ಮಹಾವೀರ ಕಾಲೇಜಿನಲ್ಲಿ ಹಣಕಾಸಿನ ಒಳಗೊಳ್ಳುವಿಕೆ, ಉದ್ಯಮಶೀಲತೆ, ಸುಸ್ಥಿರ ಅಭಿವೃದ್ಧಿ -ರಾಷ್ಟ್ರೀಯ ಸಮ್ಮೇಳನ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮಹಾವೀರ ಕಾಲೇಜಿನಲ್ಲಿ  ಹಣಕಾಸಿನ ಒಳಗೊಳ್ಳುವಿಕೆ, ಉದ್ಯಮಶೀಲತೆ, ಸುಸ್ಥಿರ ಅಭಿವೃದ್ಧಿ -ರಾಷ್ಟ್ರೀಯ ಸಮ್ಮೇಳನ

ಮೂಡುಬಿದಿರೆ  : ಶ್ರೀ ಮಹಾವೀರ ಕಾಲೇಜಿನ ಅರ್ಥಶಾಸ್ತ್ರ ವಿಭಾಗವು ಮಂಗಳೂರು ವಿ.ವಿ. ಅರ್ಥಶಾಸ್ತ್ರ ಸಂಘದ ಸಹಯೋಗದೊಂದಿಗೆ ‘ಹಣಕಾಸಿನ ಒಳಗೊಳ್ಳುವಿಕೆ, ಕೌಶಲ ಭಾರತ ಮತ್ತು ಉದ್ಯಮಶೀಲತೆ: ಸಮಗ್ರ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿ‘ ಶೀರ್ಷಿಕೆಯ ಒಂದು ದಿನದ  ಬಹುಶಿಸ್ತೀಯ ರಾಷ್ಟ್ರೀಯ ಸಮ್ಮೇಳನವು ಶನಿವಾರ ಮಹಾವೀರ ಕಾಲೇಜಿನಲ್ಲಿ  ನಡೆಯಿತು.

‘ಮಾಹೆ‘ ಮಣಿಪಾಲದ ಸಲಹೆಗಾರರು ಹಾಗೂ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ನ ಕಾರ್ಯದರ್ಶಿ ಡಾ. ನಾರಾಯಣ ಸಭಾಹಿತ್ ಅವರು ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ದಿನಗಳಲ್ಲಿ ಪ್ರಾಕೃತಿಕ ಸಂಪನ್ಮೂಲಗಳು ಕಡಿಮೆಯಾಗುತ್ತಿದ್ದು ಈ ನಿಟ್ಟಿನಲ್ಲಿ ತ್ಯಾಜ್ಯ ನಿರ್ವಹಣೆ, ವಿದ್ಯುತ್ ಶಕ್ತಿಯ ಬದಲಿ ವ್ಯವಸ್ಥೆಯಲ್ಲಿ ಸೂರ್ಯಶಕ್ತಿ, ವಾಯು ಶಕ್ತಿಯ ಬಳಕೆ ಮೊದಲಾದ ವಿಷಯಗಳಲ್ಲಿ  ಬಹಳಷ್ಟು ಕಾಳಜಿಯಿಂದ ಕೆಲಸ ಮಾಡಬೇಕಾಗಿದೆ ಎಂದರು.
ಇಂಗಾಲ ಶೂನ್ಯವಾತಾವರಣ ನಿರ್ಮಾಣ ಸೇರಿದಂತೆ ಹಲವು ವಿಷಯಗಳಲ್ಲಿ ನಾವು ಪರಿಸರ ಸಂರಕ್ಷಣೆ ಮಾಡಬೇಕಾಗಿದೆ. ಈ ದಿಸೆಯಲ್ಲಿ ವಿದ್ಯಾಸಂಸ್ಥೆಗಳಲ್ಲಿ ಹಸಿರು ಕ್ಲಬ್ ಸಂಘಟಿಸಿ  ಬೆಳೆಸುವುದಗತ್ಯವಾಗಿದೆ ಎಂದವರು ಹೇಳಿದರು.

