ಮೂಡುಬಿದಿರೆ : ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ವತಿಯಿಂದ ತಾಲೂಕಿನ ನೆಲ್ಲಿಕಾರು ಕಾರ್ಯಕ್ಷೇತ್ರದ ಚಾಮುಂಡೇಶ್ವರಿ ಕೇಂದ್ರದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದಿನಾಟಕ ಕಾರ್ಯಕ್ರಮವನ್ನು ನಡೆಸಲಾಯಿತು.
ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಮುನಿರಾಜ ಹೆಗ್ಡೆ ಅವರು ಟಮಟೆ ಬಾರಿಸುವ ಮೂಲಕ ಕಾಯ೯ಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕೇಂದ್ರ ಕಚೇರಿಯ ಜ್ಞಾನವಿಕಾಸ ವಿಭಾಗದ ನಿರ್ದೇಶಕರಾದ ದಿನೇಶ್ ಪೂಜಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಆದ ಬದಲಾವಣೆ ಹಾಗೂ ಜ್ಞಾನವಿಕಾಸ ಕಾರ್ಯಕ್ರಮದ ಪ್ರಾಮುಖ್ಯತೆ ಕುರಿತು ತಿಳಿಸಿದರು.
ಒಕ್ಕೂಟದ ಅಧ್ಯಕ್ಷ ಶೇಖರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ನೆಲ್ಲಿಕಾರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಉದಯ ಪೂಜಾರಿ ಅವರು ಮಾತನಾಡಿ ಇದೊಂದು ಯೋಜನೆಯ ಅತ್ಯುತ್ತಮ ವಿಶೇಷ ಆಕರ್ಷಣಿಯ ಕಾರ್ಯಕ್ರಮ ಎಂದರು.
ಸತ್ಯನಾರಾಯಣ ದೇವಾಸ್ಥಾನ ಸಮಿತಿ ಅಧ್ಯಕ್ಷರಾದ ಜಯಂತ ಹೆಗ್ಡೆ , ಎಸ್ಡಿಎಂಸಿ ಅಧ್ಯಕ್ಷ ಸತೀಶ್ ಪೂಜಾರಿ, ತಾಲೂಕು ಯೋಜನಾಧಿಕಾರಿ ಧನಂಜಯ್, ಜ್ಞಾನವಿಕಾಸ ಸಮನ್ವಯಧಿಕಾರಿ ವಿನುತಾ ಶೆಟ್ಟಿ, ಮೇಲ್ವಿಚಾರಕಿ ಪುಷ್ಪ ಸೇವಾಪ್ರತಿನಿಧಿ ಚಿಕ್ಕಯ್ಯ , ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
ನಂತರ ಕರಾವಳಿ ಜಾನಪದ ಕಲಾ ತಂಡದವರಿಂದ ಪರಿಸರ ಸಂರಕ್ಷಣೆ, ಆರೋಗ್ಯ, ಸ್ವಚ್ಛತೆ, ಗಿಡಮರ ಬೆಳೆಸುವ ಅನಿವಾರ್ಯತೆ, ಸ್ತನದ ಕ್ಯಾನ್ಸರ್, ಅನಕ್ಷರತೆ ನಿರ್ಮೂಲನೆ, ಮತದಾನ, ಪೌಷ್ಟಿಕ ಆಹಾರ ಸೇವನೆ ಮದ್ಯವ್ಯಸನ ದುಷ್ಪಾರಿಣಾಮ, ಶಿಕ್ಷಣದ ಪ್ರಾಮುಖ್ಯತೆ, ಅರೋಗ್ಯ ಮತ್ತು ಸ್ವಚ್ಛತೆ, ಮಕ್ಕಳಲ್ಲಿ ಮೊಬೈಲ್ ಬಳಕೆ,ಅಂತರ್ಜಲ ಉಳಿಸುವಿಕೆ ನೀರಿನ ಹಿತ ಮಿತ ಬಳಕೆ, ಜ್ಞಾನವಿಕಾಸ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಈ ಎಲ್ಲಾ ವಿಚಾರಗಳನ್ನೊಳಗೊಂಡು ಹಾಡು ನಟನೆಗಳ ಮೂಲಕ ಅಭಿನಯಿಸಿ ತೋರಿಸಿದರು.


0 Comments