ಪ್ರೇರಣಾ ಶಾಲೆಯಲ್ಲಿ " ಅಗ್ನಿಹೋತ್ರ " ದ ಮೂಲಕ ಶಾಲಾ ಪುನರಾರಂಭ

ಜಾಹೀರಾತು/Advertisment
ಜಾಹೀರಾತು/Advertisment
ಪ್ರೇರಣಾ ಶಾಲೆಯಲ್ಲಿ " ಅಗ್ನಿಹೋತ್ರ " ದ ಮೂಲಕ ಶಾಲಾ ಪುನರಾರಂಭ 
   
           ಮೂಡುಬಿದಿರೆ ಕಡಲಕೆರೆಯ ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ ಪ್ರವರ್ತಿತ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ರಜಾ ಕಾಲದ ನಂತರದ ಪ್ರಾರಂಭೋತ್ಸವವು ಜೂನ್ 1ರಂದು ವಿಶಿಷ್ಟವಾಗಿ ಜರುಗಿತು .

  ವಿದ್ಯಾರ್ಥಿಗಳಿಗೆ ಆರತಿ ಬೆಳಗಿ , ತಿಲಕವಿಟ್ಟು , ವಿದ್ಯಾರ್ಥಿನಿಯರಿಗೆ ಕೈ ಬಳೆ , ತಿಲಕವಿಟ್ಟು ಭಾರತೀಯ ಸಂಸ್ಕೃತಿಯಂತೆ ಬರಮಾಡಿಕೊಳ್ಳಲಾಯಿತು.ವಿದ್ಯಾರ್ಥಿಗಳು ಭಾರತ ಮಾತೆ , ವಿದ್ಯಾದಾಯಿನಿ ಸರಸ್ವತಿ ದೇವರಿಗೆ ಪುಷ್ಪಾರ್ಚನೆ ಮಾಡಿ ಶಾಲೆಯನ್ನು ಪ್ರವೇಶಿಸಿದರು.
           ಮುಂದಿನ ಶಿಕ್ಷಣವು ಸಾಂಗವಾಗಿ ನೆರವೇರಲಿ ಎಂಬ ಉದ್ದೇಶದಿಂದ " ಅಗ್ನಿಹೋತ್ರ " ಹೋಮವನ್ನು , ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಕು.ಮನಸ್ವೀ ಶರ್ಮ , ಕು.ಸಾಧ್ಯ ಹಾಗೂ ಮಾ.ಚಿನ್ಮಯ ಭಟ್ ರವರು ವಿಧ್ಯುಕ್ತವಾಗಿ ಮಂತ್ರ ಜಪಿಸಿ ನೆರವೇರಿಸಿದರು. ಹೋಮಕುಂಡದಲ್ಲಿ ಸಾಂಪ್ರದಾಯಿಕ ಸಮಿಧೆ , ತುಪ್ಪ ಬಳಸಲಾಯಿತು . ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳು ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು .
           ಪ್ರೇರಣಾ ಶಾಲೆಯ ಸಂಚಾಲಕರಾದ ಎಂ.ಶಾಂತರಾಮ ಕುಡ್ವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಗ್ನಿಹೋತ್ರದ ಮೂಲಕ ಶಾಲಾ ಚಟುವಟಿಕೆ ಪ್ರಾರಂಭಿಸಿರುವುದು ಸಕಾಲಿಕ. ಹೋಮಗಳಲ್ಲಿ ಅತ್ಯಂತ ಸಣ್ಣ ಹೋಮ ಎನಿಸಿರುವ " ಅಗ್ನಿಹೋತ್ರ ಹೋಮ " ವು ಅತ್ಯಂತ ಹೆಚ್ಚಿನ ಫಲದ್ರಾಯಕವಾಗಿದೆ . ಅಗ್ನಿಹೋತ್ರದ ಮೂಲಕ , ವಾತಾವರಣ ಶುದ್ಧಿಯಾಗುತ್ತದೆ , ವಿಕಿರಣದಂತಹ ವಿನಾಶಕಾರಿಯನ್ನು ತಡೆಗಟ್ಟುವ ಶಕ್ತಿ ಅಗ್ನಿಹೋತ್ರ ಹೋಮಕ್ಕಿದೆ ಎಂಬುದನ್ನು ವಿಜ್ಞಾನಿಗಳೂ ಒಪ್ಪಿದ್ದಾರೆ ಎಂದರು .

         ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ ನ ಉಪಾಧ್ಯಕ್ಷ ಸೋಮನಾಥ ಕೋಟ್ಯಾನರು ಅಗ್ನಿಹೋತ್ರದ ಮಹತ್ವ ತಿಳಿಸಿದರು ." ಸುಮಾರು 30 ವರ್ಷಗಳ ಹಿಂದೆ ಪ್ರೋಕ್ರಾಣ್ ನಲ್ಲಿ ಸಂಭವಿಸಿದ ಭೀಕರ ಅಣುವಿಕಿರಣ ಸಂದರ್ಭದಲ್ಲಿ ಎಲ್ಲೆಲ್ಲೂ ಅನಾಹುತ ಆದಾಗ , ಅಲ್ಲೇ ಹತ್ತಿರದಲ್ಲೇ ಇರುವ ಮನೆಗೆ ಯಾವುದೇ ಅನಾಹುತ ಆಗಲಿಲ್ಲ . ಅದಕ್ಕೆ ಕಾರಣವೆಂದರೆ , ಆ ಮನೆಯಲ್ಲಿ ದಿನಂಪ್ರತಿ " ಅಗ್ನಿಹೋತ್ರ " ಹೋಮವು ಜರುಗುತ್ತಿತ್ತು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ " ಎಂದು ನುಡಿದರು. 
ಟ್ರಸ್ಟ್ ನ ಸದಸ್ಯ ಡಾ.ಆನಂದ ಕಾರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Post a Comment

0 Comments