ಮೂಡುಬಿದಿರೆಯಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ *ಜವಾಬ್ದಾರಿಯುತ ಹುದ್ದೆ ಶಿಕ್ಷಕರದ್ದು : ಶಾಸಕ ಕೋಟ್ಯಾನ್

ಮೂಡುಬಿದಿರೆಯಲ್ಲಿ   ತಾಲೂಕು ಮಟ್ಟದ  ಶಿಕ್ಷಕರ  ದಿನಾಚರಣೆ 
*ಜವಾಬ್ದಾರಿಯುತ ಹುದ್ದೆ ಶಿಕ್ಷಕರದ್ದು : ಶಾಸಕ ಕೋಟ್ಯಾನ್ 


ಮೂಡುಬಿದಿರೆ : ಸರಕಾರಿ ಸೇವೆ ಮಾಡುವವರು ತುಂಬಾ ಜನರಿದ್ದಾರೆ. ಜವಾಬ್ದಾರಿಯುತ ಹುದ್ದೆಯಲ್ಲಿರುವ ಶಿಕ್ಷಕರು  ಪ್ರತಿಭಾನ್ವಿತ  ವಿದ್ಯಾರ್ಥಿಗಳನ್ನು  ಗುರುತಿಸಿ  ಅವರನ್ನು  ಪ್ರೋತ್ಸಾಹಿಸುವುದರೊಂದಿಗೆ  ಕಲಿಕೆಯಲ್ಲಿ  ಹಿಂದುಳಿದಿರುವ  ವಿದ್ಯಾರ್ಥಿಗಳ ಕಡೆ ಗಮನ ಹರಿಸಿ  ಅವರಲ್ಲಿ  ಆತ್ಮವಿಶ್ವಾಸ ತುಂಬುವ ಕೆಲಸವನ್ನು  ಮಾಡುವ ಮೂಲಕ ಪೋಷಕರು  ಶಿಕ್ಷಕರ ಮೇಲೆ  ಇಟ್ಟಿರುವ  ನಂಬಿಕೆಯನ್ನು ಹುಸಿಗೊಳಿಸಬೇಡಿ ಎಂದು  ಶಾಸಕ  ಉಮಾನಾಥ ಕೋಟ್ಯಾನ್  ಹೇಳಿದರು .
 
ಅವರು ದ.ಕ  ಜಿಲ್ಲಾ  ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಶಿಕ್ಷಕರ ದಿನಾಚರಣೆ ಸಮಿತಿ, ಶಿಕ್ಷಕರ  ಕಲ್ಯಾಣ ನಿಧಿ  ಇವರ  ಸಂಯುಕ್ತ  ಆಶ್ರಯದಲ್ಲಿ  ಶನಿವಾರ  ಕನ್ನಡಭವನದಲ್ಲಿ  ನಡೆದ  ಮೂಡುಬಿದಿರೆ  ತಾಲೂಕು  ಮಟ್ಟದ ಶಿಕ್ಷಕರ ದಿನಾಚರಣೆ  ಉದ್ಘಾಟಿಸಿ  ಮಾತನಾಡಿದರು.

ನಿವೃತ್ತ  ಕ್ಷೇತ್ರ  ಶಿಕ್ಷಣಾಧಿಕಾರಿ  ರವಿಶಂಕರ ರಾವ್ ಕೆ  ಅವರು ದಿಕ್ಸೂಚಿ  ಭಾಷಣ  ಮಾಡಿ ಶಿಕ್ಷಕರಿಗೆ ಉತ್ತಮವಾದ ಹುದ್ದೆಯಿದೆ, ಸವಲತ್ತುಗಳಿಗೆ ತೊಂದರೆಯಿಲ್ಲ ಆದರೆ ನೀಮ್ಮ ಆರೋಗ್ಯದ ಕಡೆಗೆ ಗಮನವಿರಲಿ ಎಂದು ಸಲಹೆ ನೀಡಿದರು.

ಇದೇ  ಸಂದರ್ಭದಲ್ಲಿ  ಎಸ್.ಎಸ್.ಎಲ್.ಸಿಯಲ್ಲಿ  ಅತೀ  ಹೆಚ್ಚು  ಅಂಕ ಗಳಿಸಿದ  ವಿದ್ಯಾರ್ಥಿಗಳು ಹಾಗೂ  ಶೇ  ೧೦೦ ಫಲಿತಾಂಶ  ದಾಖಲಿಸಿದ  ಶಾಲೆಗಳನ್ನು  ಗೌರವಿಸಲಾಯಿತು.  ಉತ್ತಮ ಎಸ್ ಡಿ ಎಂ ಸಿ ಪ್ರಶಸ್ತಿ ಪಡೆದ ಶಾಲೆಗಳನ್ನು ಗೌರವಿಸಲಾಯಿತು. ಶಿಕ್ಷಕರಿಗಾಗಿ ನಡೆದ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರತಿಭಾವಂತ ಶಿಕ್ಷಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಳೆದ ಬಾರಿಯ ಜಿಲ್ಲಾ ರಾಜ್ಯೋತ್ಸವ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರತ್ನಾವತಿ ಕೆ, ಹರೀಶ್ ಕೆ.ಎಂ, ಉಷಾಲತಾ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಹಾಗೂ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ ಶಾಲೆಗಳಲ್ಲಿ ೨೦೨೫-೨೬ ರಲ್ಲಿ ನಿವೃತ್ತರಾದ ೧೯ ಮಂದಿ ಶಿಕ್ಷಕರನ್ನು ಸನ್ಮಾನಿಸಲಾಯಿತು. 
ಮಾಜಿ ಸಚಿವ ಅಭಯಚಂದ್ರ ಜೈನ್, ಜಿ.ಪಂ ಮಾಜಿ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ,  ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉದ್ಯಮಿ ಕೆ ಶ್ರೀಪತಿ ಭಟ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಶಿರೂರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಕಾಂತ ಜೈನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೊರೆಸ್ವಾಮಿ, ಬಿಆರ್‌ಸಿ ಸಂಯೋಜಕಿ ಸೌಮ್ಯ, ಗ್ರೇಡ್ ೧ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನವೀನ ಅಂಬೂರಿ ಉಪಸ್ಥಿತರಿದ್ದರು.
ಬಿಇಒ ವಿರೂಪಾಕ್ಷಪ್ಪ ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧೀಕಾರಿ ರಿತೇಶ್ ಶೆಟ್ಟಿ ವಂದಿಸಿದರು. ನವೀನ ಅಂಬೂರಿ ಕಾರ್‍ಯಕ್ರಮ ನಿರ್ವಹಿಸಿದರು.

Post a Comment

0 Comments

Advertisement