ಮೂಡುಬಿದಿರೆ : ಕಿಸಾನ್ ಪ್ರಮುಖರ ಸಭೆಬೃಹತ್ ಹೋರಾಟದ ಎಚ್ಚರಿಕೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆ : ಕಿಸಾನ್ ಪ್ರಮುಖರ ಸಭೆ
ಬೃಹತ್ ಹೋರಾಟದ ಎಚ್ಚರಿಕೆ
ಮೂಡುಬಿದಿರೆ: ಅಕ್ರಮ ಸಕ್ರಮದ ಅರ್ಜಿಗಳನ್ನು ಬಗರ್ ಹುಕುಂ ಸಮಿತಿಯ ಮುಂದೆ ಮಂಡಿಸದೆ ಏಕಪಕ್ಷೀಯವಾಗಿ ವಜಾಗೊಳಿಸುತ್ತಿರುವ ನೀತಿಯ ವಿರುದ್ಧ ‘ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಧ್ಯೇಯವಾಕ್ಯದೊಂದಿಗೆ ತಾಲೂಕಿನಲ್ಲಿ ಇದೇ ತಿಂಗಳಲ್ಲಿ ಬೃಹತ್ ಹೋರಾಟವನ್ನು ನಡೆಸಲು ಕಿಸಾನ್ ಸಭೆಯಲ್ಲಿ ಸಭೆಯಲ್ಲಿ ಸರ್ವಾನುಮತಿಯಿಂದ ತೀರ್ಮಾನಿಸಲಾಗಿದೆ.

ಪುರಸಭೆಯ ಬಳಿ ಇರುವ ಖಾಸಗಿ ಕಟ್ಟಡದಲ್ಲಿ ನಡೆದ ತಾಲೂಕು ಕಿಸಾನ್ ಪ್ರಮುಖರ ಸಭೆಯು ಈ ತೀಮಾ೯ನವನ್ನು ಕೈಗೊಳ್ಳಲಾಯಿತು.
ವಕೀಲ ಶಾಂತಿಪ್ರಸಾದ್ ಹೆಗ್ಡೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ಕಾರವು ಹಾಲಿನ ಪ್ರೋತ್ಸಾಹಧನವನ್ನು ಹಲವು ತಿಂಗಳುಗಳಿಂದ ನೀಡದೆ ಬಾಕಿ ಇಟ್ಟಿರುವುದನ್ನು ತೀವ್ರವಾಗಿ ಖಂಡಿಸಲಾಯಿತು. 

ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ವಿಜೇತರಾದ ನಿಡ್ಡೋಡಿ ಗ್ರಾಮ ಸಮಿತಿ ಅಧ್ಯಕ್ಷ ಸುಧಾಕರ್ ಪೂಜಾರಿ, ಕಿಸಾನ್ ಪ್ರಮುಖರಾದ ಕೇಶವ ಪೂಜಾರಿ, ಮಾರುತಿ ಭಟ್ ಮತ್ತು ವಸಂತ ಭಟ್ ಅಶ್ವತ್ಥಪುರ ಅವರನ್ನು ಸಂಘಟನೆಯ ವತಿಯಿಂದ ಗೌರವಿಸಲಾಯಿತು. 

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ತಾಲೂಕು ಪ್ರಮುಖರಾದ ಜಾಯ್ಲೆಶ್ ಡಿಸೋಜ, ತಾಲೂಕು ಪ್ರಧಾನ ಕಾರ್ಯದರ್ಶಿ ವಸಂತ ಭಟ್ ಪಯ್ಯಾಡಿ ಹಾಗೂ ವಿವಿಧ ಗ್ರಾಮ ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿದ್ದರು. 

ಇತ್ತೀಚೆಗೆ ನಿಧನರಾದ ಕಡಂದಲೆ ಗ್ರಾಮದ ಕಿಸಾನ್ ಪ್ರಮುಖ ವಿಜಯ ಸಪಳಿಗ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಸಭೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

Post a Comment

0 Comments

Advertisement