ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಪಾದೆ ಮನೆಯ ಜಯಂತ ಬೋವಿ ಅವರ ವಾಸದ ಮನೆಯ ಮೇಲೆ ಭಾರಿ ಗಾತ್ರದ ಮರಗಳು ಬಿದ್ದು ಮನೆ ಜಖಂಗೊಂಡಿದೆ.

ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಪಾದೆ ಮನೆಯ ಜಯಂತ ಬೋವಿ ಅವರ ವಾಸದ ಮನೆಯ ಮೇಲೆ ಭಾರಿ ಗಾತ್ರದ ಮರಗಳು ಬಿದ್ದು ಮನೆ ಜಖಂಗೊಂಡಿದೆ.

 ಗೋಳಿ ಮರಕ್ಕೆ ತಾಗಿ ಹಲಸಿನ ಮರ ಉರುಳಿದ್ದರೆ, ಮಾವಿನ ಮರಕ್ಕೆ ತಾಗಿ ತೆಂಗಿನ ಮರವು ನೇರವಾಗಿ ಮನೆಯ ಮೇಲೆ ಬಿದ್ದಿದೆ. ಇದರಿಂದಾಗಿ ಮನೆಯ ಚಾವಡಿ ಹಾಗೂ ಅಂಗಳದ ಶೀಟುಗಳು ಸಂಪೂರ್ಣವಾಗಿ ಪುಡಿಪುಡಿಯಾಗಿವೆ.

ಮನೆಯಲ್ಲಿರುವ ದೈವದ ಕೋಣೆ ಕೂಡ ಹಾನಿಗೀಡಾಗಿದ್ದು, ಮನೆಯ ಆವರಣದ ಕಂಪೌಂಡ್ ಗೋಡೆ ಕುಸಿದಿದೆ. ಅಷ್ಟೇ ಅಲ್ಲದೆ, ವಿದ್ಯುತ್ ಕಂಬವೊಂದು ಮನೆಯ ಆವರಣಕ್ಕೆ ಅಡ್ಡಲಾಗಿ ಬಿದ್ದಿದ್ದು ಸಂಚಾರಕ್ಕೂ ತಡೆಯಾಗಿದೆ. ಈ ಅವಘಡದಿಂದ ಜಯಂತ ಬೋವಿ ಅವರಿಗೆ ದೊಡ್ಡ ಮಟ್ಟದ ಆರ್ಥಿಕ ನಷ್ಟ ಉಂಟಾಗಿದೆ.

Post a Comment

0 Comments

Advertisement