ಮಣಿಪಾಲದ ಬ್ರಹ್ಮ ಟಿ. ಎಂ.ಎ. ಪೈ ಅವರು ಶಿಕ್ಷಣ, ಆರೋಗ್ಯ ಮತ್ತು ಉದ್ಯಮಶೀಲತೆ ವಿಷಯದಲ್ಲಿ ಸುದೂರದೃಷ್ಟಿ ಹೊಂದಿದ್ದರಿಂದಲೇ ಕರಾವಳಿಯ ಈ ಭಾಗ ಮೂರೂ ವಿಷಯಗಳಲ್ಲಿ ಅಭಿವೃದ್ಧಿ ಕಾಣಲುಸಾಧ್ಯವಾಗಿದೆ. ಯುವಜನರ ಕೌಶಲ್ಯ ಅಭಿವೃದ್ಧಿಯಿಂದ ನಿರುದ್ಯೋಗ ನಿವಾರಣೆಯಾಗುವುದೆಂಬ ಚಿಂತನೆ ಅವರದಾಗಿತ್ತು ಎಂಬುದು ಗಮನಾರ್ಹ ಎಂದು ಅವರು ಹೇಳಿದರು.

 ಬ್ಯಾಂಕ್ ಆಫ್ ಬರೋಡಾದ ಸಿಜಿಎಂ ಎಂ. ರವೀಂದ್ರ ರೈ ಅವರು  ಮುಖ್ಯ ಅತಿಥಿಯಾಗಿ ಸಂದೇಶ ನೀಡಿದರು. 

ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಅವರು  ಅಧ್ಯಕ್ಷತೆ ವಹಿಸಿ ಮಾತನಾಡಿಎಲ್ಲರೂ ವೈದ್ಯಕೀಯ ಎಂಜಿನಿಯರಿಂಗ್ ಶಿಕ್ಷಣ ದತ್ತ ಒಲವು ತೋರುತ್ತಿರುವ ಈ ಕಾಲದಲ್ಲಿ ಮಾನವಿಕ, ವಾಣಿಜ್ಯ ವಿಭಾಗಗಳು ಸೊರಗುತ್ತಿವೆ. ವಾಣಿಜ್ಯ, ಅರ್ಥಶಾಸ್ತ್ರ, ವ್ಯವಹಾರ ನಿರ್ವಹಣೆಯೇ ಮೊದಲಾದ ಜ್ನಾನಶಾಖೆಗಳನ್ನೂ ಬೆಳೆಸಬೇಕಾಗಿದೆ. ಆಗ ಮಾತ್ರ ದೇಶದ ಸಮಗ್ರ ಬೆಳವಣಿಗೆ ಸಾಧ್ಯ ಎಂದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರಿಸರ್ವ್ ಬ್ಯಾಂಕ್   ಬೆಂಗಳೂರಿನ ಫಿನ್ ಟೆಕ್ ವಿಭಾಗದ ಎಜಿಎಂ ಸ್ವಪ್ನಿಲ್ ಶಾನು ಭಾರ್ಗವ್  ದಿಕ್ಸೂಚಿ ಭಾಷಣ ಮಾಡಿದರು.
 
 ಕಾಲೇಜಿನ  ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಮುಖ್ಯಅತಿಥಿಗಳಾಗಿದ್ದರು. ಶ್ರೀ ಮಹಾವೀರ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮೀ ಮಾಲ೯, ಗೀತಾ ಕುಮಾರಿ, ಸಂಘಟನ ಸಮಿತಿಯ ಶ್ರೀಗೌರಿ, ಡಾ, ಮಂಜುಳಾ ಮಲ್ಯ ಸಹಿತ ಪ್ರಮುಖರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ. ರಾಧಾಕೃಷ್ಣ ಸ್ವಾಗತಿಸಿದರು. ಸಮ್ಮೇಳನದ ಸಂಯೋಜಕ ಉಜಿರೆ ಎಸ್ ಡಿಎಂ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗದ ಡಾ. ಮಹೇಶ್ ಕುಮಾರ್ ಶೆ್ಟ್ಟಿ ಎಚ್. ನಿರೂಪಿಸಿದರು. ಮಂ.ವಿ.ವಿ. ಅರ್ಥಶಾಸ್ತ್ರ ಸಂಘದ ಅಧ್ಯಕ್ಷೆ  ಶ್ರೀಲತಾ ಕಮಿಲ ವಂದಿಸಿದರು.

Post a Comment

0 Comments

Advertisement