ಬೆದ್ರ ಉತ್ಸವ: ಡಾ.ಎಂ ಮೋಹನ ಆಳ್ವ,.ಎಂ.ಎನ್. ರಾಜೇಂದ್ರ ಕುಮಾರ್, ಕಿಶೋರ್ ಆಳ್ವ 'ಬೆದ್ರ ಮಾಣಿಕ್ಯ' ಪ್ರಶಸ್ತಿ ಪ್ರದಾನ

ಜಾಹೀರಾತು/Advertisment
ಜಾಹೀರಾತು/Advertisment

 ಬೆದ್ರ ಉತ್ಸವ: ಡಾ.ಎಂ ಮೋಹನ ಆಳ್ವ,.ಎಂ.ಎನ್. ರಾಜೇಂದ್ರ ಕುಮಾರ್,  ಕಿಶೋರ್ ಆಳ್ವ  'ಬೆದ್ರ ಮಾಣಿಕ್ಯ' ಪ್ರಶಸ್ತಿ ಪ್ರದಾನ 

ಮೂಡುಬಿದಿರೆ: ಬೆದ್ರ ಉತ್ಸವ ಸಮಿತಿ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಸ್ವರಾಜ್ಯ ಮೈದಾನದಲ್ಲಿ ನಡೆದ ಬೆದ್ರ ಉತ್ಸವ -2026ರ ಭಾನುವಾರ ಸಂಜೆ ನಡೆದ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ರತ್ನ ಎಂ.ಎನ್. ರಾಜೇಂದ್ರ ಕುಮಾರ್, ಅದಾನಿ ಗ್ರೂಪ್ ಅಧ್ಯಕ್ಷ (ದಕ್ಷಿಣ ಭಾರತ) ಕಿಶೋರ್ ಆಳ್ವ ಅವರಿಗೆ ಬೆದ್ರ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಮೋಹನ ಆಳ್ವ, ನನ್ನ ತಂದೆ ಮಿಜಾರು ಆನಂದ ಆಳ್ವ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಸಂತೋಷ ನೀಡಿದೆ.ಬೆದ್ರ ಉತ್ಸವ ಪ್ರಥಮ ಬಾರಿ ನಡೆಯುತ್ತಿದ್ದು, ಪ್ರತಿ ವರ್ಷ ನಡೆಯುವಂತಾಗಬೇಕು ಎಂದರು. 

  ಡಾ. ಎಂ. ಎನ್ ರಾಜೇಂದ್ರ ಕುಮಾರ್,  ಕಿಶೋರ್ ಆಳ್ವ ಮಾತನಾಡಿದರು. 

 ಮುಖ್ಯ ಅತಿಥಿ ನ್ಯಾಯವಾದಿ ಶರತ್ ಶೆಟ್ಟಿ ಮಾತನಾಡಿ ಆದಾನಿ ಸಂಸ್ಥೆಯಿಂದ ಹಲವಾರು ಮಂದಿ ನೆಲೆಯನ್ನು ಕಂಡುಕೊಂಡಿದ್ದಾರೆ. ಮೂಡುಬಿದಿರೆಯಲ್ಲೂ ಒಂದು ಸಂಸ್ಥೆಯನ್ನು ತೆರೆದು ಇಲ್ಲಿನ ಯುವಕರಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸುವಂತೆ ಕಿಶೋರ್ ಆಳ್ವ ಅವರಲ್ಲಿ ವಿಶೇಷವಾಗಿ ಕೋರಿದರು. 

ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. 


ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಹಿರಿಯ ವಕೀಲ, ಎಂ. ಸಿ. ಎಸ್ ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ವಿಶೇಷ ಕತ೯ವ್ಯಾಧಿಕಾರಿ ಚಂದ್ರಶೇಖರ ಎಂ., ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ, ಬಿಜೆಪಿ ಮಂಡಲದ ಪ್ರಧಾನ ಕಾಯ೯ದಶಿ೯ ರಂಜಿತ್ ಪೂಜಾರಿ, ಪುರಸಭೆ ಮಾಜಿ ಅಧ್ಯಕ್ಷರಾದ ಜಯಶ್ರೀ ಕೇಶವ್, ಪ್ರಸಾದ್ ಕುಮಾರ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಉದ್ಯಮಿಗಳಾದ ರಾಜೇಂದ್ರ ಕುಮಾರ್ ಜೈನ್, ಮಹೇಂದ್ರ ವಮ೯, ವಕೀಲರಾದ ಚೇತನ್ ಕುಮಾರ್ ಶೆಟ್ಟಿ, ಬೆದ್ರ ಉತ್ಸವ ಸಮಿತಿಯ ಉಪಾಧ್ಯಕ್ಷ ಸುದರ್ಶನ ಎಂ., ಸಂಚಾಲಕ ಹರೀಶ್ ದೇವಾಡಿಗ, ಕೋಶಾಧಿಕಾರಿ ನಾಗೇಶ್ ಬಂಗೇರ, ಲಕ್ಷ್ಮಣ್ ಪೂಜಾರಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.


ಸಂಜೆ 6ಕ್ಕೆ ದಿನೇಶ್ ದೇವಾಡಿಗ ಅವರಿಂದ 'ನಾದ ವೈಭವ',  ರಾತ್ರಿ 9ಕ್ಕೆ ಅನೀಶ್ ಎಸ್. ನೇತೃತ್ವದ ಎಂ. ಜೆ. ಸ್ಟೆಪ್ ಅಪ್  ತಂಡದಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಿತು.

Post a Comment

0 Comments