ಮಿಜಾರಿನ ಶ್ರೀ ನಿಧಿ ಸ್ವ ಸಹಾಯ ತಂಡದ ಸದಸ್ಯರಾದ ಸುರೇಶ ಅವರು ತಲೆಗೆ ಪೆಟ್ಟು ಬಿದ್ದು ಮರಣ ಹೊಂದಿದ ಕಾರಣ ಅವರು ನಮ್ಮ ಸಹಕಾರಿಯಲ್ಲಿ ಸದಸ್ಯರಾಗಿ ಸಾಲವನ್ನು ಪಡೆದಿದ್ದು ಆಡಳಿತ ಮಂಡಳಿ ಸಭೆಯ ನಿರ್ಣಯದಂತೆ ಅವರ ಸಾಲವನ್ನು ರೂ 63520/- ನ್ನು ನಮ್ಮ ಸಹಕಾರಿಯು ಸಂಪೂರ್ಣ ಭರಿಸಿ ಸಾಲವನ್ನು ಮುಕ್ತಾಯಗೊಳಿಸಲಾಗಿದೆ.
ತೋಡಾರಿನ ತುಡರ್ ಸ್ವ ಸಹಾಯ ತಂಡದ ಸದಸ್ಯರಾದ ಆಶೋಕ ಪರವ ಹೃದಯಾಘಾತದಿಂದ ಮರಣ ಹೊಂದಿದ್ದು ಅವರ ಸಂಪೂರ್ಣ ಸಾಲ ರೂ 39548/- ಸಹಕಾರಿಯು ಭರಿಸಿರುತ್ತಾರೆ. ಹಾಗೂ ಈ ಸಂದರ್ಭದಲ್ಲಿ ಸ್ವ ಸಹಾಯ ತಂಡದ ಸದಸ್ಯರಿಗೆ ಅಸೌಖ್ಯದ ಕಾರಣ ಆರ್ಥಿಕ ಸಹಾಯವನ್ನು ನೀಡಲಾಯಿತು.
ಸಹಕಾರಿಯ ನಿರ್ದೇಶಕರುಗಳಾದ ಶಂಕರನಾರಾಯಣ ಭಟ್, ಸುರೇಶ್ ಪೂಜಾರಿ ಎಂ, ರಾಜೇಂದ್ರ ಬಿ., ರವೀಂದ್ರ ಕರ್ಕೇರ, ರಮೇಶ್ ಎಸ್ ಶೆಟ್ಟಿ, ಉಷಾ, ರತ್ನಾಕರ ಪೂಜಾರಿ, ಶರತ್ ಜೆ.ಶೆಟ್ಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ರಾಜಶೇಖರ ಮಧ್ಯಸ್ಥ ಅವರು ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.


0 Comments