ಕರಾವಳಿಯ ಕಂಬಳ ರಾಷ್ಟ್ರಾದ್ಯಂತ ನಡೆಯಲಿ : ಡಿ. ಕೆ ಸುರೇಶ್

ಜಾಹೀರಾತು/Advertisment
ಜಾಹೀರಾತು/Advertisment
ಕರಾವಳಿಯ ಕಂಬಳ ರಾಷ್ಟ್ರಾದ್ಯಂತ ನಡೆಯಲಿ : ಡಿ. ಕೆ ಸುರೇಶ್
ಮೂಡುಬಿದಿರೆ : ನಗರೀಕರಣವಾಗುತ್ತಿರುವ ಸಂದರ್ಭದಲ್ಲಿ ಕೃಷಿಕರ ಜೀವನಾಡಿ ಕಂಬಳ ಸಂಸ್ಕೃತಿಯನ್ನು ಉಳಿಸಲು ಯುವಕರು ಮುಂದೆ ಬರಬೇಕು. ಕರಾವಳಿಯಲ್ಲಿ ಕಂಬಳಗಳು ವೈವಿದ್ಯಮಯವಾಗಿ ನಡೆಯುತ್ತಿದ್ದು, ಇದು ರಾಷ್ಟ್ರಾದ್ಯಂತ ನಡೆಯಲಿ ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹಾರೈಸಿದರು.
ಅವರು ಮೂಳೂರು - ಅಡ್ಡೂರು ಜೋಡುಕೆರೆ ಕಂಬಳ ಸಮಿತಿಯ ವತಿಯಿಂದ ಕೆಪಿಸಿಸಿ ಪ್ರಧಾನ ಕಾರಗಯದರ್ಶಿ ಇನಾಯತ್ ಅಲಿ‌ ನೇತೃತ್ವದಲ್ಲಿ ಗುರುಪುರ ಮಾಣಿಬೆಟ್ಟು ಗುತ್ತಿನ ಎದುರಿನ ಗದ್ದೆಯಲ್ಲಿ ನಡೆದ 3ನೇ ವರ್ಷದ ಗುರುಪುರ ಕಂಬಳದಲ್ಲಿ ಶನಿವಾರ ಸಂಜೆ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 ಇನಾಯತ್ ಅಲಿ ಅವರು ಜ್ಯಾತ್ಯತೀತದ ಸಂಕೇತ. ನಮ್ಮ‌ ಸಂಸ್ಕೃತಿ, ಪರಂಪರೆ, ಧಾರ್ಮಿಕತೆ ಉಳಿಸುವ ಕೆಲಸನ್ನು ಇನಾಯತ್ ಅವರಿಂದ ನಡೆಯುತ್ತಿದೆ. ಅವರಿಗೆ ಶಕ್ತಿ ನೀಡುವ ಉದ್ದೇಶದಿಂದ ಗುರುಪುರ ಕಂಬಳದಲ್ಲಿ ಭಾಗವಹಿಸಿದ್ದೇನೆ ಎಂದರು.
 ವಿಧಾನ ಸಭಾಧ್ಯಕ್ಷ ಯು.ಟಿ.‌ ಖಾದರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವೈವಿದ್ಯಮಯ ಗುರುಪುರ ಕಂಬಳದಲ್ಲಿ ಭಾಗವಹಿಸಲು ಅತ್ಯಂತ ಸಂತೋಷವಾಗುತ್ತಿದೆ. ಕರಾವಳಿಯ ಜಾನಪದ ಕ್ರೀಡೆ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಬಹುದು ಎಂದು ಇನಾಯತ್ ಅಲಿ ತೋರಿಸಿಕೊಟ್ಟಿದ್ದಾರೆ ಅವರಿಗೆ ಶುಭವಾಗಲಿ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದ ಗುರುಪುರ ಕಂಬಳ ಸಮಿತಿಯ ಅಧ್ಯಕ್ಷ ಇನಾಯತ್ ಅಲಿ ಅವರು, ಕಂಬಳ ತುಳುನಾಡಿನ ಸಂಸ್ಕೃತಿಯಾಗಿದ್ದು, ಕೃಷಿಕರ ಸ್ವಾಭಿಮಾನದ ಪ್ರತೀಕ. ಸರ್ವ ಧರ್ಮಗಳ ಸಂಗಮವಾಗಿರುವ ಗುರುಪುರದಲ್ಲಿ ಕಂಬಳ ನಡೆಯುತ್ತಿರುವುದು ಜಿಲ್ಲೆಗೆ ಹೆಮ್ಮೆ‌ಎಂದರು. ಕನಕಪುರದ ಬಂಡೆಯಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಅವರ ಸಹೋದರ ಡಿ.ಕೆ. ಸುರೇಶ್ ಬಂಡೆಯನ್ನು ಹೊತ್ತುನಿಂತ ಬೆಟ್ಟ ಎಂದ ಅವರು, ನಮ್ಮ ಗುರುಪುರ ಕಂಬಳ ಇನ್ನೂ ಅದ್ಧೂರಿಯಾಗಿ ನಡೆಸಲು ಆಶೀರ್ವದಿಸಬೇಕೆಂದು ನುಡಿದರು.

