ಪ್ರೇರಣಾ ಶಾಲೆ ಕಡಲಕೆರೆ , ಮೂಡಬಿದಿರೆಯಲ್ಲಿ " ನಮಾಮಿ ಭಾರತಂ " ಕಾರ್ಯಕ್ರಮ ಆಚರಣೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಪ್ರೇರಣಾ ಶಾಲೆ ಕಡಲಕೆರೆ , ಮೂಡಬಿದಿರೆಯಲ್ಲಿ " ನಮಾಮಿ ಭಾರತಂ " ಕಾರ್ಯಕ್ರಮ ಆಚರಣೆ 

      ಮೂಡುಬಿದಿರೆ : ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಇವರ ವತಿಯಿಂದ " ನಮಾಮಿ ಭಾರತಂ " ವಂದೇ ಮಾತರಂ ಸಾಮೂಹಿಕ ಗೀತಾ ಪಠಣ ಕಾರ್ಯಕ್ರಮ ಪ್ರೇರಣಾ ಶಾಲೆ ಕಡಲಕೆರೆಯಲ್ಲಿ  ಜರುಗಿತು . ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಸಂದರ್ಭದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಅನಂತ ಚತುರ್ದಶಿಯಂದು ಬೆಳಿಗ್ಗೆ 11 ಗಂಟೆಗೆ ಭಾರತದಾದ್ಯಂತ ಏಕಕಾಲದಲ್ಲಿ ಒಂದು ಕೋಟಿಗೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ಯೋಜನೆಯ ಅಂಗವಾಗಿ ‌ ಪ್ರೇರಣಾ ಶಾಲೆಯ ಎಲ್ಲಾ ಶಿಕ್ಷಕರು ಸಹಿತ  320 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು . 3.12 ನಿಮಿಷಗಳಲ್ಲಿ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಲಾಯಿತು .
           ಪ್ರೇರಣಾ ಶಾಲೆಯ ಸಂಚಾಲಕರಾದ ಎಂ.ಶಾಂತರಾಮ ಕುಡ್ವ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ
 " ಬಂಕಿಮಚಂದ್ರ ಚಟರ್ಜಿಯವರು  ಸಂಸ್ಕೃತ ಭಾಷೆಯಲ್ಲಿ ಬಂಗಾಳಿ ಲಿಪಿಯಲ್ಲಿ  ರಚಿಸಿದ ವಂದೇ ಮಾತರಂ ಗೀತೆಯು ಬಂಗಾಳದ ಬಂಗದರ್ಶನ ಪತ್ರಿಕೆಯಲ್ಲಿ 07.11.1875 ರಂದು ಪ್ರಥಮವಾಗಿ ಪ್ರಕಟವಾಯಿತು . ನಂತರ 1882 ರಲ್ಲಿ ಚಟರ್ಜಿಯವರ ಆನಂದಮಠ ಕಾದಂಬರಿಯಲ್ಲಿ ಸೇರ್ಪಡೆಯಾಯಿತು  . ವಂದೇ ಮಾತರಂ ಎಂದರೆ  ಸಂಸ್ಕೃತದಲ್ಲಿ ಭಾರತ ಮಾತೆಗೆ ನಮಿಸು ಎಂಬ ಅರ್ಥ . ಈ ಗೀತೆಯು ಅಂದಿನ ಕಾಲದಲ್ಲಿ ಸ್ವಾತಂತ್ರ್ಯ ಯೋಧರಿಗೆ ಸ್ಫೂರ್ತಿ ನೀಡಿದ್ದಲ್ಲದೇ ದೇಶಾದ್ಯಂತ ಸಂಚಲನ ಮೂಡಿಸಿತ್ತು . ಬ್ರಿಟಿಷರ ವಿರುದ್ಧದ ಸ್ವದೇಶಿ ಚಳುವಳಿಗೆ ಈ ಹಾಡು ಪ್ರೇರಕವಾಯಿತು ‌. ಕುದಿರಾಮ್ ಬೋಸ್ , ಸುಭಾಷ್ ಚಂದ್ರ ಬೋಸ್ ,  ಅಜಾದ್ , ಭಗತ್ ಸಿಂಗ್ ಮುಂತಾದ  ಸ್ವಾತಂತ್ರ್ಯ ಹೋರಾಟಗಾರನ್ನು ಉತ್ತೇಜಿಸಿದ ಈ ಗೀತೆಯನ್ನು  1896 ರಲ್ಲಿ ರವೀಂದ್ರನಾಥ ಠಾಗೋರ್ ರವರು ತಾವೇ ರಾಗ ಸಂಯೋಜಿಸಿ  ಹಾಡಿ ಹೊಸ ಕ್ರಾಂತಿಗೆ ಮುನ್ನಡಿ ಬರೆದರು . ಅರವಿಂದ್ ಘೋಷ್ ರವರು 1907 ರಲ್ಲಿ ವಂದೇ ಮಾತರಂ ಗೀತೆಯನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದರು . ಇದೀಗ ವಂದೇ ಮಾತರಂ ಗೆ ಭಾರತ ಸರಕಾರವು ರಾಷ್ಟ್ರಗೀತೆಯ ಸ್ಥಾನಮಾನ ನೀಡಿರುವುದು ಉತ್ತಮ ಆಶಯ " ಎಂದು ನುಡಿದರು .

 ಶಾಲಾ ಮುಖ್ಯ ಮಾತಾಜಿ  ವತ್ಸಲಾ ರಾಜೇಶ್ ರವರು  ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು . ಶಾಲಾ ಶಿಕ್ಷಕರಾದ ಶ್ರೀ ಸುರೇಂದ್ರ , ಶಿಕ್ಷಕಿಯರಾದ ಹರ್ಷಿತಾ ,  ಗ್ರೀಷ್ಮಾ  ಹಾಗೂ ಕು.ಮಯೂರಿ ಅವರು ವಂದೇ ಮಾತರಂ ಗೀತೆಯನ್ನು ಚಿತ್ರೀಕರಿಸಿ ವೆಬ್ ಸೈಟ್ ಗೆ  ಅಪ್ಲೋಡ್ ಮಾಡಲು  ಸಹಕರಿಸಿದರು .

Post a Comment

0 Comments

Advertisement