ಮೂಡುಬಿದಿರೆ: ಕೆಸಿಇಟಿ ಪರೀಕ್ಷೆಯಲ್ಲಿ ಕಲ್ಲಬೆಟ್ಟುವಿನ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು
ಫುಡ್ ಸೈನ್ಸ್ (ಪ್ರಾಕ್ಟಿಕಲ್) ಹಾಗೂ ಅಗ್ರಿಕಲ್ಚರ್ (ಪ್ರಾಕ್ಟಿಕಲ್) ವಿಭಾಗಗಳಲ್ಲಿ ವಿದ್ಯಾರ್ಥಿ ಪವನ್ ಗೌಡ ಟಿ.ಕೆ. ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ವೆಟರಿನರಿ ಸೈನ್ಸ್ (ಪ್ರಾಕ್ಟಿಕಲ್) ವಿಭಾಗದಲ್ಲಿ 13ನೇ ರ‍್ಯಾಂಕ್ ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ.
ಇಂಜಿನಿಯರ್ ವಿಭಾಗದಲ್ಲಿ ಆದಿತ್ಯ ಅನಿಲ್ ಕೆಂಚಣ್ಣಾವರ್ 37ನೇ ರ‍್ಯಾಂಕ್ ಗಳಿಸಿದ್ದಾರೆ. ಈತ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ 99.804 ಪರ್ಸೆಂಟೈಲ್ ಪಡೆದು ಮೂಡುಬಿದಿರೆ ತಾಲೂಕಿಗೆ ಪ್ರಥಮ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅತ್ಯುತ್ತಮ ಪರ್ಸೆಂಟೈಲ್ ಪಡೆದ ವಿದ್ಯಾರ್ಥಿಯಾಗಿದ್ದರು.
ಅಕ್ಷಯ್ ಡಿ. ವೆಟರಿನರಿ ಸೈನ್ಸ್‌ನಲ್ಲಿ 41ನೇ ರ‍್ಯಾಂಕ್ ಹಾಗೂ ನ್ಯಾಚುರೋಪಥಿ ವಿಭಾಗದಲ್ಲಿ 355ನೇ ರ‍್ಯಾಂಕ್ ಪಡೆದಿದ್ದಾರೆ. ಮನ್ವಿತ್ ಎಸ್. ಪದ್ಮಾಶಾಲಿ ಫುಡ್ ಸೈನ್ಸ್‌ನಲ್ಲಿ 86ನೇ ರ‍್ಯಾಂಕ್, ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 86ನೇ ರ‍್ಯಾಂಕ್ ಹಾಗೂ ಇಂಜಿನಿಯರ್ ವಿಭಾಗದಲ್ಲಿ 347ನೇ ರ‍್ಯಾಂಕ್ ಗಳಿಸಿದ್ದಾರೆ. ಶಮಿತ್ ಪಿ. ಗೌಡ ವೆಟರಿನರಿ ಸೈನ್ಸ್‌ನಲ್ಲಿ 133ನೇ ರ‍್ಯಾಂಕ್ ಮತ್ತು ನ್ಯಾಚುರೋಪಥಿಯಲ್ಲಿ 478ನೇ ರ‍್ಯಾಂಕ್ ಪಡೆದಿದ್ದಾರೆ. ಕಿಶನ್ ಶಿವಮೂರ್ತಯ್ಯ ಮಟದ್ ಫುಡ್ ಸೈನ್ಸ್‌ನಲ್ಲಿ 170ನೇ ರ‍್ಯಾಂಕ್, ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 170ನೇ ರ‍್ಯಾಂಕ್ ಹಾಗೂ ಇಂಜಿನಿಯರಿಂಗ್ 529ನೇ ರ‍್ಯಾಂಕ್ ಪಡೆದಿದ್ದಾರೆ.
ದಿಗಂತ್ ಬಿ.ಹೆಚ್. ವೆಟರಿನರಿ ಸೈನ್ಸ್ (ಪ್ರಾಕ್ಟಿಕಲ್) ವಿಭಾಗದಲ್ಲಿ 222ನೇ ರ‍್ಯಾಂಕ್ ಪಡೆದಿದ್ದಾರೆ. ಧನುಷ್ ಗುತ್ತಿ ಇಂಜಿನಿಯರಿಂಗ್ ವಿಭಾಗದಲ್ಲಿ 290ನೇ ರ‍್ಯಾಂಕ್ ಮತ್ತು ಪಿಯು ಬೋರ್ಡ್ ಪರೀಕ್ಷೆಯಲ್ಲಿ 598 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದರು. ಬಿ. ವಿನಯ್ ಫುಡ್ ಸೈನ್ಸ್‌ನಲ್ಲಿ 396ನೇ ರ‍್ಯಾಂಕ್, ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 396ನೇ ರ‍್ಯಾಂಕ್ ಮತ್ತು ವೆಟರಿನರಿ ಸೈನ್ಸ್‌ನಲ್ಲಿ 925ನೇ ರ‍್ಯಾಂಕ್ ಗಳಿಸಿದ್ದಾರೆ. ಜೇಂಕರ್ ಎಂ. ಇಂಜಿನಿಯರಿಂಗ್ 449ನೇ ರ‍್ಯಾಂಕ್, ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 467ನೇ ರ‍್ಯಾಂಕ್ ಹಾಗೂ ಫುಡ್ ಸೈನ್ಸ್‌ನಲ್ಲಿ 467ನೇ ರ‍್ಯಾಂಕ್ ಗಿಟ್ಟಿಸಿಕೊಂಡಿದ್ದಾರೆ.
