ಮೂಡುಬಿದಿರೆ : "ಕೇರ್ ಚಾರಿಟೇಬಲ್ ಟ್ರಸ್ಟ್" ವತಿಯಿಂದ ಸುಮಾರು ರೂ 35000 ಮೌಲ್ಯದ ಪುಸ್ತಕ ಮತ್ತು ಅಧ್ಯಯನ ಸಾಮಾಗ್ರಿಗಳನ್ನು ಕಲ್ಲಮುಂಡ್ಕೂರು ಸ. ಹಿಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಲಾಯಿತು.
ಎಲ್ಲಾ ಮಕ್ಕಳಿಗೆ
ಐ.ಡಿ ಗಳನ್ನು ರಾಜೇಶ್ ಅಂಚನ್ ಅವರು ಉಚಿತವಾಗಿ ನೀಡಿದರು.
ಎಸ್ಡಿ ಎಂಸಿ ಅಧ್ಯಕ್ಷ ವಸಂತ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ದಾನಿ ಕೇರ್ ಚಾರಿಟೇಬಲ್ ನ ಸ್ಥಾಪಕ ಅನಿಲ್ ಮೆಂಡೋನ್ಸ ಉದ್ಘಾಟಿಸಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಪೋಷಕರು ಮನೆಯಲ್ಲಿ ಒದಗಿಸಬೇಕೆಂದು ಕರೆ ನೀಡಿದರು.
ದಾನಿಗಳನ್ನು ಸನ್ಮಾನಿಸಲಾಯಿತು. ಎಸ್ ಡಿ ಎಮ್ ಸಿ ಸದಸ್ಯ, ಹರೀಶ್ ಮಿರಾಂದ ದಾನಿಗಳಾದ ಸಂದೇಶ್, ಪ್ರತೀಕ್ ಮತ್ತು ಭಾಸ್ಕರ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಲ್. ಜಿ ಸ್ವಾಗತಿಸಿದರು. ಶೈಲಾಶ್ರೀ ಸನ್ಮಾನಿತರನ್ನು ಪರಿಚಯಿಸಿದರು. ಯಶೋದಾ ಕಾರ್ಯಕ್ರಮ ನಿರೂಪಿಸಿದರು. ಸರಿತ ವಂದಿಸಿದರು.


0 Comments