ಮೂಡುಬಿದಿರೆ : ನೀಟ್ ಅಕ್ರಮ ಪ್ರಶ್ನಿಸಿ ಧ್ವನಿಯೆತ್ತಿದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ,ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರನ್ನು ಬಂಧಿಸಿರುವ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಆಡಳಿತ ಸೌಧದ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ಅಭಯಚಂದ್ರ ಅವರು ಮಾತನಾಡಿ ಲಕ್ಷಾಂತರ ರೂ. ಖಚು೯ ಮಾಡಿ ನೀಟ್ ಕೋಚಿಂಗ್ ಪಡೆದು ಪರೀಕ್ಷೆ ಬರೆಯಬೇಕೆಂದು ಕನಸು ಕಂಡ ದೇಶದ ಅದೆಷ್ಟೋ ವಿದ್ಯಾರ್ಥಿಗಳಿಗೆ ಬಿಜೆಪಿ ಸರಕಾರದ ಮಂತ್ರಿಗಳು ತಮ್ಮ ಸಂಬಂಧಿಕರ ಮಕ್ಕಳಿಗಾಗಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಿದೆ. ತಮಗಾದ ಅನ್ಯಾಯವನ್ನು ಪ್ರಶ್ನಿಸಲು ಹೋದರೆ ಮೋದಿ ನೇತೃತ್ವದ ಬಿಜೆಪಿ ಸರಕಾರವು ಹಿಂಸೆ ನೀಡಿದೆ ಎನ್ನುವುದು ಜನರಿಗೆ ಗೊತ್ತಿದೆ,ನಮ್ಮ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿರುವುದು ಖಂಡನೀಯ,ಇದನ್ನು ಕಾಂಗ್ರೆಸಿಗರು ಸಹಿಸುವುದಿಲ್ಲ’ ಎಂದರು.
ಕೆಪಿಸಿಸಿ ಕಾಯ೯ದಶಿ೯ ಮಿಥುನ್ ರೈ ಅವರು ಮಾತನಾಡಿ ನೀಟ್ ಪರೀಕ್ಷೆಯಿಂದ ಅನ್ಯಾಯವಾಗಿದೆ ಎಂದು ಯುವ ಸಮುದಾಯವು ಆರೋಪಿಸಿ ದೆಹಲಿಯ ಜಂತರ್-ಮಂತರ್ ನಲ್ಲಿ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದೆ. ಕಳೆದ ಏಳು ವಷ೯ಗಳಲ್ಲಿ ಹಲವು ಬಾರಿ ನೀಟ್ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿರುವ ಬಿಜೆಪಿ ಸರಕಾರವನ್ನು ಖಂಡಿಸಿದ ಅವರು ದೇಶದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅನ್ಯಾಯವೆಸಗಿದೆ. 23 ವಿದ್ಯಾಥಿ೯ಗಳ ಕೊಲೆಗೆ ಕಾರಣವಾಗಿರುವ ಶಿಕ್ಷಣ ಮಂತ್ರಿ ಧಮೇ೯ಂದ್ರ ಪ್ರಧಾನ್ ಅನ್ಯಾಯವನ್ನು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ ವಿದ್ಯಾರ್ಥಿಗಳ ಮೇಲೆ ಮತ್ತು ಬೆಂಬಲ ಸೂಚಿಸಿದ ಸೋನಂ ವಾಕ್ಚು ಮೇಲೆ ಮೋದಿ ಸರಕಾರವು ಸರ್ವಾಧಿಕಾರಿಯಂತೆ ಹಿಂಸೆ ನೀಡುತ್ತಿದೆ, ನಮ್ಮ ನಾಯಕರನ್ನೂ ಬಂಧಿಸಲಾಗಿದೆ, ವಿದ್ಯಾರ್ಥಿಗಳ ಬೇಡಿಕೆಗೆ ಕೇಂದ್ರ ಸರಕಾರವು ಸ್ಪಂದಿಸಬೇಕು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು. ಹಿಟ್ಲರ್ ನಂತೆ ಸರ್ವಾಧಿಕಾರಿಯಂತೆ ವರ್ತಿಸುವ ಮೋದಿ ಸರಕಾರದ ಕೊನೆಗಾಲ ಸಮೀಪಿಸುತ್ತಿದೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ನಗರ ಕಾಂಗ್ರೆಸ್ ಅಧ್ಯಕ್ಷ ಜೊಸ್ಸಿ ಮಿನೇಜಸ್, ಮೂಡುಬಿದಿರೆ ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ,ಪ್ರಮುಖರಾದ ಸುರೇಶ್ ಪ್ರಭು, ಚಂದ್ರಹಾಸ ಸನಿಲ್,ರುಕ್ಕಯ್ಯ ಪೂಜಾರಿ, ರಮೇಶ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಇಕ್ಬಾಲ್ ಕರೀಮ್, ಟಿ.ಎನ್.ಕೆಂಬಾರೆ, ಸತೀಶ್ ಕೋಟ್ಯಾನ್, ರೆಕ್ಸನ್ ಪಿಂಟೊ, ಪ್ರವೀಣ್ ಇರುವೈಲ್, ಕುಮಾರ್ ಪೂಜಾರಿ, ಪ್ರದೀಪ್ ಇರುವೈಲ್, ದಿನೇಶ್ ಪ್ರಭು ಇರುವೈಲ್, ಪ್ರಶಾಂತ್ ಅಮೀನ್,ಸವಿತಾ ಟಿ.ಎನ್, ದಿಲೀಪ್ ಕುಮಾರ್ ಶೆಟ್ಟಿ, ವಾಸುದೇವ ನಾಯಕ್, ಹರೀಶ್ ಆಚಾರ್ಯ, ಪುರುಷೋತ್ತಮ ನಾಯಕ್,ಅನೀಶ್ ಡಿಸೋಜ,ಪಿ.ಕೆ.ಥೋಮಸ್, ಕೊರಗಪ್ಪ, ವಲೇರಿಯನ್ ಸಿಕ್ವೇರಾ, ಶೇಖರ್ ಬೊಳ್ಳಿ, ಸತೀಶ್ ಭಂಡಾರಿ,ಸುರೇಶ್ ಕೋಟ್ಯಾನ್, ವರುಣ್, ಲತೀಫ್,ಅಶ್ರಫ್ ಮರೋಡಿ, ಸಲಾಮ್ ಹೊಸಂಗಡಿ,ಗಣೇಶ್ ಶೆಟ್ಟಿ, ಶಾಬಾಝ್ ಬೆಳುವಾಯಿ, ಹಿಮಾಯತ್, ಮತ್ತಿತರರು ಉಪಸ್ಥಿತರಿದ್ದರು.
ಜೈಸನ್ ಪಿರೇರಾ ಬೋರುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.


0 Comments