ಉದ್ಯಮಿ ಸುರೇಶ್ ಶೆಟ್ಟಿಯಿಂದ ಮಿಜಾರಿನ 6 ಶಾಲೆಯ ವಿದ್ಯಾರ್ಥಿಗಳಿಗೆ ರೂ.೧೫ ಲಕ್ಷ ಪ್ರೋತ್ಸಾಹ ಧನ ಹಾಗೂ ಪುಸ್ತಕ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment
ಉದ್ಯಮಿ ಸುರೇಶ್ ಶೆಟ್ಟಿಯಿಂದ ಮಿಜಾರಿನ 6 ಶಾಲೆಯ ವಿದ್ಯಾರ್ಥಿಗಳಿಗೆ ರೂ.೧೫ ಲಕ್ಷ ಪ್ರೋತ್ಸಾಹ ಧನ ಹಾಗೂ ಪುಸ್ತಕ ವಿತರಣೆ
ಮೂಡುಬಿದಿರೆ: ಮುಂಬೈಯ ಉದ್ಯಮಿ ಹಾಗೂ ತುಳುನಾಡ ಸೇನಾದ ಸ್ಥಾಪಕ ಮಿಜಾರು ಹರಿಮಿನಾಕ್ಷಿ ದೋಟ ಸುರೇಶ್ ಶೆಟ್ಟಿ ಅವರು ತನ್ನ ಮಗಳು ಝಾನ್ಸಿಯ ಹುಟ್ಟಿದ ದಿನದ ಅಂಗವಾಗಿ ತನ್ನ ಹುಟ್ಟೂರಾದ ಮಿಜಾರು ತೋಡಾರು ಗ್ರಾಮಗಳ ಆರು ಪ್ರಾಥಮಿಕ, ಪ್ರೌಢಶಾಲೆಗಳ ೧೩೬೦ ವಿದ್ಯಾರ್ಥಿಗಳಿಗೆ ರೂ ಲಕ್ಷ ವೆಚ್ಚದ ಪುಸ್ತಕ, ಕೊಡೆ ಬ್ಯಾಗ್ ಗಳನ್ನು ವಿತರಿಸಿದರು. ಹಾಗೂ ೨೦೦ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರದಂತೆ ಒಟ್ಟು ಹತ್ತು ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನು ವಿತರಿಸಿದರು. 
ಮಂಗಳವಾರ ಬಂಗಬೆಟ್ಟು ಶಾಲಾ ಮೈದಾನದಲ್ಲಿ ನಡೆದ ಸಮಾರಂಭವನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಉದ್ಘಾಟಿಸಿ ಸಮವಸ್ತ್ರ ವಿತರಿಸಿದ ಗಳಿಸಿದ ಸಂಪತ್ತನ್ನು ಸಮಾಜಕ್ಕೆ ಸದ್ವಿನಿಯೋಗ ಮಾಡಬೇಕು. ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದಾಗ ಕನ್ನಡ ಮಾಧ್ಯಮ ಶಾಲೆಗಳು ಸಶಕ್ತವಾಗುತ್ತವೆ. ಈ ನಿಟ್ಟಿನಲ್ಲಿ ಸುರೇಶ್ ಶೆಟ್ಟಿಯವರ ಈ ಕೊಡುಗೆ ಶ್ಲಾಘನೀಯ ಎಂದರು. ಇದೇ ಸಂದರ್ಭದಲ್ಲಿ ಮೂಡುಬಿದಿರೆ ಪ್ರೆಸ್ ಕ್ಲಬ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಪತ್ರಿಕಾ ಭವನಕ್ಕೆ ಒಂದು ಲಕ್ಷ ರೂ ನೆರವನ್ನು ಹಸ್ತಾಂತರಿಸಿದರು.

ನಿವೃತ್ತ ಪ್ರಾಚಾರ್ಯ ಗುಣಪಾಲ ಕಡಂಬ, ತೆಂಕ ಮಿಜಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ, ವಾಗ್ಮಿ ಶ್ರೀಕಾಂತ್ ಶೆಟ್ಟಿ, ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ, ಮಿಜಾರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರು ಎಂ. ಎನ್, ಶಾಲಾ ಮುಖ್ಯೋಪಾಧ್ಯಾಯಿನಿ ಅಪೋಲಿನ್ ಪಿಂಟೋ, ರಾಮಚಂದ್ರ ಮಿಜಾರು, ಸುರೇಶ್ ಶೆಟ್ಟಿ, ಪತ್ನಿ ರೇಖಾ, ತಂದೆ ತಾಯಿಯವರಾದ ಹರಿಯಪ್ಪ ಶೆಟ್ಟಿ, ಮೀನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
 ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರ್ವಹಿಸಿದರು.

Post a Comment

0 Comments