ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ಎಕ್ಸಲೆಂಟ್ ಶಾಲೆಗೆ 14 ರಾಜ್ಯ ರ‍್ಯಾಂಕ್‌ಗಳ ಹೆಗ್ಗಳಿಕೆ- ಸಚಿನ್ ಡಿ ನಾಯ್ಕ್‌ಗೆ ರಾಜ್ಯಕ್ಕೆ 3ನೇ ರ‍್ಯಾಂಕ್

ಜಾಹೀರಾತು/Advertisment
ಜಾಹೀರಾತು/Advertisment
ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ಎಕ್ಸಲೆಂಟ್ ಶಾಲೆಗೆ 14 ರಾಜ್ಯ ರ‍್ಯಾಂಕ್‌ಗಳ ಹೆಗ್ಗಳಿಕೆ- ಸಚಿನ್ ಡಿ ನಾಯ್ಕ್‌ಗೆ ರಾಜ್ಯಕ್ಕೆ 3ನೇ ರ‍್ಯಾಂಕ್
 
ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯು ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ 5 ರ‍್ಯಾಂಕ್‌ಗಳನ್ನು ಪಡೆಯುವುದರೊಂದಿಗೆ ಸಾಧನೆ ಮಾಡಿದೆ. 

2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೊದಲ ಫಲಿತಾಂಶ ಬಿಡುಗಡೆಯಾದಾಗ ಶಾಲೆಯ ವಿದ್ಯಾರ್ಥಿ ಸಚಿನ್ ಡಿ ನಾಯ್ಕ್ 622 ಅಂಕ ಗಳಿಸಿ ರಾಜ್ಯದಲ್ಲಿ 4ನೇ ರ‍್ಯಾಂಕ್ ಪಡೆದಿದ್ದಾರೆ.

ಇದೀಗ ಮರುಮೌಲ್ಯಮಾಪನದ ನಂತರ ಈ ವಿದ್ಯಾರ್ಥಿಯ ಒಟ್ಟು ಅಂಕ 623 ಆಗುವುದರೊಂದಿಗೆ ರಾಜ್ಯದಲ್ಲಿ 3ನೇ ರ‍್ಯಾಂಕ್ ಗಳಿಸಿದ್ದಾನೆ.
ವಿದ್ಯಾರ್ಥಿನಿ ನಕ್ಷತ್ರಳ ಒಟ್ಟು ಅಂಕ 620 ರಿಂದ 622ಕ್ಕೆ ಏರಿಕೆಯಾಗಿರುವುದರಿಂದ ರಾಜ್ಯದಲ್ಲಿ 6ನೇ ರ‍್ಯಾಂಕ್‌ನಿಂದ 4ನೇ ರ‍್ಯಾಂಕ್ ಗಳಿಸಿದ್ದಾಳೆ. ಅದೇ ರೀತಿ ಗಗನ್ ಪಾಟೀಲ್ 618 ರಿಂದ 622 ಅಂಕ ಗಳಿಸಿ 4ನೇ ರ‍್ಯಾಂಕ್ ಗಳಿಸಿದ್ದಾನೆ. ಮರುಮೌಲ್ಯಮಾಪನದ ನಂತರ ಪ್ರಾಂಶು 618 ಅಂಕಗಳೊಂದಿಗೆ 8ನೇ ರ‍್ಯಾಂಕ್, ಹರ್ಷ ಜಿ.ಎಸ್ 617 ಅಂಕಗಳೊಂದಿಗೆ 9ನೇ ರ‍್ಯಾಂಕ್, ಸ್ನಿಗ್ಧಾ ಜೈನ್ 616 ಅಂಕಗಳೊಂದಿಗೆ 10ನೇ ರ‍್ಯಾಂಕ್, ದರ್ಶಿತ್ ಗೌಡ 616 ಅಂಕಗಳೊಂದಿಗೆ 10ನೇ ರ‍್ಯಾಂಕ್ ಮತ್ತು ಭರತ್ ಎಸ್.ಎಚ್ 616 ಅಂಕಗಳನ್ನು ಗಳಿಸಿ 10ನೇ ರ‍್ಯಾಂಕ್ ಪಡೆದು ತಮ್ಮ ಒಟ್ಟು ಅಂಕಗಳನ್ನು ಮಾತ್ರವಲ್ಲದೆ ರ‍್ಯಾಂಕ್‌ಗಳನ್ನು ಉತ್ತಮಗೊಳಿಸಿದ್ದಾರೆ.
ಉಳಿದಂತೆ ಪ್ರೀತಮ್ ಪಾಟೀಲ್ 615, ಅಭಿಜ್ಞಾ ಪಿ 615, ಅಪ್ರಮೇಯ ರಂಗನ್ 613, ಪ್ರಾನ್ವಿ 612, ಅದಿತಿ ಅಡಪಾ 610, ಆಶಿಶ್ ಎಸ್ ಪಿ 609, ಪ್ರಿಯಾ ಎಸ್ ಕೆ 608, ರಾಮ ಅಪ್ರಮೇಯ 608, ಅರ್ಹನ್ ಬೆನ್ನಾಡಿ 608, ಸೂರ್ಯ ಜಿ ಪಿ 607, ಬಲರಾಮ್ 600 ಮತ್ತು ರೀನಲ್ 600 ಅಂಕಗಳನ್ನು ಗಳಿಸಿದ್ದಾರೆ. 

ರ‍್ಯಾಂಕ್ ಗಳಿಸಿದ ಎಲ್ಲಾ 14 ವಿದ್ಯಾರ್ಥಿಗಳು ಮತ್ತು ಮರುಮೌಲ್ಯಮಾಪನದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್, ಉಪ ಮುಖ್ಯಶಿಕ್ಷಕ ಜಯಶೀಲ್ ಮತ್ತು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Post a Comment

0 Comments