ಶಿಲಾ೯ಲಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ಶಿಲಾ೯ಲಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೂಡುಬಿದಿರೆ : ಧರ್ಮರತ್ನಾಕರ ಶಿರ್ಲಾಲು ರತ್ನವರ್ಮ ಪೂವಣಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಅತಿಶಯ ಕ್ಷೇತ್ರ ಶಿರ್ಲಾಲು ಭ ||ಶ್ರೀ ಅನಂತನಾಥ ಸ್ವಾಮಿ ಬಸದಿಯ ಸಭಾಭವನದಲ್ಲಿ ಉಚಿತ ಆರೋಗ್ಯ ಶಿಬಿರ ತಪಾಸಣಾ   ನಡೆಯಿತು. 

ಶಿಬಿರದಲ್ಲಿ ಆಳ್ವಾಸ್ ಹಾಸ್ಪಿಟಲ್ ನ  ಹೃದ್ರೋಗ ತಜ್ಞ ಡಾ.ದಿತೇಶ್ ಹೃದಯ ಸಂಬಂಧ ಕಾಯಿಲೆಗಳ ಮಾಹಿತಿಯನ್ನು ನೀಡಿದರು. ಸುಮಾರು 75 ಜನರಿಗೆ ಇಸಿಜಿ ಮತ್ತು 130 ಜನರಿಗೆ ಮಧುಮೇಹದ ರಕ್ತ ಪರೀಕ್ಷೆ ಮಾಡಲಾಯಿತು.

ಪ್ರಸಾದ್ ನೇತ್ರಾಲಯ ವತಿಯಿಂದ ಕಣ್ಣಿನ ಪರೀಕ್ಷೆ,  ಟ್ರಸ್ಟಿನಿಂದ 35 ಜನರಿಗೆ ಕನ್ನಡಕ ವಿತರಣೆ , 15 ಉಚಿತ ಕ್ಯಾಟರೆಕ್ಟ್ ಆಪರೇಷನಗೆ ನೋಂದಾವಣಿ ಮಾಡಲಾಯೇತು. 

ಎ.ಜೆ ಶೆಟ್ಟಿ ಡೆಂಟಲ್ ಕಾಲೇಜಿನಿಂದ ದಂತ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ವಿಶೇಷ ವಾಹನದ ಮುಖಾಂತರ ನೀಡಲಾಯಿತು. 

ಮೂಡುಬಿದಿರೆಯ ಜೈನ್ ಮೆಡಿಕಲ್ ಸೆಂಟರ್ ಹಾಸ್ಪಿಟಲ್ ನ ಇಎನ್ ಟಿ ಸರ್ಜನ್ ಡಾ.ಮಹಾವೀರ ಜೈನ್-  ಕಿವಿಯ ತಪಾಸಣೆ ಹಾಗೂ ಶ್ರವಣ ಪರೀಕ್ಷೆ,  ಜನರಲ್ ಫಿಸಿಷಿಯನ್ ಡಾ ಪ್ರಣಮ್ಯ ಜೈನ್ ಎಲ್ಲರ ವೈದಕೀಯ  ತಪಾಸಣೆ ಮಾಡಿದರರು.

ವಿನಂತಿ ರತ್ನವರ್ಮ ಪೂವಣಿ, ಮತ್ತು ದಂತ ವೈದ್ಯೆ ಡಾ.ಶ್ವೇತಾ ಪೂವಣಿ ಡೆಂಟಿಸ್ಟ್, ಅಂಡಾರು ಮಹಾವೀರ್ ಹೆಗ್ಡೆ, ಸುದರ್ಶನ್ ಅತಿಕಾರಿ,  ಅರುಣ್ ಪ್ರಸಾದ್ ಪಡಿವಾಳ್, ಜೈನ್ ಮಿಲನ್,  ಅನಂತಮತಿ ಮಹಿಳಾ ಸಂಘ, ಹಾಲು ಉತ್ಪದಕಾರ ಸಂಘ,  ಜೈನ್ ಫ್ರೆಂಡ್ಸ್ ಶಿರ್ಲಾಲು,. ಗರಡಿ ಫ್ರೆಂಡ್ಸ್ ನ ಪದಾಧಿಕಾರಿಗಳು ಈ ಸಂದಭ೯ ಉಪಸ್ಥಿತರಿದ್ದರು.

Post a Comment

0 Comments

Advertisement