ಇದೇ ವೇಳೆ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ರಾಜ್ಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಚಿನ್ನದ ನೊಗ, ಬೆಳ್ಳಿಯ ಬಾರುಕೋಲು ನೀಡಿ ಸನ್ಮಾನಿಸಲಾಯಿತು. 

ಇದೇ ವೇಳೆ 100 ಆರ್ಥಿಕ ಅಶಕ್ತ ಕುಟುಂಬಗಳಿಗೆ ತಲಾ 25 ಸಾವಿರ ರೂ. ಯಂತೆ ಮದುವೆ ಸಹಾಯಾರ್ಥ ಸಹಾಯಧನ ವಿತರಿಸಲಾಯಿತು.
ಸಮಾರಂಭದಲ್ಲಿ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.‌ ಪೂಜಾರಿ ಮಾಜಿ ಸಚಿವ ಅಭಯಚಂದ್ರ ಜೈನ್, ಕರ್ನಾಟಕ ಪರಿಸರ ಅಭಿವೃದ್ಧಿ‌ಮಂಡಳಿಯ ಅಧಗಯಕ್ಷೆ ಶಾಲೆಟ್ ಪಿಂಟೊ, ರಾಜ್ಯ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಶಿವರಾಮ ಶೆಟ್ಟಿ ತಲ್ಲೂರು, ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಜಗದೀಶ್ ಅಧಿಕಾರಿ, ಕೀರ್ತಿ ಗಣೇಶ್, ಬಿ.ಎಲ್. ಪದ್ಮನಾಭ, ಆರ್. ಕೆ. ಪೃಥ್ವಿರಾಜ್, ಜಗದೀಶ್ ಶೆಟ್ಟಿ, ಮೋಹನ್ ಕೋಟ್ಯಾನ್ ಮುಲ್ಕಿ, ರಿಯಾಝ್ ಸುಲ್ತಾನ್ ಗೋಲ್ಡ್ , ಮುನಿಯಾಲು ಉದಯಕುಮಾರ್ ಶೆಟ್ಟಿ, ಪವರ್ ಟಿವಿಯ ರಾಕೇಶ್ ಶೆಟ್ಟಿ, ಕಂಬಳ ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್ ಪೆಲತ್ತಡಿ, ಪ್ರಧಾನ ಕಾರ್ಯದರ್ಶಿ ಯಶವಂತ್ ಕುಮಾರ್ ಶೆಟ್ಟಿ ಬೆಳ್ಳೂರು ಗುತ್ತು, ಸ್ಥಾಪಕಾಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ತಿರುವೈಲು ಗುತ್ತು, ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ಮಾಣಿಬೆಟ್ಟುಗುತ್ತು, ವ್ಯವಸ್ಥಾಪಕರಾದ ವಿನಯಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು, ಪ್ರಧಾ‌ನ ಸಚಾಲಕರಾದ ಸುರೇಂದ್ರಕಂಬಳಿ, ಜಯಶೀಲ ಅಡ್ಯಂತಾಯ, ಗಿರೀಶ್ ಆಳ್ವ, ಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು, ಕೋಶಾಧಿಕಾರಿ ಹರೀಶ್ ಭಂಡಾರಿ, ಜೊತೆ ಕಾರ್ಯದರ್ಶಿಗಳಾದ ಬಾಲಕೃಷ್ಣ ಪೂಜಾರಿ ಬರಿಪಟ್ಲ, ಪುರುಶೋತ್ತಮ‌ ಮಲ್ಲಿ ದೋಣಿಂಜೆಗುತ್ತು ಮೊದಲಾದವರು ಉಪಸ್ಥಿತರಿದ್ದರು.
---------=-------
ಮೈಸೂರಿನಲ್ಲಿ ಶೀಘ್ರ ಕಂಬಳ:

ತುಳು ನಾಡಿನ ಸಂಸ್ಕೃತಿ ದೇಶಕ್ಕೆ ಕಲಶವಾಗಿದ್ದು, 
ಮೈಸೂರಿನಲ್ಲಿ ಕಂಬಳ ಆರಂಭಿಸುವ ಕೆಲಸ ನಡೆಯುತ್ತಿದೆ. ಕಲೆ, ಕ್ರೀಡೆ, ಧಾರ್ಮಿಕ ಪದ್ಧತಿಯಾಗಿರುವ ಕಂಬಳ ಸದ್ಯದಲ್ಲೇ ರಾಜ್ಯಾದ್ಯಂತ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಕಂಬಳವು ಐಪಿಎಲ್ ಮಾದರಿಯಲ್ಲಿ ನಡೆಯಬೇಕು ಈ ಮೂಲಕ ಗ್ರಾಮೀಣ ಆಚರಣೆಗಳು ಉಳಿಸಬೇಕು. ಎಲ್ಲರೂ ಕೃಷಿಕರ ನಂದಿನಿ ಉಲ್ಪನ್ನಗಳನ್ನು ಬಳಸಬೇಕು.

-ಡಿ.ಕೆ.‌ಸುರೇಶ್ 
ಅಧ್ಯಕ್ಷರು, ಬಮೂಲ್ ಬೆಂಗಳೂರು
___________

Post a Comment

0 Comments