ಪೊಳಲಿ ಜಾತ್ರೆಯ ಚೆಂಡು ಮೂಡುಬಿದಿರೆಯಲ್ಲಿ ಹಸ್ತಾಂತರ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಪೊಳಲಿ ಜಾತ್ರೆಯ ಚೆಂಡು ಮೂಡುಬಿದಿರೆಯಲ್ಲಿ ಹಸ್ತಾಂತರ 

ಮೂಡುಬಿದಿರೆ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಬಳಸಲಾಗುವ ಚೆಂಡನ್ನು ಕ್ಷೇತ್ರದ ಪ್ರತಿನಿಧಿಗಳಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮ
 ಗಾಂಧಿನಗರ ನಿವಾಸಿ ಪದ್ಮನಾಭ ಅವರ ಮನೆಯಂಗಳದಲ್ಲಿ ಸೋಮವಾರ ನಡೆಯಿತು. 
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯಂಗವಾಗಿ ನಡೆಯುವ ‘ಚೆಂಡು‘ ತಯಾರಾಗುವುದು ಮೂಡುಬಿದಿರೆಯ ಗಾಂಧಿನಗರದ ನಿವಾಸಿ ಪದ್ಮನಾಭ ಅವರ ಮನೆಯಲ್ಲಿ.

ನುರಿತ ಚರ್ಮಕಾರರಾಗಿರುವ ಪದ್ಮನಾಭ ಅವರು 27 ವರ್ಷಗಳಿಂದಲೂ ಕ್ಷೇತ್ರದ ಜಾತ್ರೆಗೆ ‘ಚೆಂಡು‘ತಯಾರಿಸಿಕೊಡುತ್ತ ಬಂದಿದ್ದಾರೆ. ಈ ಚೆಂಡನ್ನು ಪದ್ಮನಾಭರ ಮನೆಯಂಗಳದಲ್ಲಿರುವ ಶ್ರೀ ಮಹಮ್ಮಾಯಿ ದೇವಿಯ ಸನ್ನಿಧಿಯಲ್ಲಿ ಪೂಜಿಸಿ, ಪ್ರಾರ್ಥಿಸಿ, ಪೊಳಲಿ ಕ್ಷೇತ್ರದ ಪರವಾಗಿ ಬಂದ ಕಡಪುಕರಿಯ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಪೊಳಲಿ ತಂಡದಲ್ಲಿ ಕೃಷ್ಣಪ್ಪ ಕಲ್ಕುಡ, ಉಮೇಶ, ಪ್ರಸಾದ್ ಗಾಣಿಗ ನರಿಕೊಂಬು, ಪ್ರಕಾಶ್ ಕಲ್ಕುಡ, ಸತೀಶ್ ಹರೇಕಳ, ಲೋಕಯ್ಯ ಸಪಳಿಗ, ಗಂಗಾಧರ, ಗೋಪಾಲ , ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಇವರಿದ್ದರು.

ಪೊಳಲಿ ಕ್ಷೇತ್ರದ ಪ್ರಸಾದವನ್ನು ಪದ್ಮನಾಭ ಅವರ ತಾಯಿ ಲಿಂಗಮ್ಮ ಅವರು ಸ್ವೀಕರಿಸಿದರು.
ಪದ್ಮನಾಭ ಅವರೊಂದಿಗೆ ಚಂದ್ರಶೇಖರ, ರವಿಚಂದ್ರ, ವಿಶ್ವನಾಥ ದೇವಾಡಿಗ, ರವಿಚಂದ್ರ , ಶಿವಾನಂದ, ಲಕ್ಷ್ಮೀ ನಾರಾಯಣ, ಚುವ್ವ ಉಪಸ್ಥಿತರಿದ್ದು ಚೆಂಡನ್ನು ಪೊಳಲಿಯವರಿಗೆ ಹಸ್ತಾಂತರಿಸಿದರು.
---------------------------

ನುರಿತ ಚರ್ಮಕಾರರಾಗಿರುವ ಪದ್ಮನಾಭ ಅವರು ಕಳೆದ 48 ವರ್ಷಗಳಿಂದಲೂ ಮೂಡುಬಿದಿರೆ, ಪುತ್ತಿಗೆ, ಸಾಣೂರು, ಬೆಳುವಾಯಿ, ಕೋಟೆಬಾಗಿಲು, ರಾಯಿ, ಮುಚ್ಚೂರು, ಅಮ್ಟಾಡಿ, ಮಲ್ಲೂರು, ಬಂಟ್ವಾಳ, ಕಾರ್ಕಳ, ವಾಮಂಜೂರು ಮೊದಲಾದ 29 ಕ್ಷೇತ್ರಗಳಿಗೆ ಚರ್ಮದ ಚೆಂಡು ತಯಾರಿಸಿ ಕೊಡುತ್ತಿದ್ದಾರೆ.
ಕಳೆದ 35 ವರ್ಷಗಳಿಂದಲೂ ಮೂಡುಬಿದಿರೆಯ ಎಂಸಿಎಸ್ ಸೊಸೈಟಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತ ಬಂದಿರುವ ಪದ್ಮನಾಭ ಅವರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಯಕ್ಷಗಾನೀಯ ಮೊಸರುಕುಡಿಕೆ ಉತ್ಸವದಲ್ಲಿ ಸ್ವಯಂಸೇವಕನಾಗಿ ಸಕ್ರಿಯರು. ತಮ್ಮ ಮನೆಯಂಗಳದಲ್ಲಿ ಶ್ರೀ ಮಹಮ್ಮಾಯಿ ಮತ್ತು ಶ್ರೀ ವ್ಯಾಘ್ರ ಚಾಮುಂಡಿ ದೈವಗಳನ್ನುಅವರು ವಿಶೇಷವಾಗಿ ಆರಾಧಿಸಿಕೊಂಡು ಬರುತ್ತಿದ್ದಾರೆ.
________________

Post a Comment

0 Comments

Advertisement