ಮೂಡುಬಿದಿರೆ : ಡೀಸೆಲ್ ದರ ಏರಿಕೆಯಿಂದ ಉಂಟಾದ ವೆಚ್ಚಭಾರವನ್ನು ಉಲ್ಲೇಖಿಸಿ ರಾಜ್ಯದ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ಶೇ.20ರಷ್ಟು ಹೆಚ್ಚಿಸಲು ನಿರ್ಧರಿಸಿದ್ದಾರೆ. ಈ ದರ ಏರಿಕೆ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ತಿಳಿಸಿದ್ದಾರೆ.
ಬಸ್ ಮಾಲಕರ ಈ ನಿರ್ಧಾರದಿಂದ ಬೆಂಗಳೂರಿನಿಂದ ಮಂಗಳೂರು, ಕಲಬುರ್ಗಿ ಸೇರಿದಂತೆ ಹಲವು ಮಾರ್ಗಗಳ ಪ್ರಯಾಣ ದರ ದುಬಾರಿಯಾಗಿದ್ದು, ಇದು ಇಂದಿನ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.


0 Comments