ವಿಜಯ್ ರಾಮಲಿಂಗಪ್ಪ ಕೆ. ವೆಟರಿನರಿ ಸೈನ್ಸ್ (ಪ್ರಾಕ್ಟಿಕಲ್) ವಿಭಾಗದಲ್ಲಿ 500ನೇ ರ‍್ಯಾಂಕ್ ಹಾಗೂ ತೇಜಸ್ ಡಿ ಎಂ. ವೆಟರಿನರಿ ಸೈನ್ಸ್ ವಿಭಾಗದಲ್ಲಿ 516ನೇ ರ‍್ಯಾಂಕ್, ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 879ನೇ ರ‍್ಯಾಂಕ್ ಮತ್ತು ಫುಡ್ ಸೈನ್ಸ್ (ಪ್ರಾಕ್ಟಿಕಲ್) ವಿಭಾಗದಲ್ಲಿ 879ನೇ ರ‍್ಯಾಂಕ್ ಪಡೆದಿದ್ದಾರೆ. ಶ್ರೇಯಸ್ ಯು. ಶಾನುಭೋಗ್ ವೆಟರಿನರಿ ಸೈನ್ಸ್‌ನಲ್ಲಿ 531ನೇ ರ‍್ಯಾಂಕ್ ಹಾಗೂ ಫುಡ್ ಸೈನ್ಸ್ (ಪ್ರಾಕ್ಟಿಕಲ್) ವಿಭಾಗದಲ್ಲಿ 531ನೇ ರ‍್ಯಾಂಕ್ ಗಳಿಸಿದ್ದಾರೆ. ಆದಿತ್ಯ ಸಿ. ಪಾಟೀಲ್ ನ್ಯಾಚುರೋಪಥಿಯಲ್ಲಿ 581ನೇ ರ‍್ಯಾಂಕ್ ಮತ್ತು ವೆಟರಿನರಿ ಸೈನ್ಸ್‌ನಲ್ಲಿ 929ನೇ ರ‍್ಯಾಂಕ್ ಪಡೆದಿದ್ದಾರೆ.
ಭಾರದ್ವಾಜ್ ಪಿ.ಯು. ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 681ನೇ ರ‍್ಯಾಂಕ್ ಹಾಗೂ ಫುಡ್ ಸೈನ್ಸ್‌ನಲ್ಲಿ 681ನೇ ರ‍್ಯಾಂಕ್, ಶ್ರೀಗೌರಿ ಟಿ.ಎಂ. ವೆಟರಿನರಿ ಸೈನ್ಸ್‌ನಲ್ಲಿ 720ನೇ ರ‍್ಯಾಂಕ್, ಅನುಷಾ ಓಮಣ್ಣ ಚಲವಾದಿ ಫುಡ್ ಸೈನ್ಸ್‌ನಲ್ಲಿ 835ನೇ ರ‍್ಯಾಂಕ್ ಮತ್ತು ಅಗ್ರಿ (ಬಿ.ಎಸ್‌ಸಿ) ವಿಭಾಗದಲ್ಲಿ 835ನೇ ರ‍್ಯಾಂಕ್ ಗಳಿಸಿದ್ದಾರೆ. ಪ್ರೀತಮ್ ಎಚ್.ಎಂ. ನ್ಯಾಚುರೋಪಥಿಯಲ್ಲಿ 821ನೇ ರ‍್ಯಾಂಕ್, ಯಶಸ್ ರೆಡ್ಡಿ ವೆಟರಿನರಿ ಸೈನ್ಸ್ (ಪ್ರಾಕ್ಟಿಕಲ್) ವಿಭಾಗದಲ್ಲಿ 844ನೇ ರ‍್ಯಾಂಕ್, ಹರ್ಷಿತಾ ಸಿ. ವೆಟರಿನರಿ ಸೈನ್ಸ್‌ನಲ್ಲಿ 848ನೇ ರ‍್ಯಾಂಕ್ ಹಾಗೂ ಮಿಥುನ್ ಎಚ್.ಪಿ. ವೆಟರಿನರಿ ಸೈನ್ಸ್‌ನಲ್ಲಿ 966ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ.


0 Comments