್ತೇಷಶರ, ಕಲಾವಿದ ಲಾಡಿ ರವಿಪ್ರಸಾದ್ ಕೆ. ಶೆಟ್ಟಿ, ನ್ಯಾಯವಾದಿ ಚೇತನ್ ಕುಮಾರ್ ಶೆಟ್ಟಿ, ಮೂಡುಬಿದಿರೆ ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಮತಿ ಶ್ರೀಗೌರಿ ಬನ್ನಡ್ಕ ಪ್ರಸ್ತಾವನೆಗೈದರು. ಹಿರಿಯ ಯಕ್ಷಗುರು ಅನಂತ ಪದ್ಮನಾಭ ಹೊಳ್ಳ, ನಿವೃತ್ತ ಪೊಲೀಸ್ ಅಧಿಕಾರಿ ವಾಸು ನಾಯ್ಕ ಕಡಿರುದ್ಯಾವರ, ವಿಶ್ವನಾಥ ನಾಯಕ್ ಕಲ್ಲಬೆಟ್ಟು, ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಅತಿಥಿಗಳಿಗೆ ಕೆ.ಎನ್. ಭಟ್ ಶಿರಾಡಿಪಾಲ್ ರಚಿತ "ನವನಿಧಿ" ಪುಸ್ತಕ ಮತ್ತು ಅವರ ಪುತ್ರಿ ಅನುಪಮಾ ಚಿಪ್ಳೂಣಕರ್ ಬರೆದಿರುವ "ಅಮ್ಮ" ಪುಸ್ತಕಗಳನ್ನು ನೀಡಿ ಗೌರವಿಸಿದರು. ವಿಜೇತಾ ಕಾಮತ್ ಬನ್ನಡ್ಕ ವಂದಿಸಿದರು.

0 Comments