ನಿಧನ
ಮೂಡುಬಿದಿರೆ: ಮೆಸ್ಕಾಂ ನಿವೃತ್ತ ಲೈನ್‌ಮೆನ್ ಸತೀಶ್ ಆಚಾರ್ಯ (೬೮) ಅವರು ವಿದ್ಯಾನಗರದಲ್ಲಿರುವ ಸ್ವಗೃಹದಲ್ಲಿ ಹೃದಯಾಘಾತದಿಂದ ಬುಧವಾರ ನಿಧನರಾದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಸತೀಶ್ ಆಚಾರ್ಯ ಅವರು ಹೊಸ್ಮಾರ್, ಶಿರ್ವ, ಸೂಡ ಮೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು ೩೬ ವರ್ಷಗಳ ಕಾಲ ಲೈನ್‌ಮೆನ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕವೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

0 Comments