ಮೂಡುಬಿದಿರೆ : ಮುಲ್ಕಿ-ಮೂಡುಬಿದಿರೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಅವರ ಅಧ್ಯಕ್ಷತೆಯಲ್ಲಿ ಒಬಿಸಿ ಮೋರ್ಚಾದ ನೂತನ ಪದಾಧಿಕಾರಿಗಳ ಪದಗ್ರಹಣವು ಮೂಡುಬಿದಿರೆ ಬಿಜೆಪಿ ಕಛೇರಿಯಲ್ಲಿ ಭಾನುವಾರ ನಡೆಯಿತು.
ಭಾರತೀಯ ಜನತಾ ಪಾರ್ಟಿಯ ಮೂಲ್ಕಿ - ಮೂಡುಬಿದಿರೆ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ನೂತನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ವಾಲ್ಪಾಡಿ ಪುನರ್ ಆಯ್ಕೆಗೊಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಸಂಪತ್ ಪೂಜಾರಿ ನೆತ್ತೋಡಿ, ಹೇಮನಾಥ್ ಅಮೀನ್ ಪಡುಪಣಂಬೂರು, ಉಪಾಧ್ಯಕ್ಷರುಗಳಾಗಿ ಅಶ್ವತ್ಥ್ ಪಣಪಿಲ, ಶಿವಪ್ರಸಾದ್ ಲಾಡಿ, ಧನುಷ್ ಕುಲಾಲ್ ಮತ್ತು ಅಮರ್ ಕೋಟೆ, ಕಾಯ೯ದಶಿ೯ಗಳಾಗಿ ರಾಜೇಶ್ ಕುಲಾಲ್ ಕಟೀಲು, ಸಂತೋಷ್ ಭಂಡಾರಿ ಕಡಂದಲೆ, ದಯೇಶ್ ಐಕಳ, ನಿತಿನ್ ಕೆಲ್ಲಪುತ್ತಿಗೆ.
ಕೋಶಾಧಿಕಾರಿಯಾಗಿ ದೀಕ್ಷಿತ್ ಪಣಪಿಲ, ಸದಸ್ಯರುಗಳಾಗಿ ಅವಿನಾಶ್ ಮೂಡುಬಿದಿರೆ, ದಿನಕರ ಕುಲಾಲ್ ಅಂಬೂರಿ, ಸುಮಂತ್ ಆಚಾಯ೯, ಪ್ರವೀಣ್ ಭಂಡಾರಿ, ಲೊಕೇಶ್ ವಾಲ್ಪಾಡಿ ಹಾಗೂ ಸತೀಶ್ ಪೂಜಾರಿ ಕೆಲ್ಲಪುತ್ತಿಗೆ ಆಯ್ಕೆಯಾಗಿದ್ದಾರೆ.
ಈ ಸಂದಭ೯ದಲ್ಲಿ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಮಹೇಶ್ ಜೋಗಿ,ಜಿಲ್ಲಾ ಉಪಾಧ್ಯಕ್ಷರಾದ ರಾಘವೇಂದ್ರ ರಾವ್,ವಿನೋದ್ ಸಾಲ್ಯಾನ್,ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಶಿಧರ್ ಕಲ್ಮಜ,ಮಂಡಲದ ಕೋಶಾಧಿಕಾರಿ ಹಾಗೂ ಮಂಡಲ ಒಬಿಸಿ ಪ್ರಬಾರಿ ಪ್ರಭಾಕರ್ ಕುಲಾಲ್ ಉಪಸ್ಥಿತರಿದ್ದರು.


0 Comments