ಬನ್ನಡ್ಕದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭ : ಶಾಸಕ ಕೋಟ್ಯಾನ್ ಪರಿಶೀಲನೆ

ಜಾಹೀರಾತು/Advertisment
ಜಾಹೀರಾತು/Advertisment
ಬನ್ನಡ್ಕದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭ : ಶಾಸಕ ಕೋಟ್ಯಾನ್ ಪರಿಶೀಲನೆ 
ಮೂಡುಬಿದಿರೆ : ಮಂಗಳೂರು-ಕಾಕ೯ಳ ರಾಷ್ಟ್ರೀಯ ಹೆದ್ದಾರಿ 169ರ ಮೂಡುಬಿದಿರೆ ತಾಲೂಕಿನ ಬನ್ನಡ್ಕ ಪ್ರದೇಶದಲ್ಲಿ ಶುಕ್ರವಾರ ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊಂಡಿದೆ. 
 
ಬನ್ನಡ್ಕದಿಂದ ಬೆಳುವಾಯಿ ವರೆಗೆ ರಾ. ಹೆ. ಪ್ರದೇಶದಲ್ಲಿ ಕಳೆದ ಒಂದು ವರುಷಗಳಿಂದ ಹಲವಾರು ವಾಹನ ಅಪಘಾತಗಳು ಸಂಭವಿಸಿದ್ದು ಹಲವಾರು ಜೀವ ಹಾನಿಗಳಾಗಿವೆ. 
ಇದರಿಂದ ಎಚ್ಚೆತ್ತುಕೊಂಡ ಪಡುಮಾನಾ೯ಡು-ಬನ್ನಡ್ಕ ಪ್ರದೇಶದ ಜನರು ರಾ. ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ಸವೀ೯ಸ್ ರಸ್ತೆ ನಿಮಿ೯ಸದೆ ಇರುವುದರಿಂದಲೇ ಅಪಘಾತಗಳು ಸಂಭವಿಸಲು ಕಾರಣವೆಂದು ಆರೋಪಿಸಿ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದರು ಮತ್ತು ಸವೀ೯ಸ್ ರಸ್ತೆಯ ಅಗತ್ಯವಿದೆಯೆಂದು ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿಯನ್ನು ಸಲ್ಲಿಸಿದ್ದರು. 
ಮನವಿಗೆ ಸ್ಪಂದಿಸಿದ್ದ ಶಾಸಕ ಕೋಟ್ಯಾನ್ ಅವರು ಊರವರ ಬೇಡಿಕೆಯಂತೆ ಸವೀ೯ಸ್ ರಸ್ತೆಯನ್ನು ಅಗತ್ಯವಾಗಿ ನಿಮಿ೯ಸಬೇಕೆಂದು ಇದಕ್ಕಾಗಿ 20 ದಿನಗಳ ಗಡುವನ್ನು 
ರಾ. ಹೆ. ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದರು.
 ಸಂಸದ ಬ್ರಿಜೇಶ್ ಚೌಟ ಅವರು ಬನ್ನಡ್ಕ ಪ್ರದೇಶದಲ್ಲಿ ಅಪೂಣ೯ವಾಗಿರುವ ಸವೀ೯ಸ್ ರಸ್ತೆ ನಿಮಾ೯ಣ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮೇ. 16 ರಂದು ಪತ್ರ ಬರೆದು ವಿನಂತಿಸಿದ್ದರು. 

ಸವೀ೯ಸ್ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಊರವರು ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಮೇ 31ರಂದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಗುತ್ತಿಗೆ ವಹಿಸಿಕೊಂಡಿರುವ ಡಿ ಬಿ ಎಲ್ ಸಂಸ್ಥೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರಸ್ತೆ ಬದಿಗಳಲ್ಲಿರುವ ಜಾಗವನ್ನು ವಶಕ್ಕೆ ಪಡೆದುಕೊಂಡು ರಸ್ತೆ ಅಗಲೀಕರಣಗೊಳಿಸಲು ಜಾಗ ಸಮತಟ್ಟುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಈ ಕಾಮಗಾರಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಶಾಸಕರು ಸ್ಥಳ ಪರಿಶೀಲನೆ ನಡೆಸುವ ಸಂದಭ೯ದಲ್ಲಿ ಪಡುಮಾರ್ನಾಡು ಪಂಚಾಯತ್ ಮಾಜಿ ಅಧ್ಯಕ್ಷ ದಯಾನಂದ ಪೈ, ಬಿಜೆಪಿ ಪ್ರಮುಖರಾದ ಸೂರಜ್ ಜೈನ್, ಗೋಪಾಲ್ ಶೆಟ್ಟಿಗಾರ್, ಬೋಳ ವಿಶ್ವನಾಥ್ ಕಾಮತ್ ಮತ್ತಿತರರು ಭಾಗವಹಿಸಿದ್ದರು.

Post a Comment

0 Comments