ಮೂಡುಬಿದಿರೆ : ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಗಿಯದ ಗೋಳು : ಬೆಳುವಾಯಿಯಲ್ಲಿ ಮತ್ತೆ ಆಕ್ಸಿಡೆಂಟ್

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ : ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಗಿಯದ ಗೋಳು : ಬೆಳುವಾಯಿಯಲ್ಲಿ ಮತ್ತೆ ಆಕ್ಸಿಡೆಂಟ್ 
 
ಮೂಡುಬಿದಿರೆ : ಮಂಗಳೂರು- ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಕಾಂತಾವರ ಕ್ರಾಸ್ ಬಳಿ ಗುರುವಾರದಂದು ಬಸ್ ಹಾಗೂ ಕಾರಿನ ಮಧ್ಯೆ ಅಫಘಾತ ಸಂಭವಿಸಿದೆ.

ಕಳೆದ ಕೆಲವು ತಿಂಗಳಿನಿಂದ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಆಕ್ಸಿಡೆಂಟ್ ಗಳಲ್ಲಿ ಇದೂ ಒಂದಾಗುವ ಮೂಲಕ ಇಲ್ಲಿ ಅಪಘಾತದದ್ದೇ ಗೋಳಾಗಿದೆ. 

ಬನ್ನಡ್ಕದಿಂದ ಕಾಂತಾವರ ಕ್ರಾಸ್ ನವರೆಗೆ ಡಿವೈಡರ್ ಮಧ್ಯೆ ವಾಹನಗಳು ಸಂಚರಿಸಲು ಬಿಟ್ಟಿದ್ದ ದಾರಿಯನ್ನು ಬುಧವಾರದಿಂದ ಬಂದ್ ಮಾಡಲಾಗಿದ್ದು ಈ ಬಗ್ಗೆ ವಾಹನ ಚಾಲಕರಿಗೆ ಮಾಹಿತಿಯ ಕೊರತೆಯಿರುವುದರಿಂದ ಅವ್ಯವಸ್ಥಿತ ಚಾಲನೆಯಿಂದಾಗಿ ಅಫಘಾತ ಆಗುವ ಹೆಚ್ಚಾಗುವ ಮುನ್ಸೂಚನೆ ಕಂಡು ಬಂದಿದೆ. 

ಕಾಂತಾವರ ಕಡೆಯಿಂದ ಬರುವ ವಾಹನಗಳು ಮೂಡುಬಿದಿರೆ ಕಡೆಗೆ ಸಾಗಬೇಕಾದರೆ ಕಾರ್ಕಳ ಕಡೆ ತಿರುಗಿ ಚಿಲಿಂಬಿ ಬಳಿ ಯು ಟರ್ನ್ ಪಡೆದು ಬೆಳುವಾಯಿ ಬಂದು ಮುಂದೆ ಸಾಗಬೇಕಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನ ನಿತ್ಯ ನಿಯಮಾವಳಿಗಳಲ್ಲಿ ಬದಲಾವಣೆ ಮಾಡುತ್ತಿರುವುದರಿಂದ, ಸಂಚಾರಕ್ಕೆ ಹೊಸ ದಾರಿ ನೀಡುತ್ತಿರುವುದರಿಂದ ವಾಹನ ಸವಾರರು ದಿಕ್ಕು ತೋಚದಂತಾಗಿದ್ದಾರೆ.

Post a Comment

0 Comments