*ಕೊಡ್ಯಡ್ಕ ಅನ್ನಪೂಣೇ೯ಶ್ವರಿಯ ಸನ್ನಿದಾನದಲ್ಲಿ ಗಿಡ ನೆಟ್ಟ ಸಂಸದ ಬ್ರಿಜೇಶ್ ಚೌಟ
ಮೂಡುಬಿದಿರೆ : ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಲ್ಪನೆಯ " ಏಕ್ ಪೇಡ್ ಮಾ ಕೆ ನಾಮ್" ಅಭಿಯಾನದಂಗವಾಗಿ ಮೂಡುಬಿದಿರೆ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಕೊಡ್ಯಡ್ಕ ಅನ್ನಪೂಣೇ೯ಶ್ವರಿ ದೇವಸ್ಥಾನದ ಆವರಣದಲ್ಲಿ ಮಂಗಳೂರು ಸಂಸದ ಬ್ರಿಜೇಶ್ ಚೌಟ ಅವರು ಭಾನುವಾರ ಗಿಡ ನೆಟ್ಪು ಪರಿಸರ ಸಂರಕ್ಷಿಸುವ ಕಾಯ೯ಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಯುವಜನತೆ ತಾಯಿಯ ಹೆಸರಿನಲ್ಲಿ ದೇವಸ್ಥಾನ, ದೈವಸ್ಥಾನ ಹಾಗೂ ಮನೆಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಜಿಲ್ಲೆಯನ್ನು ಹಸಿರು ದಕ್ಷಿಣ ಕನ್ನಡವನ್ನು ನಿಮಾ೯ಣ ಮಾಡಬೇಕು.
ತಾಯಿ ನಮ್ಮನ್ನು ಪೋಷಿಸಿ ಸಲಹಿದಂತೆ ನಾವೂ ಕೂಡಾ ಗಿಡಗಳನ್ನು ನೆಟ್ಟು ರಕ್ಷಿಸುವ ಸಂಕಲ್ಪದ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.
ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಪ್ರ. ಕಾಯ೯ದಶಿ೯ ರಂಜಿತ್ ಪೂಜಾರಿ, ಯುವ ಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್, ಪ್ರ. ಕಾಯ೯ದಶಿ೯ ಭರತ್ ಶೆಟ್ಟಿ, ಉಪಾಧ್ಯಕ್ಷ ಸಚಿನ್ ಪಣಪಿಲ, ಪುತ್ತಿಗೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಇರುವೈಲು, ಗ್ರಾ. ಪಂ. ನ ಮಾಜಿ ಅಧ್ಯಕ್ಷ ಶಶಿಧರ್ ಅಂಚನ್, ಉಪವಲಯಾರಣ್ಯಾಧಿಕಾರಿ ಗುರುಮೂರ್ತಿ, ಗಸ್ತು ಅರಣ್ಯ ಪಾಲಕರಾದ ಶಂಕರ ಗೌಡ, ಸಂದೇಶ್ ಮತ್ತು ದೇವಸ್ಥಾನದ ಮೆನೇಜರ್ ಉದಯಕುಮಾರ್ ಈ ಸಂದಭ೯ದಲ್ಲಿದ್ದರು.


0 Comments