ನಾಯಕತ್ವಕ್ಕೆ ಬೇಕಾಗುವ ಗುಣಗಳನ್ನು ಬೆಳೆಸಿಕೊಳ್ಳಿ : ಡಾ. ಪ್ರಭಾತ್ ಬಲ್ನಾಡ್

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ನಾಯಕತ್ವಕ್ಕೆ ಬೇಕಾಗುವ ಗುಣಗಳನ್ನು ಬೆಳೆಸಿಕೊಳ್ಳಿ : ಡಾ. ಪ್ರಭಾತ್ ಬಲ್ನಾಡ್
ಮೂಡುಬಿದಿರೆ : ನಾಯಕತ್ವ ಎಂದರೆ ದೇಶ ಕಟ್ಟುವ ಕೆಲಸ. ನಿಮ್ಮಲ್ಲಿ ಉತ್ತಮ ದೃಷ್ಟಿಕೋನ, ಮುಂದಾಲೋಚನೆ,   ಸಂವಹನ ಕೌಶಲ್ಯ, ಆತ್ಮವಿಶ್ವಾಸ,  ನಿಧಾ೯ರ ತೆಗೆದುಕೊಳ್ಳುವ ಗುಣ,  ಜವಾಬ್ದಾರಿ, ಸಹಾನುಭೂತಿ, ನಿಷ್ಠೆ, ಸಮಸ್ಯೆಗಳನ್ನು ಎದುರಿಸುವ ಗುಣ ಹಾಗೂ ಇನ್ನೊಬ್ಬರಿಗೆ ಸ್ಪೂತಿ೯ಯಾಗುವ ಗುಣಗಳಿದ್ದರೆ  ಉತ್ತಮ ನಾಯಕರಾಗಲು ಸಾಧ್ಯ ಎಂದು ಜೈನ ಪ. ಪೂ. ಕಾಲೇಜಿನ ಪ್ರಾಂಶುಪಾಲ ಡಾ. ಡಾ.ಪ್ರಭಾತ್ ಬಲ್ನಾಡ್ ಹೇಳಿದರು. 

ಅವರು ಕಂಬಳ ಸಂರಕ್ಷಣೆ, ನಿವ೯ಹಣೆ ಮತ್ತು ತರಬೇತಿ ಅಕಾಡೆಮಿ ಮಿಯಾರು ಕಾಕ೯ಳ ಇದರ ವತಿಯಿಂದ ಒಂಟಿಕಟ್ಟೆ ಕಡಲಕೆರೆ ಸೃಷ್ಟಿ ಗಾಡ೯ನ್ ನಲ್ಲಿ ನಡೆಯುತ್ತಿರುವ ಏಳನೇ ವಷ೯ ಕಂಬಳ ತರಬೇತಿ ಶಿಬಿರದ ಮೂರನೇ ದಿನವಾಗಿರುವ ಸೋಮವಾರ ಸಂಜೆ ನಡೆದ ಸಭಾ ಕಾಯ೯ಕ್ರಮದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ 'ನಾಯಕನಿಗಿರುವ ಗುಣ ಲಕ್ಷ್ಮಣಗಳು' ಎಂಬ ವಿಷಯದ ಬಗ್ಗೆ ಮಾತನಾಡಿದರು. 
 ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ನಾಯಕತ್ವದ ಗುಣಗಳಿರುತ್ತವೆ. ಮೊದಲು ನಾವು, ನಮ್ಮ ಮನೆ ಸರಿಯಾಗಬೇಕು ಆಗ ಜಗತ್ತಿನ ಮುಂದೆ ಭಾರತ ಬಲಿಷ್ಠ ರಾಷ್ಟ್ರವಾಗುತ್ತದೆ.  ಕಂಬಳ ಕ್ಷೇತ್ರದಲ್ಲಿ ನಾಯಕರಾಗುವುದು ಒಂದು ದೇಶ ಸೇವೆಗೆ ಸಮಾನ. ನಮ್ಮ ಸಂಸ್ಕೃತಿಯನ್ನು ಕಟ್ಟುವ ಕೆಲಸ ಈ ಕ್ರೀಡೆಯಿಂದಾಗುತ್ತಿದೆ ಆದ್ದರಿಂದ ಅವಕಾಶಗಳನ್ನು ಬಳಸಿಕೊಳ್ಳಿ ಎಂದರು. 

 ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ ಅಧ್ಯಕ್ಷತೆಯನ್ನು ವಹಿಸಿದ್ದರು.  
 
ಸಿಟಿ ಲಯನ್ಸ್ ಕ್ಲಬ್ ಕಾರ್ಕಳ ಕಾಯ೯ದಶಿ೯ ನಿಹಾಲ್ ಶೆಟ್ಟಿ, ಕಿಶೋರ್ ಹೊಸ್ಮಾರು, ದೈ. ಶಿ. ಶಿ, ಯೋಗ ತರಬೇತುದಾರ ನವೀನ್ ಅಂಬೂರಿ, ಉದ್ಘೋಷಕ ರವೀಂದ್ರ ಶೆಟ್ಟಿ ಕುಕ್ಕುಂದೂರು, ಮೂಡುಬಿದಿರೆ ಪ್ರೆಸ್ ಕ್ಲಬ್ ಕಾಯ೯ದಶಿ೯ ಪ್ರೇಮಶ್ರೀ ಕಲ್ಲಬೆಟ್ಟು, ಜ್ವಾಲಾ ಪ್ರಸಾದ್ ಉಪಸ್ಥಿತರಿದ್ದರು.

 ಶಿಬಿರಾಥಿ೯ ಉತ್ತಮ್ ತಂಡದ ವರದಿ ನೀಡಿದರು. ಕುಶ ತಂಡದ ಹಷಿ೯ತ್ ಶೆಟ್ಟಿ ಬಳಕುಂಜೆ ಕಾಯ೯ಕ್ರಮ ನಿರೂಪಿಸಿದರು. ದಿಗಂತ್ ಸಾಂತ್ಯ ವಂದಿಸಿದರು.

Post a Comment

0 Comments

Advertisement